ಬಿಜೆಪಿ ಪ್ರಚಾರಕ್ಕೆ ಬ್ರೇಕ್‌ ಹಾಕಿದ ಕಿಚ್ಚ ಸುದೀಪ್‌..! ಕಾಂಗ್ರೆಸ್‌ ಪರ ಕ್ಯಾಂಪೇನ್ ಸಾಧ್ಯತೆ..

 

ಬೆಂಗಳೂರು ಅಭಿನಯ ಚಕ್ರವರ್ತಿ ನಟ ಸುದೀಪ್‌ ಅವರು ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಕೈಗೊಂಡ ವಿಚಾರ ಎಲ್ಲರಿಗೂ ಗೊತ್ತಿದೆ. ಆದ್ರೆ, ಇದೀಗ ಇದ್ದಕ್ಕಿದ್ದಂತೆ ಕಿಚ್ಚ ಕಮಲಪಾಳಯದ ಪರ ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೆ, ಬಿಜೆಪಿಗರು ಕಿಚ್ಚನಿಗೆ ಕೊಟ್ಟ ಮಾತು ತಪ್ಪಿದ್ರಾ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಹೌದು ಇಷ್ಟೇಲ್ಲ ಪ್ರಶ್ನೆಯನ್ನು ಹುಟ್ಟು ಹಾಕುವಂತೆ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಮಾತು. ಯೆಸ್‌.. ಡಿಕೆಶಿ ಅವರು ಕಿಚ್ಚ ಸುದೀಪ್‌ ಕಾಂಗ್ರೆಸ್‌ ಪರ ಪ್ರಚಾರ ಮಾಡ್ತಾರೆ ಅಂತ ಹೇಳಿದ್ದರು.. ಇದೀಗ ನಿನ್ನೆ ಮಧ್ಯಾಹ್ನದಿಂದ ಕಿಚ್ಚ ಕಮಲದ ಪರ ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ಇಂದಿನ ಪ್ರಚಾರಕ್ಕೂ ಬ್ರೇಕ್‌ ಹಾಕಿದ್ದಾರೆ. ಮಾತಿಗೆ ಸದಾ ಬದ್ದರಾಗಿರುವ ಅವರು ದಿಢೀರನೆ ಪ್ರಚಾರ ನಿಲ್ಲಿಸಿದ್ದೆಕೆ ಎನ್ನುವ ಅನುಮಾನ ಮೂಡಿದೆ. ಸುದೀಪ್ ಮನಸ್ಸಿಗೆ ಬಿಜೆಪಿ ಪಕ್ಷ ನೋವು ಮಾಡಿತಾ..? ಇಲ್ಲದಿದ್ದರೆ, ಒಂದು ದಿನಕ್ಕೆ ಅರರು ಕ್ಷೇತ್ರಗಳಲ್ಲಿ ಬಿಡುಲ್ಲದೇ ಪ್ರಚಾರ ಮಾಡುತ್ತಿದ್ದ ಕಿಚ್ಚ ಅಚಾನಕ್ ಪ್ರಚಾರ ನಿಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದೀಕೆ ಕಾರಣವೇನು ಎಂಬವುದೇ ಯಕ್ಷ ಪ್ರಶ್ನೆ.

ನಾನು ಬೊಮ್ಮಾಯಿ ಮಾಮನ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದಂತೆ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಸೀಮಿತವಾಗಿದ್ದರು. ಅಲ್ಲದೆ, ಅವರಿಗೆ ಕಾಂಗ್ರೆಸ್‌ನಿಂದ ಪ್ರಚಾರಕ್ಕೂ ಸಹ ಆಹ್ವಾನ ಬಂದಿತ್ತು. ಅಲ್ಲದೆ, ಕೈ ಪಾಳಯದಲ್ಲಿಯೂ ಅವರ ಸ್ನೇಹಿತ ಅಭ್ಯರ್ಥಿಗಳ್ಳಿದ್ರು. ಆದ್ರೂ ಸಹ ಕಿಚ್ಚ ಬಿಜೆಪಿ ಪರ ನಿಂತು ಶಿಗ್ಗಾವಿ ಸೇರಿದಂತೆ 18 ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮಾನಿಗಳ ನಡುವೆ ಹಗಲು ರಾತ್ರಿ ಪ್ರಚಾರ ಮಾಡಿದರು.

ಇದರಿಂದಾಗಿ ಎಲ್ಲಾ ಕಡೆ ಬಿಜೆಪಿ ಪರ ಅಲೆ ಎದ್ದಿತು. ಆದ್ರೆ ಈಗ ಬಿಜೆಪಿ ಪಕ್ಷ ಎಡವಿದ್ದು ಎಲ್ಲಿ..? ಎಂಬುವುದು ತಿಳಿಯದಂತಾಗಿದೆ. ಅಲ್ಲದೆ, ಸಿಎಂ ಬೊಮ್ಮಾಯಿಯವರಿಗೆ ಕೊಟ್ಟ ಮಾತನ್ನು ತಪ್ಪಿದ ಕಿಚ್ಚ ಇಂದು ನವಲಗುಂದ ಗದಗ ಹೋಗದೆ ಯಾಕೆ ವಾಪಾಸ್ ಆದ್ರೂ ಎನ್ನುವುದು ಅರ್ಥವಾಗುತ್ತಿಲ್ಲ. ಭಾರತೀಯ ಜನತಾ ಪಾರ್ಟಿ ಎಲ್ಲಿ ಎಡವಿತು ಎಂಬುವುದು ತಿಳಿಯುತ್ತಿಲ್ಲ.

ನಿಗದಿ ಪ್ರಕಾರ ಸುದೀಪ್‌ ಇಂದು ಹುಬ್ಬಳ್ಳಿ, ರೋಣದಲ್ಲೂ ರೋಡ್ ಶೋ ಮಾಡಬೇಕಿತ್ತು. ಸದ್ಯ ಕಿಚ್ಚ ರೋಡ್ ಶೋ ಮೊಟಕು ಗೊಳಿಸಿದಕ್ಕೆ ಬಿಜೆಪಿಗೆ ಟೆನ್ಸನ್ ಶುರುವಾಗಿದೆ. ಪ್ರಚಾರದ ಜವಬ್ದಾರಿ ವಹಿಸಿದ್ದ ಸಚಿವರ ಮೇಲೆ ಕಿಚ್ಚನ ಅಸಮಧಾನ ತೋರಿದ್ದಾರೆ ಎನ್ನಲಾಗುತ್ತಿದೆ. ರೋಡ್ ಶೋ ವೇಳೆ ಸರಿಯಾದ ವ್ಯವಸ್ಥೆ ಮಾಡದ ಕಾರಣ ಪ್ರಚಾರ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿರೋ ಬಗ್ಗೆ ಮಾಹಿತಿ ಇದೆ.

ಅಲ್ಲದೆ, ಸರಿಯಾದ ಸೆಕ್ಯೂರಿಟಿ ವ್ಯವಸ್ಥೆ. ಪ್ರಚಾರದ ಗಾಡಿಯಲ್ಲಿ ಜನರ ಗುಂಪು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬೇಕಾದ ವ್ಯವಸ್ಥೆ ಇಲ್ಲದ ಕಾರಣ ಕಿಚ್ಚ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಾಹಿತಿಗಳ ಪ್ರಕಾರ ಕಿಚ್ಚನ ಪ್ರಚಾರದ ಹೊಣೆ ಸಚಿವ ಸುಧಾಕರ್‌ಗೆ ಸಿಎಂ ವಹಿಸಿದ್ದರು. ಅದರೆ ಪ್ರಚಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡದ ಕಾರಣ ಸುಧಾಕರ್ ಮೇಲೆ ಬೇಸರ ವ್ಯಕ್ಯಪಡಿಸಿದ್ದರು. ಇದರಿಂದಾಗಿ ನಿನ್ನೆಯ ಪ್ರಚಾರ ಕಾರ್ಯ ನಿಲ್ಲಿಸಿ ಬೆಂಗಳೂರಿಗೆ ನಿನ್ನೆಯೇ ನಟ ಕಿಚ್ಚ ಸುದೀಪ್‌ ವಾಪಸ್ಸಾಗಿದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆಯಲ್ಲಿ ವರದಾನ ಲವಂಚದ ಬೇರು

Sun Apr 30 , 2023
ಗಿಡ ಮೂಲಿಕೆಗಳು ಹೇರಳವಾದ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲೂ ಬೇಸಿಗೆಯಲ್ಲಿ ವರದಾನವಾಗಿ ಇರುವುದೇ ಲಾವಂಚದ ಬೇರು. ಯಾವುದೇ ಗ್ರಂಧಿಗೆ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಲಾವಂಚದ ಬೇರಿನಿಂದ ಎಷ್ಟೆಲ್ಲಾ ಪ್ರಯೋಜನಗಳು ಇದೆ ಗೊತ್ತಾ? ಪಾದಗಳ ಉರಿ, ಬಾಯಿ ಹುಣ್ಣು, ಉರಿ ಮೂತ್ರ, ಮೊಡವೆಗಳು ಮುಂತಾದ ಅನೇಕ ಬಗೆಯ ಸಮಸ್ಯೆಗಳಿಗೆ ಲಾವಂಚ ರಾಮಬಾಣ. ತಂಪಿನ ಗುಣ ಹೊಂದಿರುವ ಲಾವಂಚದ ಬೇರನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ನಂತರ ಸೋಸಿ […]

Advertisement

Wordpress Social Share Plugin powered by Ultimatelysocial