ದಿಢೀರ್‌ 27 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಅಕ್ಟೋಬರ್; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ. 27 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ಸೋಮವಾರ ಕರ್ನಾಟಕ ಸರ್ಕಾರ 27 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ.ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾಗಿ ಉಮಾಶಂಕರ್ ಬದಲು ಸೆಲ್ವಕುಮಾರ್ ನೇಮಕ ಮಾಡಲಾಗಿದೆ.ರಾಯಚೂರು ಜಿಲ್ಲಾಧಿಕಾರಿ ಬಿ. ಸಿ. ಸತೀಶ ವರ್ಗಾವಣೆಗೊಂಡಿದ್ದು, ಕೊಡಗು ಜಿಲ್ಲಾಧಿಕಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಕೊಡಗು ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಸೋಮಲ್ ವರ್ಗಾವಣೆಗೊಂಡಿದ್ದಾರೆ.ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. 4 ಉಪ ಕಾರ್ಯದರ್ಶಿಗಳಿಗೆ ಸ್ಥಳ ನಿಯೋಜಿಸಿ ಆದೇಶ ನೀಡಲಾಗಿದೆ. ಸರ್ಕಾರದ ಉಪ ಕಾರ್ಯದರ್ಶಿಗಳಿಬ್ಬರ ಸೇವೆ ಹಿಂಪಡೆಯಲಾಗಿದ್ದು, ಡಿಐಪಿಎರ್‌ಗೆ ವರದಿ ಮಾಡಿಕೊಳ್ಳಲು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳು

* ಎಸ್. ಆರ್ ಉಮಾ ಶಂಕರ್ – ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ

* ಸೆಲ್ವ ಕುಮಾರ್- ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ

* ನವೀನ್ ರಾಜ್ ಸಿಂಗ್- ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ

* ಜೆ.ರವಿಶಂಕರ್- ಕಾರ್ಯದರ್ಶಿ, ವಸತಿ ಇಲಾಖೆ, ಬೆಂಗಳೂರು

* ಡಾ. ರಂದೀಪ್- ಆಯುಕ್ತರು, ಆರೋಗ್ಯ ಇಲಾಖೆ

* ಕೆ. ಬಿ. ತ್ರಿಲೋಕ ಚಂದ್ರ- ವಿಶೇಷ ಆಯುಕ್ತರು, ಬಿಬಿಎಂಪಿ

* ಕೆ. ಪಿ. ಮೋಹನ್ ರಾಜ್- ಎಂಡಿ, ಕೆಎಸ್‌ಐಐಡಿಸಿ

* ಬಿ. ಬಿ. ಕಾವೇರಿ- ಎಂಡಿ, ಕೆಎಸ್‌ಎಂಸಿಎಲ್

* ಟಿ. ಹೆಚ್. ಎಂ. ಕುಮಾರ್- ಆಯುಕ್ತರು, ಜವಳಿ ಇಲಾಖೆ

* ಪ್ರಿಯಾಂಕಾ ಮೇರಿ ಫ್ರಾನ್ಸಿಸ್- ನಿರ್ದೇಶಕರು

* ವೆಂಕಟೇಶ್ ಕುಮಾರ್- ಕಾರ್ಯದರ್ಶಿ, ಕೆಕೆಆರ್‌ಡಿಬಿ

* ಚಾರುಲತಾ ಸೋಮಲ್- ಜಿಲ್ಲಾಧಿಕಾರಿ, ರಾಯಚೂರು

* ಶಿಲ್ಪಾನಾಗ್- ಆಯುಕ್ತರು, ಪಂಚಾಯತ್ ರಾಜ್ ಇಲಾಖೆ

* ಬಿ. ಹೆಚ್. ನಾರಾಯಣ ರಾವ್- ಸಿಇಒ, ವಿಜಯನಗರ ಜಿ.ಪಂ

* ಬಿ. ಸಿ. ಸತೀಶ್‌- ಕೊಡಗು ಜಿಲ್ಲಾಧಿಕಾರಿ

* ಹೆಚ್‌. ಎನ್. ಗೋಪಾಲ ಕೃಷ್ಣ- ಎಂಡಿ, ಕೆಪಿಎಲ್‌ಸಿಎಲ್‌

* ಶಿವಾನಂದ- ಆಹಾರ ನಿಗಮದ ಎಂಡಿ

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಲ್ಲಿ ಮತ್ತೆ ಧಾರಾಕಾರ ಮಳೆ...!

Tue Oct 12 , 2021
 ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದೆ. ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.ಸೋಮವಾರ ಮಧ್ಯಾಹ್ನ 12 ಗಂಟೆ ಬಳಿಕ ನಗರದಲ್ಲಿ ಮಳೆಯಾಗಿತ್ತು. ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆ 6 ಗಂಟೆಯ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ನಗರದಲ್ಲಿ ಭಾರೀ ಮಳೆಯಾಗಿದೆ.ಹೆಬ್ಬಾಳ, ಮಲ್ಲೇಶ್ವರ, ರಾಜಾಜಿನಗರ, ಮೆಜೆಸ್ಟಿಕ್, ಕೆ. ಆರ್. ಮಾರುಕಟ್ಟೆ, ಜಯನಗರ, ಹನುಮಂತನನಗರ, ವಿದ್ಯಾಪೀಠ ವೃತ್ತ, ಆರ್. ಆರ್. ನಗರ ಸೇರಿದಂತೆ ವಿವಿಧ […]

Advertisement

Wordpress Social Share Plugin powered by Ultimatelysocial