‘ಕೆಜಿಎಫ್ 2’ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ!

ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ ‘ಕೆಜಿಎಫ್ ಚಾಪ್ಟರ್ 2’ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ‘ಕೆಜಿಎಫ್ 2’ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

KGF 2 ಈಗಾಗಲೇ ಅಬ್ಬರದ ಪ್ರಚಾರವನ್ನೂ ಮುಗಿಸಿದೆ. ಇನ್ನೇನಿದ್ದರು ಚಿತ್ರವನ್ನು ತೆರೆಮೇಲೆ ನೋಡುವುದಷ್ಟೇ ಬಾಕಿ.

‘ಕೆಜಿಎಫ್ 2’ ಈಗ ಕನ್ನಡದ ಅಥವಾ ಭಾರತೀಯ ಚಿತ್ರವಾಗಿ ಮಾತ್ರ ಉಳಿದಿಲ್ಲ. ಈ ಚಿತ್ರವನ್ನು ವರ್ಲ್ಡ್ ಸಿನಿಮಾ ಎಂದು ಕರೆದರೆ ಅದು ಅತಿಶಯೋಕ್ತಿ ಆಗಲಾರದು. ಯಾಕೆಂದರೆ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ‘ಕೆಜಿಎಫ್ 2’ ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರ ದೊಡ್ಡಮಟ್ಟದಲ್ಲಿ ತೆರೆಗೆ ಬರುತ್ತಿದೆ. ಹಾಗೆಂದ ಮೇಲೆ ದೊಡ್ಡಮಟ್ಟದಲ್ಲೇ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದು ಪಕ್ಕಾ.

ಸದ್ಯ ‘ಕೆಜಿಎಫ್ 2’ ಚಿತ್ರದ ಗಳಿಕೆಯ ಬಗ್ಗೆ ಸಾಕಷ್ಟು ಲೆಕ್ಕಾಚಾರಗಳು ಹುಟ್ಟಿಕೊಂಡಿವೆ. ಈಗಾಗಲೇ ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಜೊತೆಗೆ ವಿಶ್ವದಾದ್ಯಂತ ಚಿತ್ರ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಸಂಖ್ಯೆಯೂ ಏರುತ್ತಾ ಇದೆ. ಹಾಗಾಗಿ ‘ಕೆಜಿಎಫ್ 2’ ಮೊದಲ ದಿನ 100 ಕೋಟಿ ಗಳಿಕೆ ಮಾಡುತ್ತದೆ ಎನ್ನುವ ಸ್ಪಷ್ಟ ಚಿತ್ರಣ ಕಾಣುತ್ತಾ ಇದೆ.

‘Kgf 2’ ಹಿಂದಿಯಲ್ಲಿ 60 ಕೋಟಿ ಟಾರ್ಗೆಟ್!
‘ಕೆಜಿಎಫ್ ಚಾಪ್ಟರ್ 2’ ಹಿಂದಿ ಭಾಷೆಯಲ್ಲಿ ಅತಿದೊಡ್ಡ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆಯಿದೆ. ಏಕೆಂದರೆ ಹಿಂದಿ ಪ್ರೇಕ್ಷಕರು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮುಂಗಡ ಬುಕ್ಕಿಂಗ್ ಆಗಿದೆ. ಈ ಹಿಂದೆ ಬಾಕ್ಸಾಫೀಸ್‌ನಲ್ಲಿ 51.60 ಕೋಟಿ ಓಪನಿಂಗ್ ಪಡೆದುಕೊಂಡು ಹಿಂದಿಯ ‘ವಾರ್’ ಚಿತ್ರ ದಾಖಲೆ ಮಾಡಿತ್ತು. ‘ಕೆಜಿಎಫ್ 2’ ಚಿತ್ರ ಕೂಡ ಸುಮಾರು ಇಷ್ಟೇ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ‘KGF 2’ ಉತ್ತರ ಭಾರತದಿಂದಲೇ ಸುಮಾರು 60 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ಕರುನಾಡಲ್ಲಿ ‘kgf 2’ ಮೊದಲ ದಿನ 30 ಕೋಟಿ ಟಾರ್ಗೆಟ್!

ಇನ್ನು ‘ಕೆಜಿಎಫ್ 2’ ಚಿತ್ರದ ತವರೂರಾದ ಕರ್ನಾಟಕದಲ್ಲಿ ಮುಂಗಡ ಬುಕ್ಕಿಂಗ್‌ನಲ್ಲಿ ಸರ್ವಕಾಲಿಕ ದಾಖಲೆ ಮಾಡಿದೆ ‘ಕೆಜಿಎಫ್ 2’. ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಕರ್ನಾಟಕದಲ್ಲಿ ಕೆಜಿಎಫ್ ದಾಖಲೆ ಮಾಡಿದೆ. ಈ ಬುಕ್ಕಿಂಗ್ ಪ್ರಕಾರ ‘ಕೆಜಿಎಫ್ 2’ ಮೊದಲ ದಿನ ಕರ್ನಾಟಕದಲ್ಲಿ ಸುಮಾರು 30 ಕೋಟಿ ಗಳಿಸ ಬಹುದು ಎನ್ನಲಾಗಿದೆ.

ತೆಲುಗು ರಾಜ್ಯದಲ್ಲಿ ‘KGF 2’ ದೊಡ್ಡ ನಿರೀಕ್ಷೆ!

ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್ 2’ ಚಿತ್ರ ಮೊದಲ ದಿನ ಹೆಚ್ಚಿನ ಗಳಿಕೆ ಮಾಡುವ ಸಾಧ್ಯತೆ ಇದೆ. ಮೊದಲೇ ಚಿತ್ರದ ಮುಂಗಡ ಬುಕ್ಕಿಂಗ್‌ಗೆ ಅವಕಾಶ ಇರಲಿಲ್ಲ. ಆದರೆ ತೆಲಂಗಾಣ ಮತ್ತು ಆಂಧ್ರದಲ್ಲಿ ‘ಕೆಜಿಎಫ್ 2’ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಮತ್ತು ಕ್ರೇಜ್ ಇದೆ. ಈಗ ಬುಕ್ಕಿಂಗ್ ಓಪನಿಂಗ್‌ಗೆ ಅವಕಾಶ ಸಿಕ್ಕಿದ್ದು, ಎರಡೂ ರಾಜ್ಯಗಳಲ್ಲಿ ಮೊದಲ ದಿನ 35 ಕೋಟಿ ರೂ ಗಳಿಕೆಯನ್ನು ನಿರೀಕ್ಷಿಸಬಹುದಾಗಿದೆ. ಇದು ಇನ್ನು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

ತಮಿಳುನಾಡು, ಕೇರಳದಲ್ಲಿ 10ರಿಂದ 5 ಕೋಟಿ ನಿರೀಕ್ಷೆ!

ತಮಿಳು ನಾಡಿನಲ್ಲಿ ‘ಬೀಸ್ಟ್’ ಚಿತ್ರ ರಿಲೀಸ್ ಆಗಿರುವ ಕಾರಣ, ‘ಕೆಜಿಎಫ್ ಚಾಪ್ಟರ್ 2’ಗೆ ಸೀಮಿತವಾದ ಚಿತ್ರಮಂದಿರಗಳು ಸಿಕ್ಕಿವೆ. ಹಾಗಾಗಿ ಅಂದಾಜಿನ ಪ್ರಕಾರ ಮೊದಲ ದಿನದಂದು 10 ಕೋಟಿ. ರೂ ಗಳಿಸಬಹುದು. ಇನ್ನು ‘ಕೆಜಿಎಫ್ ಚಾಪ್ಟರ್ 2’ ಮುಂಗಡ ಬುಕಿಂಗ್‌ಗೆ ಕೇರಳದಲ್ಲಿ ಮೊದಲು ಅವಕಾಶ ಕೊಡಲಾಯಿತು. ಕೇರಳದಲ್ಲಿ, ಉತ್ತಮ ಓಪನಿಂಗ್ ಪಡೆದ 5 ಚಿತ್ರಗಳ ಪೈಕಿ ಈ ಚಿತ್ರವೂ ಒಂದಾಗಿದೆ. ಕೇರಳಾದಲ್ಲಿ ಸುಮಾರು 5 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಇದೆಲ್ಲವನ್ನೂ ಸೇರಿಸಿ ‘ಕೆಜಿಎಫ್ 2’ ಮೊದಲ ದಿನ ಭಾರತದಾದ್ಯಂತ ಸುಮಾರು 140 ಕೋಟಿ ರೂ. ಗಳಿಕೆ ಮಾಡುವ ನಿರೀಕ್ಷೆ ಇದೆ. ಇನ್ನು ವಿಶ್ವಾದ್ಯಂತ ಕಲೆಕ್ಷನ್ ಸೇರಿ ಒಟ್ಟಾರೆ 165 ಕೋಟಿ ರೂ ‘ಕೆಜಿಎಫ್ 2’ ಚಿತ್ರದ ಮೊದಲ ದಿನದ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನೇಕರಿಗೆ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಕಾಫಿ ಬೇಕೇ ಬೇಕು.!

Thu Apr 14 , 2022
      ಒಂದು ಕಪ್ ಕಾಫಿ ಕುಡಿಯದೇ ಇದ್ರೆ ಕೆಲಸ ಮಾಡೋದು ಅಸಾಧ್ಯ ಎನ್ನುವವರೂ ಇದ್ದಾರೆ. ಈ ಅಭ್ಯಾಸವು ನಿಮ್ಮ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅನ್ನೋದು ಹೊಸ ವಿಚಾರ. ಆದ್ರೆ ತೂಕ ಇಳಿಸೋದು ನೀವು ದಿನ ನಿತ್ಯ ಕುಡಿಯುವ ಬ್ರೌನ್ ಕಾಫಿಯಲ್ಲ. ಸಂಶೋಧಕರ ಪ್ರಕಾರ ಗ್ರೀನ್ ಕಾಫಿಯನ್ನು ಆಹಾರದ ಜೊತೆಗೆ ನಿಯಮಿತವಾಗಿ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದರಿಂದ ಹೆಚ್ಚುವರಿ ತೂಕವನ್ನು ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು. ಹಸಿರು […]

Advertisement

Wordpress Social Share Plugin powered by Ultimatelysocial