ದೆಹಲಿಯಲ್ಲಿ ವಿದ್ಯುತ್‌ ಕೊರತೆ ಇಲ್ಲ;ವಿದ್ಯುತ್ ಪೂರೈಕೆಯ ಫ್ಯಾಕ್ಟ್​ಶೀಟ್​ ಪ್ರಕಟಿಸಿದ ಕೇಂದ್ರ ಸರ್ಕಾರ

ಆಮ್ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ದೂರು ಹೇಳುವ ಒಂದೂ ಅವಕಾಶವನ್ನು ಬಿಡುವುದಿಲ್ಲ. ಇದೀಗ ದೇಶದ ಕೆಲವು ರಾಜ್ಯಗಳಿಗೆ ಕಲ್ಲಿದ್ದಲಿನ ಪೂರೈಕೆ ಕಡಿಮೆಯಾಗಿ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ ಸಂದರ್ಭದಲ್ಲಿ ಕೇಜ್ರಿವಾಲ್ಕೂಡ ವಿದ್ಯುತ್ಉತ್ಪಾದಕ ಘಟಕಗಳಿಗೆ ಕೇಂದ್ರದಿಂದ ಕಲ್ಲಿದ್ದಲು ಪೂರೈಕೆ ಕಡಿಮೆ ಆಗಿ ದೆಹಲಿಗೆ ವಿದ್ಯುತ್ಅಭಾವ ಎದುರಾಗುವ ಚಿಂತಾಜನಕ ಸ್ಥಿತಿ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಕೇಜ್ರಿವಾಲ್ ಮಾತಿಗೆ ಪ್ರತಿಕ್ರಿಯೆ ಎಂಬಂತೆ ಕೇಂದ್ರ ಸರ್ಕಾರ ದೆಹಲಿಯ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಗಳ ಬಗೆಗಿನ ಫ್ಯಾಕ್ಟ್ಶೀಟ್ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ವಿದ್ಯುತ್ಅಭಾವವಿಲ್ಲ, ವಿದ್ಯುತ್ಪೂರೈಕೆಯಲ್ಲಿ ಕಡಿತ ಉಂಟಾಗುತ್ತಿಲ್ಲ ಎಂದಿರುವ ಸರ್ಕಾರ, ದೆಹಲಿ ವಿದ್ಯುತ್ಸರಬರಾಜು ಕಂಪೆನಿಗಳು ನಗರದ ಪೀಕ್ಬೇಡಿಕೆಗೆ ತಕ್ಕಂತೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಾ ಬಂದಿವೆ ಎಂದಿದೆ.

ಕೇಂದ್ರ ವಿದ್ಯುತ್ಸಚಿವಾಲಯ ಪ್ರಕಟಿಸಿರುವ ಫ್ಯಾಕ್ಟ್ಶೀಟ್ನಲ್ಲಿ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 10 ರವರೆಗಿನ ದೆಹಲಿಯ ವಿದ್ಯುತ್ ಪೂರೈಕೆ ಅಂಕಿಅಂಶಗಳನ್ನು ಒದಗಿಸಲಾಗಿದೆ. .10 ರಂದು ದೆಹಲಿಯ ವಿದ್ಯುತ್ಅಗತ್ಯ 96.2 ಎಂಯುಗಳಾಗಿದ್ದು, ಅಷ್ಟೂ ಪೂರೈಕೆಯಾಗಿದೆ. ಪೀಕ್ಬೇಡಿಕೆಯು 4536 ಮೆಗಾ ವಾಟ್ಗಳಷ್ಟಿದ್ದರೆ, ಪೂರೈಕೆಯೂ 4536 ಮೆಗಾವಾಟ್ನಷ್ಟೇ ಆಗಿದೆ ಎಂದು ಅಂಕಿಅಂಶಗಳು ತೋರಿಸಿವೆ

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ;ನಿಟ್ಟುಸಿರು ಬಿಟ್ಟ ಪೋಷಕರು

Tue Oct 12 , 2021
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗುವ ಮೂಲಕ ನಾಪತ್ತೆ ಪ್ರಕರಣ ಈಗ ಸುಖಾಂತ್ಯ ಕಂಟಿದೆ. ಕಳೆದ ಭಾನುವಾರದಿಂದ ಹೆತ್ತವರ ನಿದ್ದಗೆಡಿಸಿದ್ದ 7 ಮಂದಿ ಮಕ್ಕಳಲ್ಲಿ ಮೂರು ಮಂದಿ ಸೋಮವಾರ ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು. ಮತ್ತೆ ನಾಲ್ಕು ಮಂದಿ ಮಕ್ಕಳು ಮಂಗಳವಾರ ಬೆಳಗ್ಗೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಡಿದರೂ ಪತ್ತೆಯಾಗದ ಮಕ್ಕಳು, ಮಂಗಳೂರಿನ ಆಟೋ ಚಾಲಕರ ಸಮಯಪ್ರಜ್ಞೆಯಿಂದ ಪತ್ತೆಯಾಗಿರೋದು ವಿಶೇಷವಾಗಿದೆ. ಮಂಗಳೂರಿನಲ್ಲಿ ಅಮೃತವರ್ಷಿಣಿ, ರಾಯನ್ ಸಿದ್ದಾರ್ಥ, ಚಿಂತನ್, ಭೂಮಿ […]

Advertisement

Wordpress Social Share Plugin powered by Ultimatelysocial