ಕರಾವಳಿಯಿಂದ ರಾಮದುರ್ಗ ಪಟ್ಟಣಕ್ಕೆ ಕಾಲಿಟ್ಟ ಹಿಜಾಬ್ ವಿವಾದ

ರಾಮದುರ್ಗ: ಪಟ್ಟಣದ ಈರಮ್ಮ ಶಿ. ಯಾದವಾಡ ಸರಕಾರಿ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದು, ಕರಾವಳಿಗೆ ಸೀಮಿತವಾದ ಹಿಜಾಬ್ ವಿವಾದ ಈಗ ತಾಲೂಕು ಮಟ್ಟಕ್ಕೆ ವ್ಯಾಪಿಸುತ್ತಿರುವುದು ಆತಂಕದ ಸಂಗತಿಯಾಗಿದೆ.ಸ್ಥಳೀಯ ಈರಮ್ಮ ಶಿ.ಯಾದವಾಡ ಸರಕಾರಿ ಪ್ರಥಮ ದರ್ಜೆಯ ಕಾಲೇಜಿಗೆ ಕಳೆದ ಬುಧವಾರ ಕೇಸರಿ ಶಾಲು ಧರಿಸಿದ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ ಸುದ್ದಿ ತಿಳಿದ ಪಿ.ಎಸ್.ಐ ಎಸ್.ಎಂ.ಕಾರಜೋಳ ಅವರು ಕಾಲೇಜಿಗೆ ಆಗಮಿಸಿ ಪ್ರಾಚಾರ್ಯ ಕೊಠಡಿಗೆ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಕರೆಯಿಸಿ ಬುದ್ದಿವಾದ ಹೇಳಿ ಅವರ ಮನವೊಲಿಸಿ ಶಾಲು ತೆಗೆಸಿದ್ದಾರೆಂದು ತಿಳಿದುಬಂದಿದೆ.ಹನುಮ ಮಾಲೆ ಧರಿಸಿದ್ದರಿಂದ 108 ದಿನ ವೃತ ಮಾಡಲಾಗುತ್ತಿದ್ದು, ಅದಕ್ಕಾಗಿ ಕೇಸರಿ ಶಾಲು ಧರಿಸಿದ್ದೇವೆ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಶಾಲು ಧರಿಸದೇ ಕಾಲೇಜಿಗೆ ಬರುವುದಾದರೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವವರಿಗೆ ಏಕೆ ಅವಕಾಶ ಕೊಟ್ಟಿದ್ದೀರಿ ಎಂದು ಕೆಲ ವಿದ್ಯಾರ್ಥಿಗಳು ಪ್ರಾಚಾರ್ಯರನ್ನು ಹಾಗೂ ಪೊಲೀಸರನ್ನು ಪ್ರಶ್ನಿಸಿದರೆಂದು ಹೇಳಲಾಗುತ್ತಿದೆ.ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ನಿಮ್ಮ ಗುರಿಯಾಗಬೇಕು. ಕಲಿಯುವ ವಯಸ್ಸಿನಲ್ಲಿ ಧರ್ಮದ ವಿಚಾರವನ್ನು ಕಾಲೇಜಿನ ಆವರಣಕ್ಕೆ ತರುವುದು ಒಳ್ಳೇಯದಲ್ಲ. ಧರ್ಮದ ಬಗ್ಗೆ ಮಠಮಂದಿರ, ಮಸೀದಿ, ಚರ್ಚುಗಳಿವೆ ಮಾತ್ರ ಸೀಮಿತವಾಗಬೇಕು. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಪೊಲೀಸರು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಕಳಿಸಿದ್ದರಿಂದ ವಿವಾದ ಸುಖಾಂತ್ಯ ಕಂಡಿದೆಇತ್ತಿಚಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ಇರದಿದ್ದರೂ ಬೈಕ್ ಮೇಲೆ ಕಾಲೇಜು ಕ್ಯಾಂಪಸ್‌ಗೆ ಬರುತ್ತಿದ್ದಾರೆ. ಪಟ್ಟಣದಿಂದ ಹೊರವಲಯದಲ್ಲಿ ಕಾಲೇಜು ಇರುವುದರಿಂದ ಪಡ್ಡೆ ಹುಡುಗರ ಕಾಟ ಹೆಚ್ಚುತ್ತಿದೆ. ಹಾಗಾಗಿ ಕಾಲೇಜು ಅವಧಿಯಲ್ಲಿ ಪೊಲೀಸ್ ಬೀಟ್ ಹಾಕಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಬೇಟಿ ಬಚಾವೋ ಜಿಲ್ಲಾ ಪ್ರಮುಖ ಚಂದ್ರಕಾಂತ ಹೊಸಮನಿ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಯುಪಿ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ತರಗತಿಗಳ ಪುನರಾರಂಭದ ಕುರಿತು ಇನ್‌ಪುಟ್‌ಗಳನ್ನು ಸಂಗ್ರಹಿಸಿ'

Sat Feb 5 , 2022
  ಫೆಬ್ರವರಿ 7 ರಿಂದ (ಸೋಮವಾರ) ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಹಿರಿಯ ಅಧಿಕಾರಿಗಳು ನೇರ ಉತ್ತರವನ್ನು ತಪ್ಪಿಸಿದರೆ, ಮಾಧ್ಯಮಿಕ ಶಿಕ್ಷಣ ಇಲಾಖೆಯು ಪತ್ರದಲ್ಲಿ ವಿಭಾಗೀಯ ಜಂಟಿ ಶಿಕ್ಷಣ ನಿರ್ದೇಶಕರಿಗೆ ಶಾಲೆಗಳಲ್ಲಿ ದೈಹಿಕ ತರಗತಿಗಳನ್ನು ಪುನರಾರಂಭಿಸುವ ಕುರಿತು ಎಲ್ಲಾ ಮಧ್ಯಸ್ಥಗಾರರಿಂದ ಒಳಹರಿವುಗಳನ್ನು ಸಂಗ್ರಹಿಸಲು ಕೇಳಿದೆ. ಪೋಷಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು, ಮತ್ತು ಪ್ರೌಢ ಶಿಕ್ಷಣ ಮಂಡಳಿ, ಪ್ರಯಾಗ್ರಾಜ್, ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್‌ಗಳ (DIoS) ಸಹಾಯದಿಂದ ಅವರ ಅಭಿಪ್ರಾಯಗಳನ್ನು ತಿಳಿಸಿ. ಫೆಬ್ರವರಿ […]

Advertisement

Wordpress Social Share Plugin powered by Ultimatelysocial