ಕರಾವಳಿ ಕರ್ನಾಟಕ, ಮಲೆನಾಡಿಗಾಗಿ ಕಾಂಗ್ರೆಸ್’ನಿಂದ ಪ್ರತ್ಯೇಕ ಪ್ರಣಾಳಿಕೆ: ಡಿಕೆ.ಶಿವಕುಮಾರ್

 

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 14 ತಿಂಗಳುಬಾಕಿ ಇರುವಾಗಲೇ ಪ್ರತಿಪಕ್ಷ ಕಾಂಗ್ರೆಸ್ ತನ್ನ ಪ್ರಣಾಳಿಕೆ ಕೆಲಸವನ್ನು ಆರಂಭಿಸಿದೆ. ಇತರ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರಾವಳಿ ಕರ್ನಾಟಕ ಮತ್ತು ಮಲೆನಾಡಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಹೊರತರುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕುರಿತ ಕೆಲಸ ಪ್ರಾರಂಭಿಸುವಂತೆ ಕೆಲವರಿಗೆ ಸೂಚನೆ ನೀಡಲಾಗಿದೆ. ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸಲಾಗುವುದು. ರಾಜ್ಯದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳಿದ್ದು, ಇಲ್ಲಿಂದ ಜನರು ಕೆಲಸ ಅರಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಗಿಲ್ಲ ಎಂದು ಹೇಳಿದರು.ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಇತ್ತೀಚೆಗೆ ಗೋವಾಕ್ಕೆ ಭೇಟಿ ನೀಡಿದ್ದಾಗ, ಆ ರಾಜ್ಯಕ್ಕೆ ವಲಸೆ ಬಂದ ಕರ್ನಾಟಕದ ಅನೇಕ ಜನರು ಅವಕಾಶ ಸಿಕ್ಕರೆ ಕರ್ನಾಟಕದಲ್ಲಿಯೇ ಉಳಿದು ಕೆಲಸ ಮಾಡಲು ಬಯಸುತ್ತೇವೆಂದು ತಿಳಿಸಿದರು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ELECTRIC:ಎಲೆಕ್ಟ್ರಿಕ್ ಟೂ-ವೀಲರ್ ಚಾರ್ಜರ್ಗಳ ವಿಧಗಳು;

Sat Feb 5 , 2022
ಬಳಕೆದಾರರಿಗೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ಚಾರ್ಜ್ ಮಾಡಲು ಅದೇ ಕುರಿತು ಮಾಹಿತಿಯು ನಿರ್ಣಾಯಕವಾಗಿದೆ ಮತ್ತು ವಿವಿಧ ಪ್ರಕಾರಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ಅವುಗಳನ್ನು ವಿಶಾಲವಾಗಿ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ: ನಿಧಾನ ಅಥವಾ ಪ್ರಮಾಣಿತ ಚಾರ್ಜರ್ ಪ್ರಕಾರ ಮತ್ತು ವೇಗದ ಚಾರ್ಜರ್ ಪ್ರಕಾರ. ನಿಧಾನ/ಪ್ರಮಾಣಿತ ಚಾರ್ಜರ್ ಈ ವಿಧದ ಚಾರ್ಜರ್ EV ಗಳ ಬ್ಯಾಟರಿ ಪ್ಯಾಕ್‌ಗಳನ್ನು ಶಕ್ತಿಯುತಗೊಳಿಸಲು AC ಕರೆಂಟ್ ಅನ್ನು ಬಳಸುತ್ತದೆ […]

Advertisement

Wordpress Social Share Plugin powered by Ultimatelysocial