ಕೆಕೆಆರ್ ಗೆ ದೊಡ್ಡ ಆಘಾತ.! ಸ್ಟಾರ್ ವೇಗಿ ಟೂರ್ನಿಯಿಂದ ಔಟ್

ಗೆಲುವಿನ ಕನವರಿಕೆಯಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.  ಕೊಲ್ಕತ್ತಾ ತಂಡದ ವೇಗದ ಬೌಲರ್ ಅಲಿಖಾನ್ ಗಾಯಕ್ಕೆ ತುತ್ತಾಗಿದ್ದು, 13 ನೇ ಆವೃತ್ತಿಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅಲಿಖಾನ್ ಮೂಲತಃ ಅಮೆರಿದಕವರಾಗಿದ್ದು, ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್  ನಲ್ಲಿ ಸ್ಥಾನ ಪಡೆದ ಮೊದಲ ಅಮೆರಿಕ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಕೊಲ್ಕತ್ತಾ ತಂಡವು ಡಿಸೆಂಬರ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ಜನಕರ ನಾಡಿನ ವೇಗಿ ಹ್ಯಾರಿ ಗರ್ನೆ ರನ್ನು ಖರೀದಿಸಿತ್ತು. ವೇಗಿ ಹ್ಯಾರಿ ಗರ್ನೆ ಗಾಯಕ್ಕೆ ತುತ್ತಾಗಿದ್ದ ಕಾರಣ ಅವರ ಬದಲಿಗೆ ಕೆಕೆಆರ್ ಫ್ರಾಂಚೈಸಿಗಳು ಅಲಿಖಾನ್ ರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು. ದುರದೃಷ್ಟವಶಾತ್ ಇದೀಗ ಅಲಿಖಾನ್ ಕೂಡ ಗಾಯಕ್ಕೆ  ತುತ್ತಾಗಿ 13 ನೇ ಆವೃತಿಯ ಐಪಿಎಲ್  ಟೂರ್ನಿಯನ್ನು ತೊರೆದಿದ್ದಾರೆ.

ಕೆಕೆಆರ್  ಈ ಭಾರಿಯ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿದ್ದು, 4 ಪಂದ್ಯದಲ್ಲಿ ಕೂಡ  ಅಲಿಖಾನ್ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಅಲಿಖಾನ್ ಕೆಕೆಆರ್ ಜರ್ಸಿ  ತೊಡುವುದು  ಪಕ್ಕಾ ಆಗಿತ್ತು. ಆದರೆ ಇದೀಗ ಗಾಯದಿಂದ ಟೂರ್ನಿ ತೊರೆದಿರುವುದು ಕೆಕೆಆರ್ ಗೆ ಭಾರಿ ಹಿನ್ನೆಡೆಯಾಗಲಿದೆ.  ಇಂದು ಕೆಕೆಆರ್ ತಂಡವು ಚೆನ್ನೈ ಸೂಪರ್ ಕಿಂಗ್ಸ್  ತಂಡದ ಸವಾಲನ್ನು ಎದುರಿಸಲಿದೆ.ಉಭಯ ತಂಡಗಳು ಬಲಿಷ್ಠವಾಗಿದ್ದು, ಕೊಲ್ಲಿ ರಾಷ್ಟ್ರದಲ್ಲಿಂದು ಪ್ರಬಲರ ನಡುವೆ ಕದನ ನಡೆಯಲಿದೆ.

 

Please follow and like us:

Leave a Reply

Your email address will not be published. Required fields are marked *

Next Post

ವಾಹನಗಳ ದಾಖಲೆ ತಪಾಸಣೆ - ಪೋಲಿಸ್ ಇಲಾಖೆಯಿಂದ ದಂಡ ಪ್ರಯೋಗ

Wed Oct 7 , 2020
 ರಾಜ್ಯ ಸರ್ಕಾರ ಹಾಗೂ ಜಿಲ್ಲಾವರಿಷ್ಠ  ಅಧಿಕಾರಿ  ಪೋಲಿಸ್ ಇಲಾಖೆ ಇವರ ಆದೇಶದ ಮೇರೆಗೆ ಅರಕಲಗೂಡು  ಪಟ್ಟಣದ  ರಸ್ತೆಯಲ್ಲಿ ಸಂಚಾರದಲ್ಲಿ ತೊಡಗಿದ   ವಾಹನಗಳ ದಾಖಲೆಗಳನ್ನು ತಪಾಸಣೆ ಮಾಡಿ ಸರಿಯಾಗಿ ದಾಖಲೆ ಇಲ್ಲದ ವಾಹನಗಳಿಗೆ ಪೋಲಿಸ್  ಇಲಾಖೆ ವತಿಯಿಂದ ದಂಡ  ವಿಧಿಸಲಾಯಿತು. ಇಂದು ಬೆಳಗ್ಗೆ  ತಾಲ್ಲೂಕು ಕಛೇರಿ ಸಮೀಪದ ಹೆಚ್ ಕೆ ನಂಜೇಗೌಡ ವೃತ್ತ ಬಳಿ  ಸಬ್ ಇನ್ನ್ ಪೆಕ್ಟರ್ ಸುರೇಶ್ ನೇತೃತ್ವದಲ್ಲಿ  ಸಂಚಾರಿ ವಾಹನಗಳ ದಾಖಲೆ ಪರಿಶೀಲನೆ  ಹಾಗೂ ಹೆಲ್ಮೆಟ್ ಧರಿಸದೆ […]

Advertisement

Wordpress Social Share Plugin powered by Ultimatelysocial