ಕಾಗವಾಡ:ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದ ಸಣ್ಣ ನೀರಾವರಿ ಸಚೀವ ಮಾಧುಸ್ವಾಮಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದ ಹೊಸ ಕೆರೆ ನಿರ್ಮಾಣ ಯೋಜನೆ ಹಾಗೂ ಯಲ್ಲಮ್ಮವಾಡಿ ಕೆರೆ ಸೇರಿದಂತೆ ಎಂಟು ಇತರೆ ಕೆರೆಗಳಿಗೆ ಝಂಜರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ಸಚೀವ ಮಾಧವಸ್ವಾಮಿ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಈ ವೇಳೆ ಬಾಡಗಿ ಗ್ರಾಮದ ಹೊರವಲಯದಲ್ಲಿ ನಡೆದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ
ಕೆರೆ ತುಂಬುವ ಯೋಜನೆ ಪ್ರಾಸ್ತಾವಿಕ ಮಾತನಾಡಿದ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ.

ಪೂರ್ವ ಭಾಗದ ಎಳೆಂಟು ಕೆರೆಗಳಿಗೆ ನಿರು ತುಂಬುವ 140 ಕೋಟಿ ಯೋಜನೆಯ ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡುತ್ತ

ರಾಜ್ಯದ ಚಿತ್ತ ಮಾಧುಸ್ವಾಮಿಯತ್ತ ಎನ್ನುವಂತೆ ಇದ್ದಾರೆ. ಸಂಸದೀಯ ಪಟು ತಮ್ಮ ಕೆಲಸದ ಒತ್ತಡದ ನಡುವೆ ನಮ್ಮ ವಿನಂತಿಗೆ ಗೌರವ ಕೊಟ್ಟು ಬಹುದಿನಗಳ ಬೇಡಿಕೆ ಈಡೇರಿಸುತ್ತಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಇದ್ದ ಸಮಯದಲ್ಲಿ ಮಾಧುಸ್ವಾಮಿ ಅವರು ಸಣ್ಣನೀರಾವರಿ ಮತ್ತು ಸಂಸದೀಯ ಸಚೀವರಾಗಿದ್ದ ಸಮಯದಲ್ಲಿ ಭೋವಿ ಸಮಾಜದ ಜಮೀನಿಗೆ ನೀರಿಲ್ಲದೆ ಕೃಷಿ ವಂಚಿತರಾದ ವಿಷಯ ತಿಳಿಸಿದ್ದೆ.

ಅವರ ಜೊತೆಗೆ 600 ಎಕರೆ ಜಮೀನಿಗೆ 22 ಕೋಟಿ ಅಂದಾಜು ವೆಚ್ಚ ಇತ್ತು.

ಅದನ್ನು ಹಣಕಾಸು ಇಲಾಖೆಗೆ ತಿಳಿಸಿ ಮಂಜುರಾತಿ ಮಾಡಿಕೊಟ್ಟಿದ್ದರು.

ಆದರೆ ಅವರ ಖಾತೆ ಬದಲಿ ಆಯಿತು ಈಗ ಮತ್ತೆ ಅವರೇ ಸಚಿವರಾಗಿ ಬಂದಿರುವದು ದೈವದ ಇಚ್ಚೆಯಿಂದ ಎಂದರು.

ಈ ವೇಳೆ ಮಾತನಾಡಿದ ಅವರು ಕರಿಮಸೂತಿ ಯಾತ ನೀರಾವರಿ ಯೋಜನೆಯಿಂದ ವಂಚಿತವಾದ ಈ ಕೆರೆಗಳನ್ನು ತುಂಬಿಸುವ ವಿಚಾರ ಬಹುದಿನಗಳಿಂದ ಇತ್ತು.

ಪಕ್ಕದ ಮತಕ್ಷೇತ್ರದ ನೀರಾವರಿ ಯೋಜನೆ ಮಂಜೂರು ಮಾಡಲು ನಬಾರ್ಡಗೆ ಕಳಿಸಿದ್ದರು ಆಗ ಯೋಜನೆಗೆ ಹಿನಗನಡೆಯಾಗಿತ್ತು ಆದರೆ ದೇವರ ಇಚ್ಚೆಯಿಂದ ನಮ್ಮ ಸರ್ಕಾರ ಬಂದ ಸಮಯದಲ್ಲಿ ಈ ಯೋಜನೆಯ ಡ್ರಾಪಟ್ ಅನ್ನು ಹದಿನೈದು ದಿನಗಳಲ್ಲಿ ಮಾಡಿಕೊಟ್ಟ ಅಧಿಕಾರಿಗಳಿಗೆ ಈ ಸಮಯದಲ್ಲಿ ಧನ್ಯವಾದ ಹೇಳುತ್ತೇನೆ.

ರಾಷ್ಟ್ರಪತಿ ಅವರ ಮತದಾನ ಹಿನ್ನೆಲೆಯಲ್ಲಿ ಕಾಗವಾಡ ಮತ್ತು ಅಥಣಿ ಶಾಸಕರು ಬರಲಾಗಿಲ್ಲ.ಆದರೆ ಸಮಯ ಹೊಂದಿಸಿಕೊಂಡ ಸಚೀವರು ಈ ಕಾರ್ಯಕ್ರಮ ನೆರವೇರಿಸಿದ್ದು ರೈತರ ಕನಸು ನನಸಾಗಿಸುತ್ತಿದೆ.
ಬರುವ ಮೂರು ತಿಂಗಳಲ್ಲಿ ಜನಪರ ಕೆಲಸಗಳನ್ನು ಮಾಡಲಿದ್ದೇನೆ.ಆದರೆ ರಾಜಕೀಯಕ್ಕಾಗಿ ಅಲ್ಲ ಜನರ ಒಳಿತಿಗಾಗಿ ಮತ್ತು ನಮ್ಮ ಸರ್ಕಾರದ ಅವಧಿಯಲ್ಲಿ ಹಾಕಿಕೊಂಡ ಯೋಜನೆಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತೇನೆ ಎಂದರು.

ಈ ವೇಳೆ ಮಾತನಾಡಿದ ಸಚೀವ ಮಾಧುಸ್ವಾಮಿ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸಚೀವರು ಶಾಸಕರು ಬೆಂಗಳೂರು ತೊರೆಯದಂತೆ ಪಕ್ಷದ ಸೂಚನೆ ಇದೆ.ಆದರೂ ನಾನು ಮಾತು ಕೊಟ್ಟಿದ್ದೆ ಬಂದಿದ್ದೇನೆ.ಹಿಂದೊಮ್ಮೆ ಇಲ್ಲಿ ಬರಬೇಕಾದ ಸಮಯದಲ್ಲಿ ಖಾತೆ ಬದಲಾವಣೆ ಆಗಿದ್ದರಿಂದ ಬರಲಾಗಿರಲಿಲ್ಲ ನಾನು ಹಳ್ಳಿಯಿಂದ ಬಂದವನು ನಮ್ಮನ್ನು ಬಿ ರಾಜಕೀಯಕ್ಕೆ ತಂದವರಿಗೆ ಉಪಕಾರ ತೀರಿಸಲು ನಾನು ಇದೇ ಖಾತೆಗೆ ಪಟ್ಟು ಹಿಡಿದಿದ್ದೆ.ರೈತರ ಮತ್ತು ಜನರಿಗೆ ಅವರ ಪರ ಕೆಲಸ ಮಾಡಲು ಇಂತಹ ಖಾತೆ ಅಗತ್ಯ ಇದೆ ಇದರಿಂದ ನನಗೆ ಸಂತೃಪ್ತಿ ಇದೆ ಪ್ರವಾಹ ಸಮಯದಲ್ಲಿ ಬಂದಾಗ ದೀಪದ ಸುತ್ತಲಿನ ಕತ್ತಲು ಸರೆಸುವಂತೆ ಬ ಅಧಿಕಾರಿಗಳಿಗೆ ತಿಳಿಸಿದ್ದೆ.ನಿಪ್ಪಾಣಿ ಇಂದ ಹಿಡಿದು ರಾಜ್ಯದ ಹಲವೆಡೆ ಒತ್ತು ಕೊಟ್ಟು ಕೆಲಸ ಮಾಡಿದ್ದೇವೆ.ಕೃಷ್ಣಾ ನದಿ ನೀರು ಬರಿ ವ್ಯಾಜ್ಯವಾಗಿ ಉಳಿಯದಂತೆ ಕರ್ನಾಟಕದಲ್ಲಿ ಹಲವು ಕಡೆಗೆ ಅನಗತ್ಯವಾಗಿ ಹರಿದು ಹೋಗುವದನ್ನು ತಪ್ಪಿಸಿ ಕೆರೆ ತುಂಬುವ ಯೋಜನೆ ಅಸ್ತಿತ್ವಕ್ಕೆ ತರುವ ಪ್ರಯತ್ನ ಮಾಡಿದ ಫಲವಾಗಿ ಇಂದು ಈ ಕಾರ್ಯಕ್ರಮ ನೆರವೆರುತ್ತಿದೆ.ಕಳೆದ ಎರಡು ಮೂರು ವರ್ಷಗಳಿಂದ
ಪ್ರವಾಹ ಮತ್ತು ಕೋವಿಡ್ ಸಮಯದಲ್ಲಿ ಜನರಿಗೆ ತೀವ್ರ ತೊಂದರೆ ಉಂಟಾಗಿತ್ತು.ಒಂದುಕಡೆ ವರಮಾನ ಇಲ್ಲದ ಸಮಯದಲ್ಲಿ ಕೂಡ ಶಕ್ತಿ ಮೀರಿ ಜನಪರ ಕೆಲಸಗಳನ್ನು ಮಾಡಲಾಗುತ್ತಿದೆ ಬೆಳಗಾವಿ ಬಳ್ಳಾರಿ ಚಾಮರಾಜನಗರ ಚಿತ್ರದುರ್ಗ ಸೇರಿದಂತೆ ಹಲವು ಕಡೆ ನೀರಾವರಿ ಯೋಜನೆಳನ್ನು ಮಾಡುತ್ತಿದ್ದೇವೆ.

ಅಂತರ್ಜಲ ಹೆಚ್ಚಿಸಿ ರೈತರಿಗೆ ಮತ್ತು ಹಳ್ಳಿಯ ಜನರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆಲಸ ನೀರ್ವಹಿಸಲಾಗುತ್ತಿದೆ ಎಂದರು.

ಬೆಂಗಳೂರು ಹದಿನೆಂಟು ಟಿ ಎಮ್ ಸಿ ಮತ್ತು ಕೋಲಾರದ ಆರು ಟಿಎಮ್ ಸಿ ಕೊಳಚೆ ನೀರು ಶುದ್ದಿಕರಿಸಿ ಮರುಬಳಕೆ ಮಾಡಲು ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಕೆಲ ದಿನಗಳಲ್ಲಿ ಆರಂಭವಾಗಲಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಹಣ ವಾಪಸ್ ಎಸೆದ ಪ್ರಕರಣ..

Sat Jul 16 , 2022
ಸಿದ್ದರಾಮಯ್ಯ ಹಣ ವಾಪಸ್ ಎಸೆದ ಪ್ರಕರಣ.. ಇದರ ಹಿಂದೆ ಎಸ್ ಡಿ ಪಿ ಐ ಪಕ್ಷದ ಕೈವಾಡವಿದೆ.. ಹುನಗುಂದ ಮಾಜಿ ಶಾಸಕ ವಿಜಯಾನಂದ‌ ಕಾಶಪ್ಪನವರ ಹೇಳಿಕೆ… ನಾನು ಸ್ವತಃ ಎಸ್ ಡಿಪಿಐ ವ್ಯಕ್ತಿಯನ್ನು ನಿನ್ನೆ ಅಲ್ಲಿ ನೋಡಿದ್ದೇನೆ.. ನಾನು ಸಿದ್ದರಾಮಯ್ಯ ಜೊತೆಗೆ ಇದ್ದೆ.. ಸಿದ್ದರಾಮಯ್ಯ ಕೊಟ್ಟ ಹಣವನ್ನು ಎಸ್ ಡಿಪಿ ಐ ಮುಖಂಡ ಎಸೆಯೋಕೆ ಹೇಳಿದ್ದ.. ಆತನೆ ಹಣ ಎಸೆಯೋದಕ್ಕೆ ಪ್ರೇರಣೆ ನೀಡಿದ್ದಾನೆ.. ಗಾಯಾಳುಗಳು ಸಿದ್ದರಾಮಯ್ಯ ಮುಂದೆ ತಮ್ಮ ನೋವನ್ನೆಲ್ಲ […]

Advertisement

Wordpress Social Share Plugin powered by Ultimatelysocial