ಈ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ​ ನೀಲ್​! ಕೆಜಿಎಫ್​ ನಿರ್ದೇಶಕರ ವಿರುದ್ಧ ಅಭಿಮಾನಿಗಳ ಅಸಮಾಧಾನ

ಹೈದರಾಬಾದ್​: ಕೆಜಿಎಫ್​ ಚಾಪ್ಟರ್​ 1 ಮತ್ತು 2 ಅದ್ಭುತ ಯಶಸ್ಸಿನ ಬಳಿಕ ನಿರ್ದೇಶಕ ಪ್ರಶಾಂತ್​ ನೀಲ್​ಗೆ ಹೆಚ್ಚು ಬೇಡಿಕೆ ಬಂದಿದೆ. ನಮಗೆ ಸಿನಿಮಾ ಮಾಡಿಕೊಡಿ ಅಂತಾ ಸ್ಟಾರ್​ ನಟರೇ ಪ್ರಶಾಂತ್​ ನೀಲ್​ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಟಾಲಿವುಡ್​ನ ಇಬ್ಬರು ಸ್ಟಾರ್​ ನಟರಿಗೆ ನೀಲ್​ ಆಯಕ್ಷನ್​ ಕಟ್​ ಹೇಳುತ್ತಿದ್ದಾರೆ.ಪ್ರಭಾಸ್​ ಅಭಿನಯದ ಸಲಾರ್​ ಮತ್ತು ಜೂನಿಯರ್​ ಎನ್​ಟಿಆರ್​ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ನೀಲ್​ ನಿರ್ದೇಶನವಿರಲಿದೆ. ಈಗಾಗಲೇ ಸಲಾರ್​ ಚಿತ್ರದ ಚಿತ್ರೀಕರಣ ಅರ್ಧ ಮುಗಿದಿದೆ. ಒಂದೆಡೆ ಕೆಜಿಎಫ್​ ಸೂಪರ್​ ಸಕ್ಸಸ್​ ಕಂಡರೂ ಇದೀಗ ಪ್ರಭಾಸ್​ ಮತ್ತು ಎನ್​ಟಿಆರ್​ ಅಭಿಮಾನಿಗಳಿಗೆ ಮನವರಿಕೆಯಾಗಿದ್ದು, ನೀಲ್​ ನಿರ್ದೇಶನದ ಮೇಲೆ ತುಂಬಾ ಚಿಂತಾಕ್ರಾಂತರಾಗಿದ್ದಾರೆ.ಕೆಜಿಎಫ್​ನ ಎರಡು ಭಾಗವನ್ನು ಡಾರ್ಕ್​ ಶೇಡ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲಿವೇಶನ್​ ದೃಶ್ಯ ಮತ್ತು ಖಡಕ್​ ಚಿತ್ರಕತೆ ಹಾಗೂ ಹೀರೋ ಕೇಂದ್ರಿತ ಅಬ್ಬರದ ಡೈಲಾಗ್​ಗಳು ಕೆಜಿಎಫ್​ ಚಿತ್ರ ಪ್ರಮುಖ ಭಾಗವಾಗಿತ್ತು. ಇದೀಗ ಸಲಾರ್​ ಚಿತ್ರದ ಶೂಟಿಂಗ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಫೋಟೋ ನೋಡಿದವರಿಗೆ ಕೆಜಿಎಫ್​ ಚಿತ್ರದ ಛಾಯೆ ಕಾಣುತ್ತಿದೆ.ಇನ್ನು ಜೂನಿಯರ್​ ಎನ್​ಟಿಆರ್​ ಹುಟ್ಟುಹಬ್ಬದ ದಿನವೂ ಪ್ರಶಾಂತ್​ ನೀಲ್​ ಚಿತ್ರ ಘೋಷಣೆ ಮಾಡಿದ್ದಾರೆ. ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ ಮಾಡಿದ್ದು, ಅದರಲ್ಲೂ ಪ್ರಶಾಂತ್​ ನೀಲ್​​ ಎಂದಿನಂತೆ ತಮ್ಮ ಡಾರ್ಕ್​ ಶೇಡ್​ ಅನ್ನು ಮುಂದುವರಿಸಿದ್ದಾರೆ. ನೀಲ್​ ಅವರ ಮೊದಲ ಚಿತ್ರ ಉಗ್ರಂನಲ್ಲೂ ಕೂಡ ಡಾರ್ಕ್​ ಶೇಡ್​ ಇತ್ತು. ತಮ್ಮ ಎಲ್ಲ ಚಿತ್ರಗಳಲ್ಲೂ ಪ್ರಶಾಂತ್​ ನೀಲ್​ ಡಾರ್ಕ್​ ಶೇಡ್​ಗೆ ಒತ್ತು ಕೊಡುತ್ತಿರುವುದನ್ನು ನೋಡಿ ನೀಲ್​ ಅಭಿಮಾನಿಗಳಿಗೆ ಚಿಂತೆ ಕಾಡುತ್ತಿದೆ.ಪ್ರತಿಭಾವಂತ ನಿರ್ದೇಶಕ ನೀಲ್​ ಅಭಿಮಾನಿಗಳು ಈಗ ಈ ಮೇಲಿನ ಅಂಶಗಳ ಬಗ್ಗೆ ಕಾಳಜಿ ವಹಿಸುವಂತೆ ನೀಲ್​ ಅವರನ್ನು ವಿನಂತಿಸುತ್ತಿದ್ದಾರೆ. ಏಕೆಂದರೆ ಎಲ್ಲ ಸಮಯದಲ್ಲೂ ಅದೇ ಡಾರ್ಕ್ ಶೇಡ್​ ಮತ್ತು ಎಲಿವೇಶನ್ ಶಾಟ್‌ಗಳು ಕೈಹಿಡಿಯುವುದಿಲ್ಲ. ಒಂದು ಹಂತದವರೆಗೆ ನಡೆಯಬಹುದು. ಆದರೆ, ಆ ನಂತರ ಅದೇ ಜನರಿಗೆ ಬೇಸರ ತರಬಹುದು ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠ್ಯ ಪುಸ್ತಕದಲ್ಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ...? ಔರಂಗಜೇಬ್ ಹೆಸರು ಸೇರಿಸಬೇಕಿತ್ತಾ..? ಮಾಜಿ ಸಚಿವ ಈಶ್ವರಪ್ಪ ಪ್ರಶ್ನೆ

Thu May 26 , 2022
ಬಾಗಲಕೋಟೆ: ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಿರುವ ಸರ್ಕಾರದ ಕ್ರಮಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಕಿಡಿ ಕಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇನ್ನೇನು ಜಿನ್ನಾ, ಔರಂಗಜೇಬ್ ಹೆಸರನ್ನು ಸೇರಿಸಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪ, ದೇಶದ ಸಂಸ್ಕೃತಿ ವಿಚಾರದಲ್ಲಿ ಭಾಷಣದ ಬಗ್ಗೆ ಸೇರಿಸಲಾಗಿದೆ. ಪಠ್ಯದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹೆಸರು ಅಥವಾ ಶಿವಲಿಂಗ ಒಡೆದ ಔರಂಗಜೇಬ್ ಹೆಸರನ್ನು ಸೇರಿಸಬೇಕಿತ್ತಾ? ಮಕ್ಕಳು ಅಲೆಕ್ಸಾಂಡರ್ ದಿ ಗ್ರೇಟ್ ಅಂತಾ […]

Advertisement

Wordpress Social Share Plugin powered by Ultimatelysocial