ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣದ ಬಗ್ಗೆ ವಿಡಿಯೋ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿಟ್ಟ ಕಿರಿಕ್ ಕೀರ್ತಿ!

ದ್ಘಾಟನೆಯಾದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಕೆಲವರು ಎಕ್ಸ್‌ಪ್ರೆಸ್‌ವೇಯಿಂದ ಸಾಕಷ್ಟು ಅನುಕೂಲ ಆಗಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ವಿವಿಧ ಕಾರಣಗಳನ್ನು ನೀಡಿ ಟೀಕೆ ಮಾಡುತ್ತಲೇ ಇದ್ದಾರೆ.

ಇದೀಗ ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಆ ಮಾರ್ಗದಲ್ಲಿ ಪ್ರಯಾಣಿಸಿ ವಿಡಿಯೋ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಾರ್ಚ್ 12ರಂದು ಪ್ರಧಾನಿ ಮೋದಿ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ್ದರು. ಸುಗಮ ಸಂಚಾರಕ್ಕಾಗಿ 118 ಕಿ.ಮೀ ಉದ್ದದ ಬೆಂಗಳೂರು – ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಈ ಹೆದ್ದಾರಿಯ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಒಂದೂವರೆ ಗಂಟೆಯಲ್ಲಿ ತಲುಪಬಹುದಾಗಿದೆ. ಆದರೆ ರಸ್ತೆಯ ಟೋಲ್ ದರದ ಬಗ್ಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು. ರಸ್ತೆ ಮಾರ್ಗವಾಗಿ ಸಂಚರಿಸುವವರು ತಟ್ಟೆ ಇಡ್ಲಿ, ಮದ್ದೂರು ವಡೆ ತಿನ್ನಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೋಟೆಲ್‌ನವರಿಗೂ ನಷ್ಟ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದೇ ವಿಚಾರವಾಗಿ ಕೀರ್ತಿ ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ.

“ನನಗೂ ಈ ರಸ್ತೆಯ ಬಗ್ಗೆ ಸುಮಾರು ಸಮಸ್ಯೆಗಳಿವೆ ಎಂದು ಹೇಳಿದ್ದರು. ನಾನು ಕೂಡ ಅಯ್ಯೋ ಇಷ್ಟೆಲ್ಲಾ ಸಮಸ್ಯೆ ಇದ್ಯಾ? ಎಂದುಕೊಂಡಿದ್ದೆ. ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಪ್ರಯಾಣ ಬೆಳೆಸಿದೆ. ಹೋಗಿ ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ಚರ್ಚೆ ನಡೆಸಿದೆ. ಅವರು ಎಲ್ಲದರ ಬಗ್ಗೆ ವಿವರಣೆ ನೀಡಿದರು. ನಂತರ ಆ ರಸ್ತೆಯಲ್ಲಿ ಪ್ರಯಾಣದ ಅನುಭವ ಹೇಗಿದೆ ಅನ್ನೋದನ್ನು ನೋಡಲು ಅದೇ ರಸ್ತೆಯಲ್ಲಿ ಬಂದೆ. ನಿಜ ಹೇಳ್ತೀನಿ ನಮ್ಮ ಜನರಿಗೆ ಚೂರು ತಲೆ ಇಲ್ಲ. ಎಲ್ಲರಿಗೂ ಹೇಳುತ್ತಿಲ್ಲ. ವಿರೋಧ ಮಾಡುವವರಿಗೆ ಹೇಳ್ತಿದ್ದೀನಿ. ರಾಜಕೀಯವಾಗಿ ಇದನ್ನು ನೋಡುವುದು ಸರಿಯಿಲ್ಲ”

“ಟೋಲ್ ಟೋಲ್ ಟೋಲ್ ಅಂತ ಹೇಳ್ತಾರೆ. ಟೋಲ್ ಇಲ್ಲದೇ ಯಾವ ರಸ್ತೆ ಮಾಡಲು ಸಾಧ್ಯ? ನೆಲಘಟ್ಟದಿಂದ ಬೆಂಗಳೂರುವರೆಗಿನ ರಸ್ತೆಗೆ ಟೋಲ್ ತಗೋತ್ತಿದ್ದಾರೆ. ಟೋಲ್ ಕೊಡುತ್ತೀರಾ ಸರಿ. 120 ಕಿಲೋ ಮೀಟರ್ ಪ್ರಯಾಣಿಸುವಾಗ ಎಷ್ಟು ಇಂಧನ ಉಳಿಯುತ್ತೆ ಗೊತ್ತಾ? ಮಾಮೂಲಿ ಮಾರ್ಗದಲ್ಲಿ ಬಂದರೆ ಕ್ಲಚ್ ಹಿಡ್ದು ಗೇರ್ ಬದಲಿಸಿ ಎಷ್ಟು ಇಂಧನ ವ್ಯರ್ಥ ಆಗುತ್ತದೆ. ಅಷ್ಟೇ ಅಲ್ಲ 4 ಗಂಟೆ ಇಂಜಿನ್ ಆನ್ ಅಲ್ಲಿ ಇರೋದಕ್ಕೂ ಒಂದೂವರೆ ಗಂಟೆ ಆನ್ ಇರೋದಕ್ಕೂ ವ್ಯತ್ಯಾಸ ಇದೆ. ಪ್ರಯಾಣದ ವೇಳೆ ಕ್ಲಚ್, ಬ್ರೇಕ್ ಹಿಡಿಯುವಂತಿಲ್ಲ. ಸರ್ವಿಸ್ ರೋಡ್ ಕೂಡ ಇದೆ. ಸಣ್ಣ ಸಮಸ್ಯೆ ಇದೆ ಅದು ಸರಿ ಹೋಗುತ್ತದೆ.”

“ಬೆಂಗಳೂರು ಮೈಸೂರು ರಸ್ತೆ ಬಹಳ ಚೆನ್ನಾಗಿದೆ. ಆರಾಮಾಗಿ ಓಡಾಡಿ, ಇಲ್ಲಿ ರೇಸ್ ಬೇಡ” ಎಂದು ಕಿರಿಕ್ ಕೀರ್ತಿ ಕಿವಿಮಾತು ಹೇಳಿದ್ದಾರೆ. ರಾಜಕೀಯಕ್ಕಾಗಿ ಸುಮ್ಮನೆ ಟೀಕೆ ಬೇಡ ಎಂದಿದ್ದಾರೆ. ಇನ್ನು ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಶೇರ್ ಮಾಡಿರುವ ಕೀರ್ತಿ, ಕಾಮೆಂಟ್ ಸೆಕ್ಷನ್ ಆಫ್‌ನಲ್ಲೇ ಮುಂದುವರೆಸಿದ್ದಾರೆ. “ಒಂದು ವರ್ಷದ ಹಿಂದೇನೇ ಕಮೆಂಟ್ ಸೆಕ್ಷನ್ ಆಫ್ ಮಾಡಿದೀನಿ…ಕಾರಣ ನೀವೆ…ಸೈದ್ದಾಂತಿಕ‌ ವಿಚಾರಗಳನ್ನ ಪರ್ಸನಲ್ ಆಗಿ ತಗೋತೀರಿ…ಕೆಟ್ಟ ಕೊಳಕಾ ಮಾತಾಡ್ತೀರಿ… ಏನಾದ್ರೂ ಹೇಳ್ಬೇಕಾ..? ವೀಡಿಯೋ ಶೇರ್ ಮಾಡಿ ಹೇಳಿ” ಎಂದು ಕಾಮೆಂಟ್ ಮಾಡಿ ಸುಮ್ಮನಾಗಿದ್ದಾರೆ. ಕಿರಿಕ್ ಕೀರ್ತಿ ವಿಡಿಯೋವನ್ನು ಸಂಸದ ಪ್ರತಾಪ್ ಸಿಂಹ ಕೂಡ ಶೇರ್ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಖದ ಕಾಂತಿ ದುಪ್ಪಟ್ಟು ಮಾಡುತ್ತೆ ಕಹಿಬೇವು...!

Wed Mar 22 , 2023
ಕಹಿಬೇವು ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯುಗಾದಿ ಹಬ್ಬ ಬಂತು ಅಂದ್ರಂತೂ ಎಲ್ಲರ ಮನೆಯಲ್ಲಿ ಕಹಿಬೇವು ಇರುತ್ತೆ. ಈ ಕಹಿಬೇವು ಆರೋಗ್ಯಕ್ಕೆ ತುಂಬಾನೇ ಉಪಕಾರಿ ಅಂತಾ ಆರ್ಯುವೇದ ಹೇಳಿದೆ. ಅಂತೆಯೇ ತ್ವಚೆಯ ಆರೈಕೆಗೂ ಕಹಿಬೇವು ತುಂಬಾನೇ ಸಹಕಾರಿ. ಮುಖದಲ್ಲಿನ ಮೊಡವೆ ಕಲೆಗಳನ್ನ ನಿವಾರಣೆ ಮಾಡೋದ್ರಲ್ಲಿ ಕಹಿಬೇವಿನ ಎಲೆ ಪ್ರಮುಖ ಪಾತ್ರ ವಹಿಸುತ್ತೆ . ಇದಕ್ಕಾಗಿ ನೀವು ಕಹಿಬೇವು ಎಲೆಗಳನ್ನ ಒಣಗಿಸಿ ಬಳಿಕ ಅದನ್ನ ಪೌಡರ್​ ರೀತಿ ರುಬ್ಬಿಟ್ಟುಕೊಳ್ಳಿ. ಇದಕ್ಕೆ […]

Advertisement

Wordpress Social Share Plugin powered by Ultimatelysocial