ಕೋಲಾರ: ಮಾಲೂರು ತಾಲೂಕಿನ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲ!

ಕೋಲಾರ: ಮಾಲೂರು  ತಾಲೂಕಿನ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲ  ‘ಚಿಕ್ಕ ತಿರುಪತಿ’ಯೆಂದು  ಹೆಸರುವಾಸಿ. ಆಂಧ್ರದ ತಿರುಪತಿ ದೇಗುಲಕ್ಕೆ ಹೋಗಲಾರದ ಸಾವಿರಾರು ಭಕ್ತರು  ನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ
ಜೊತೆಗೆ ಆಂಧ್ರ, ತಮಿಳುನಾಡು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಯಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಇಲ್ಲಿಗೆ ಬರೋ ಭಕ್ತರು ತಮ್ಮ ತಲೆ ಕೂದಲ ಹರಕೆಯನ್ನು ದೇವರಿಗೆ ಸಮರ್ಪಣೆ ಮಾಡುವುದುಂಟು. ದೇವರ ಹರಕೆ ತೀರಿಸುವ ಭಕ್ತರು ಸ್ನಾನದ  ಬಿಸಿ ನೀರಿಗಾಗಿ  ಪರದಾಡುವಂತಾಗಿದೆ. ವಾರ್ಷಿಕ ಎರಡೂವರೆ ಕೋಟಿ (2.5 Crores) ರೂಪಾಯಿಗು ಹೆಚ್ಚು ಆದಾಯವಿರೊ ಜಿಲ್ಲೆಯ ಶ್ರೀಮಂತ ದೇಗುಲ ಎಂಬ ಖ್ಯಾತಿಯನ್ನ ಗಳಿಸಿದ್ದರೂ, ಇಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ.ಸಾಮೂಹಿಕ ಕೋಣೆಯಲ್ಲಿ ಮಹಿಳೆಯರ ಸ್ನಾನ!ಇಲ್ಲಿ ಪ್ರತ್ಯೇಕ ಸ್ನಾನದ ಕೊಠಡಿ ಇಲ್ಲ, ಎಲ್ಲರು ಒಂದು ಕೋಣೆಯಲ್ಲೆ ನಿಂತು ಸ್ನಾನ ಮಾಡಬೇಕು. ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ತೆಯಿಲ್ಲದೇ, ಎಲ್ಲರೂ ಒಟ್ಟಿಗೆ ಸ್ನಾನ ಮಾಡುವುದು ಇರುಸು ಮುರುಸು ಉಂಟು ಮಾಡುವ ಸಂಗತಿಯಾಗಿದೆ. ಚಳಿಗಾಲದಲ್ಲಿ ಕೊರೆಯುವ ಚಳಿಯಲ್ಲೂ ತಣ್ಣೀರಲ್ಲೆ ಸ್ನಾನ ಮಾಡುವ ದುಃಸ್ಥಿತಿ ಇದೆ. ಬೇರೆ ದಾರಿಯಿಲ್ಲದೆ ಬಿಸಿ ನೀರಿಗಾಗಿ ಖಾಸಗಿಯವರ ಮನೆಗಳನ್ನ ಭಕ್ತರು ಆಶ್ರಯಿಸಿದ್ದಾರೆ. ಮಕ್ಕಳ ಸ್ನಾನಕ್ಕಾಗಿ 30, 50 ರುಪಾಯಿ ನೀಡಿ, ರಸ್ತೆ ಬದಿಯ ಶೆಡ್‍ಗಳಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ.ಗಬ್ಬು ನಾರುತ್ತಿರೋ ಸ್ನಾನದ ಕೋಣೆಗಳು
ಇನ್ನು ಕೊಳೆತು ಗಬ್ಬು ನಾರುತ್ತಿರುವ ಸ್ನಾನದ ಕೋಣೆಯಲ್ಲಿ ಪ್ರತ್ಯೇಕವಾದ ಕೊಠಡಿಯು ಇಲ್ಲವಾದ್ದರಿಂದ, ಸ್ನಾನದ ನಂತರ ಭಕ್ತರು ಬಟ್ಟೆ ಬದಲಾಯಿಸೊಕು ಇರುಸು ಮುರುಸು ಎದುರಾಗುತ್ತಿದೆ, ಮಹಿಳೆಯರದ್ದು ಇದೇ ಪರಿಸ್ತಿತಿ ಆಗಿದ್ದು, ಪುಣ್ಯಕ್ಷೇತ್ರದಲ್ಲು ಮೂಗು ಮುಚ್ಚಿಕೊಂಡು ಸ್ನಾನ ಮಾಡಿ ಹೊರಗೆ ಬರುವಂತಹ ಪರಿಸ್ತಿತಿ ನಿರ್ಮಾಣವಾಗಿದೆ.ಕೂದಲು ತೆಗೆದ ನಂತರ ಹಣಕ್ಕಾಗಿ ಬೇಡಿಕೆ
ದೇವಸ್ಥಾನದಲ್ಲಿ ಕೂದಲು ನೀಡುವ ಕೊಠಡಿಯಲ್ಲಿ ಹೆಚ್ಚುವರಿ ಹಣ ವಸೂಲಿಯ ಆರೋಪವನ್ನ ಭಕ್ತರೇ ಮಾಡಿದ್ದಾರೆ. ಕೂದಲು ತೆಗೆಯೋಕೆ 10 ರೂಪಾಯಿ ಟಿಕೆಟ್ ಮುಜರಾಯಿ ಇಲಾಖೆ ನಿಗದಿ ಮಾಡಿದೆ. ಆದರೆ ಕೂದಲು ತೆಗೆದ ನಂತರ 100, 200 ರೂಪಾಯಿಗೆ ಬೇಡಿಕೆ ಇಟ್ಟು ಕೂದಲು ತೆಗೆಯುವ ನೌಕರರು, ಭಕ್ತರನ್ನ ಸುಲಿಗೆ ಮಾಡ್ತಿದ್ದಾರೆಂದು ಭಕ್ತರೇ ಆರೋಪಿಸಿದ್ದಾರೆ.ನೌಕರರ ಮೇಲೆ ನಿಗಾ ಇಡುವವರೇ ಇಲ್ಲ
ದೇಗುಲದಲ್ಲಿ ಆಡಳಿತಾದಿಕಾರಿ, ಪೇಷ್ಕರ್ ಹಾಗು ಬಿಲ್ ಕಲೆಕ್ಟರ್ ಹುದ್ದೆಗಳಲ್ಲಿನ ಅಧಿಕಾರಿಗಳು ವರ್ಗವಾಗಿದ್ದರು, ಬೇರೊಬ್ಬರನ್ನ ಮುಜರಾಯಿ ಇಲಾಖೆ ನೇಮಿಸದೆೇ ನಿರ್ಲಕ್ಷ್ಯ ವಹಿಸಿದೆ. ಇದರ ಪರಿಣಾಮ ದೇಗುಲದಲ್ಲಿನ ಕೆಳಹಂತದ ಸಿಬ್ಬಂದಿಗಳನ್ನ ಯಾರೂ ಪ್ರಶ್ನಿಸೊರೆ ಇಲ್ಲದಂತಾಗಿದೆ.ಇತ್ತ ಗಮನಿಸದ ಮುಜರಾಯಿ ಇಲಾಖೆ
ರಾಜ್ಯದ ಪ್ರವಾಸಿ ತಾಣವಾಗಿರೊ ಚಿಕ್ಕ ತಿರುಪತಿ ದೇಗುಲದಲ್ಲಿ ಇಷ್ಟೆಲ್ಲ ಅವ್ಯವಸ್ತೆ ಇದ್ದರೂ ಮುಜರಾಯಿ ಇಲಾಖೆ ದೇಗುಲವನ್ನೆ ಮರೆತಂತಿದೆ. ಈ ಕುರಿತು ಮಾತನಾಡಿರುವ ಮುಜರಾಯಿ ಇಲಾಖೆ ತಹಶೀಲ್ದಾರ್ ನಾಗವೇಣಿ, ದೇಗುಲದಲ್ಲಿ ಬಿಸಿ ನೀರು, ಸ್ನಾನದ ಕೋಣೆ ಸಮಸ್ಯೆಯಿದೆ. ದೇಗುಲ ಅಭಿವೃದ್ದಿ ಕಾರ್ಯ ಮುಂದೆ ನಡೆಯಲಿದ್ದು ಎಲ್ಲಾ ಸಮಸ್ಯೆಯನ್ನು ಬಗೆಹರಿಸೊದಾಗಿ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಪ್ರಸಿದ್ದಿ ಪಡೆದಿರೊ ಚಿಕ್ಕತಿರುಪತಿ ಪ್ರವಾಸಿ ತಾಣದಲ್ಲಿ ಈ ಮಟ್ಟಿಗೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಕಾಣುತ್ತಿದ್ದರೂ, ಮುಜರಾಯಿ ಇಲಾಖೆ ಸಂಫೂರ್ಣವಾಗಿ ದೇಗುಲವನ್ನ ನಿರ್ಲಕ್ಷಿಸಿರೊ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ ಭಕ್ತರಾದ ರೋಟರಿ ಸುಧಾಕರ್, ದೇಗುಲಗಳಿಂದ ಬರುವ ಕೋಟಿ ಕೋಟಿ ಆದಾಯವನ್ನ ಸರ್ಕಾರ ಬೇರೆ ಕಾರ್ಯಗಳಿಗೆ ಬಳಸುವುದಕ್ಕಿಂತ, ದೇಗುಲ ಅಭಿವೃದ್ದಿಗೆ ಬಳಸಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸಮಸ್ಯೆಗಳು ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್-ಕೇಸರಿ ಸಂಘರ್ಷ ತಡೆಯಲು ಶಾಲಾ-ಕಾಲೇಜಿಗೆ ರಜೆ : ಆನ್‌ಲೈನ್ ಕ್ಲಾಸ್ ಕ್ಲಾಸ್ ನಡೆಸಲು ಖಾಸಗಿ ಶಾಲೆಗಳ ನಿರ್ಧಾರ

Wed Feb 9 , 2022
ರಾಜ್ಯಾದ್ಯಂತ ನಡೆಯುತ್ತಿರುವ ಹಿಜಾಬ್​-ಕೇಸರಿ ಶಾಲು ಸಂಘರ್ಷಕ್ಕೆ ಕಡಿವಾಣ ಹಾಕಲು ಸರ್ಕಾರ ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ ಮಾಡಿದೆ. ಆದರೆ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸಲು ನಿರ್ಧರಿಸಿವೆ.ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಮೂರು ದಿನ ರಜೆ ಘೋಷಣೆ ಮಾಡಿರುವುದನ್ನು ಖಾಸಗಿ ಶಾಲೆಗಳು ಸ್ವಾಗತಿಸಿವೆಕರೋನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಜ.6 ರಿಂದ 30ರವರೆಗೆ ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಜ.31ರಿಂದ ಭೌತಿಕ ತರಗತಿಗಳನ್ನು ಆರಂಭಿಸಲಾಗಿತ್ತು. ಮತ್ತೆ […]

Advertisement

Wordpress Social Share Plugin powered by Ultimatelysocial