ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರಿಂದ “ರೈತ” ಚಿತ್ರದ ಪೋಸ್ಟರ್ ಬಿಡುಗಡೆ…!

ನಾವೆಲ್ಲಾ ಇಂದು ನೆಮ್ಮದಿಯ ಜೀವನ ನಡೆಸಿತ್ತಿರಲು ಮುಖ್ಯ ಕಾರಣ ರೈತ. ಆತ ಬೆಳೆದ ಆಹಾರ ತಿಂದು ನಾವು ಸುಖವಾಗಿದ್ದೇವೆ. ಅಂತಹ “ರೈತ” ನ ಕುರಿತು ಬರುತ್ತಿರುವ ಚಿತ್ರ “ರೈತ”.

ಇತ್ತೀಚೆಗೆ ಈ ಚಿತ್ರದ ಪೋಸ್ಟರನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಬಿಡುಗಡೆ ಮಾಡಿ ಶುಭ ಕೋರಿದರು.

ಕುಮುದ ಆರ್ಟ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಅಮರನಾಥ ರೆಡ್ಡಿ ವಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರೈತ ಬೇರೆ ಯಾರಿಂದಲೂ ಬಡ್ಡಿಗಾಗಿ ಹಣ ಪಡೆದು ಕಷ್ಟ ಪಡಬಾರದು. ಆತನ ಅನುಕೂಲಕ್ಕಾಗಿ ಸಾಕಷ್ಟು ಬ್ಯಾಂಕ್ ಗಳಿದೆ‌. ಇನ್ಶುರೆನ್ಸ್ ಇದೆ. ಇದರ ಲಾಭ ಪಡೆದುಕೊಳ್ಳಬಹುದು ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕ ರಾಜೇಂದ್ರ ಕುಣಿಗಲ್.

ತೆಲುಗಿನಲ್ಲಿ ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಇವರಿಗೆ ಇದು ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆ, ಹಾಡುಗಳು ಹಾಗೂ ಸಂಭಾಷಣೆಯನ್ನು ಇವರೆ ಬರೆದಿದ್ದಾರೆ.‌ ನೃತ್ಯ ನಿರ್ದೇಶನ ಕೂಡ ರಾಜೇಂದ್ರ ಅವರೆ ಮಾಡಿದ್ದಾರೆ.

ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು,ಬೆಂಗಳೂರು,ಚಿಂತಾಮಣಿ ಮುಂತಾದ ಕಡೆ ಮೂವತ್ತೆಂಟು ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ನಾಲ್ಕು ಹಾಡುಗಳು ಹಾಗೂ ಒಂದು ಸಾಹಸ ಸನ್ನಿವೇಶ ಈ ಚಿತ್ರದಲ್ಲಿದೆ.
ಮುರಳಿ ನೃತ್ಯ ನಿರ್ದೇಶನ, ಕೊಟ್ರೇಶ್ – ಸುರೇಶ್ ಛಾಯಾಗ್ರಹಣ, ಲಿಂಗರಾಜ್ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಅಮರ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಖುಷಿ. ಸೊಫಿಯಾ,ಸುಜಾತ,ರೇಖಾದಾಸ್,ಸಂಗೀತ, ಸಿದ್ದಾರ್ಥ,ಲಕ್ಷ್ಮಣ್, ಸುರೇಶ್,ಕೃಷ್ಣ ರೆಡ್ಡಿ ಮುಂತಾದವರು ” ರೈತ” ಚಿತ್ರದ ತಾರಾಬಳಗದಲ್ಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡಿಗರಿಂದ ಕನ್ನಡಿಗರಿಗಾಗಿ ಸಿದ್ದವಾಗಿದೆ "ಟಾಕೀಸ್"..!

Mon May 2 , 2022
ಉದ್ಘಾಟಿಸಿ ಶುಭಕೋರಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್. ಈಗ ಮೊದಲಿನಂತಿಲ್ಲ. ಕಲಾಸಕ್ತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ವೇದಿಕೆಗಳಿದೆ‌. ಅಂತಹ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಂದು ಉತ್ತಮ ವೇದಿಕೆಯಾಗಲಿದೆ “ಟಾಕೀಸ್” ಆಪ್. ಇತ್ತೀಚೆಗೆ “ಟಾಕೀಸ್” ಆಪ್ ನ ಉದ್ಘಾಟನೆಯನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನೆರವೇರಿಸಿದರು. ಕಟ್ಟಡ ನಿರ್ಮಾಣದಿಂದ ಹಿಡಿದು, ಸಿನಿಮಾ ನಿರ್ಮಾಣದ ತನಕ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ವಯಂಪ್ರಭ ಸಂಸ್ಥೆ ಈ ಉಪಯುಕ್ತ “ಟಾಕೀಸ್” ಆಪ್ ಬಿಡುಗಡೆ ಮಾಡಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ […]

Advertisement

Wordpress Social Share Plugin powered by Ultimatelysocial