ಕೇರಳದಲ್ಲಿ ಶಂಕಿತ ʻಮಂಕಿಪಾಕ್ಸ್ʼ ಪ್ರಕರಣ ಪತ್ತೆ. ವ್ಯಕ್ತಿ ಆಸ್ಪತ್ರೆಗೆ ದಾಖಲು

 

ತಿರುವನಂತಪುರಂ (ಕೇರಳ): ಶಂಕಿತ ಮಂಗನ ಕಾಯಿಲೆ(monkeypox)ಯ ಪ್ರಕರಣವೊಂದು ಕೇರಳದಲ್ಲಿ ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವರು ಇಂದು ತಿಳಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಮೂರು ದಿನಗಳ ಹಿಂದೆ ಕೇರಳಕ್ಕೆ ಆಗಮಿಸಿದ ಪ್ರಯಾಣಿಕನಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದಿದ್ದವು.

ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಯಾಣಿಕನ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳನ್ನು ಪಡೆದ ನಂತರವೇ ಪ್ರಕರಣವನ್ನು ದೃಢಪಡಿಸಬಹುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ,

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೊಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಸಿಡುಬು ರೋಗಿಗಳಲ್ಲಿ ಕಂಡುಬರುವ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆದರೂ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರವಾಗಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಸಿದ್ದರಾಮಯ್ಯ ಹೇಳಿಕೆ..

Thu Jul 14 , 2022
ಮಾಧ್ಯಮದವರಿಗೆ ಖಾರವಾಗಿ ಪ್ರತಿಕ್ರಿಸಿದ ಸಿದ್ದರಾಮಯ್ಯ.. ಅಗಸ್ಟ್ ‌03 ಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವ ವಿಚಾರ.. ಅದು ಸಿದ್ದರಾಮೋತ್ಸವ ಅಲ್ರೀ ಅಮೃತೋತ್ಸವ.. ಸಿದ್ದರಾಮೋತ್ಸವ ಅಂತ‌ ಯಾಕೆ ಬರಿತ್ತಿರೀ.. ನಾನು ಸ್ಪಷ್ಟ ಪಡಿಸುತ್ತಿದ್ದೆನೆ ಸಿದ್ದರಾಮೋತ್ಸವ ಅಲ್ಲ.. ನನಗೆ 75 ವರ್ಷ ತುಂಬಿದ್ದಕ್ಕೆ ಅಮೃತ ಮಹೋತ್ಸವ ಮಾಡಲಾಗುತ್ತಿದೆ.. ಅದಕ್ಕಾಗಿ ನನ್ನ ಅಭಿಮಾನಿಗಳು ನಮ್ಮ ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ 75 ಅಂತ ಕಾರ್ಯಕ್ರಮ ಮಾಡ್ತಾಯಿದ್ದಾರೆ.. ನಿನ್ನೆ‌ ನಡೆದ ‌ಸಿದ್ದತ ಸಭೆಗೆ ಡಿಕೆ ಶಿವಕುಮಾರ್ ಗೈರು ವಿಚಾರ.. […]

Advertisement

Wordpress Social Share Plugin powered by Ultimatelysocial