ಹಗಲಿನಲ್ಲಿ ಮಳೆರಾಯನ ಆರ್ಭಟ-ರಾತ್ರಿವೇಳೆ ಕತ್ತಲೆಯ ಆಟ : ನವಿಲುಕುರಿಕೆ ರೈತರಿಗೆ ಪ್ರತಿನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ : 7 ಗಂಟೆ ಮಾತ್ರ ವಿದ್ಯುತ್ ಸಂಪರ್ಕ-ರಾತ್ರಿಯಿಡಿ ಕತ್ತಲೆಯ ಜೀವನ

ಕೊರಟಗೆರೆ:-ಹಗಲಿನಲ್ಲಿ ಮಳೆರಾಯ-ಬಿರುಗಾಳಿಯ ಆರ್ಭಟ.. ರಾತ್ರಿವೇಳೆ ಕರಡಿ-ಚಿರತೆಯ ಕಾಟ.. ಮಕ್ಕಳ ವ್ಯಾಸಂಗಕ್ಕೆ ರಾತ್ರಿಯಿಡಿ ದ್ವೀಪದ ಬೆಳಕೇ ಆಧಾರ.. ಪ್ರತಿನಿತ್ಯ ಜೀವದ ಭಯದ ನೆರಳಿನಲ್ಲಿ ರೈತಾಪಿವರ್ಗ.. ಏಕೆ ಗೋತ್ತೇ ಬೆಸ್ಕಾಂ ಇಲಾಖೆಯಿಂದ ನವಿಲುಕುರಿಕೆ ಗ್ರಾಮದ ೧೨ರೈತ ಕುಟುಂಬಗಳಿಗೆ ಕತ್ತಲೆಯ ಸೌಲಭ್ಯವೇ ಇದಕ್ಕೇಲ್ಲ ಮುಖ್ಯ ಕಾರಣ.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ನವಿಲುಕುರಿಕೆ ಗ್ರಾಮದ ರೈತರ ಕತ್ತಲೆಯ ಜೀವನದ ನೋವಿನ ಕತೆಯಿದು. ನವಿಲುಕುರಿಕೆ ಗ್ರಾಮದ ಜಮೀನು ಮತ್ತು ತೋಟದ ಮನೆಯಲ್ಲಿ ವಾಸ ಮಾಡುತ್ತೀರುವ 15ಕ್ಕೂ ಅಧಿಕ ಕುಟುಂಬಗಳಿಗೆ ನಿರಂತರ ಜ್ಯೋತಿಯ ವಿದ್ಯುತ್ ಸಂಪರ್ಕದ ವ್ಯವಸ್ಥೆಯು ಹಲವು ವರ್ಷಗಳಿಂದ ಮರೀಚಿಕೆಯಾಗಿದೆ.

ಬೆಸ್ಕಾಂ ಇಲಾಖೆಯಿಂದ ರೈತರ ಕೊಳವೆಬಾವಿಗೆ ಪ್ರತಿನಿತ್ಯ ೭ಗಂಟೆ ವಿದ್ಯುತ್ ನೀಡಲಾಗುತ್ತೇ. ಹಗಲು ೩ಗಂಟೆ ಮತ್ತು ರಾತ್ರಿ ೪ಗಂಟೆ ವಿದ್ಯುತ್ ಸಂಪರ್ಕ ಇರಲಿದೆ. ಹಗಲಿನಲ್ಲಿ ಯಾವಾಗ ಕರೆಂಟ್ ನೀಡಿದರೂ ರೈತರಿಗೆ ಅನುಕೂಲ. ಆದರೇ ರಾತ್ರಿ ಯಾವ ಸಮಯದಲ್ಲಿ ರೈತರಿಗೆ ವಿದ್ಯುತ್ ಬರಲಿದೆ ಎಂಬುದೇ ಖುದ್ದು ಬೆಸ್ಕಾಂ ಇಲಾಖೆಗೆ ಮಾಹಿತಿ ಇಲ್ಲದಿರುವುದೇ ವಿಪರ್ಯಾಸ.

ರೈತಾಪಿವರ್ಗ ಪ್ರತಿನಿತ್ಯ ಸಂಜೆ 6ಗಂಟೆಯಿಂದ ಮುಂಜಾನೆ 6ಗಂಟೆವರೇಗೆ ಕತ್ತಲೆಯ ಬದುಕು ಸಾಗಿಸಬೇಕಿದೆ. ಮಧ್ಯರಾತ್ರಿ ತ್ರೀಪೇಸ್ ವಿದ್ಯುತ್ ನೀಡಿದಾಗ ಮಾತ್ರ ತೋಟ ಮತ್ತು ಜಮೀನಿನಲ್ಲಿ ವಾಸವಿರುವ ಮನೆಗಳಿಗೆ ಬೆಳಕು ಲಭ್ಯ ಇರಲಿದೆ. ಇಲ್ಲವಾದಲ್ಲಿ ಲಾಟೀನು ಅಥವಾ ಮೇಣದ ಬತ್ತಿಯ ಬೆಳಕೆ ಪುಟಾಣಿ ಮಕ್ಕಳ ವ್ಯಾಸಂಗಕ್ಕೆ ಆಧಾರವಾಗಿ ರೈತರ ಬದುಕಿನಲ್ಲಿ ಕತ್ತಲೆ ಕವಿದಿದೆ.

 

ನವಿಲುಕುರಿಕೆ ಗ್ರಾಮದ ರೈತಮಹಿಳೆ ನೀಲಮ್ಮ ಮಾತನಾಡಿ ನಮ್ಮೂರಿಗೆ ನೀರಾವರಿ ಕೊಳವೆಬಾವಿಗೆ ವಿದ್ಯುತ್ ನೀಡಿದಾಗ ಮಾತ್ರ ನಮ್ಮ ಮನೆಗೆ ಬೆಳಕು. ರಾತ್ರೀಯಿಡಿ ನಾವು ಕತ್ತಲೆಯ ಜೀವನ ನಡೆಸಬೇಕಿದೆ. ಮಳೆಗಾಳಿ ಬಂದರೇ ವಾರಪೂರ್ತಿ ವಿದ್ಯುತ್ ಸಂಪರ್ಕ ಕಡಿತ ಆಗಲಿದೆ. ರಾತ್ರಿವೇಳೆ ಚಿರತೆ-ಕರಡಿಯ ಭಯ, ಹಾವು-ಚೇಳಿನ ಕಾಟದಿಂದ ನಮಗೆ ಪ್ರತಿನಿತ್ಯ ನರಕ ಸೃಷ್ಟಿಯಾಗಿದೆ ಎಂದು ಆರೋಪ ಮಾಡಿದರು.

ನವಿಲುಕುರಿಕೆ ಗ್ರಾಮದ ಗ್ರಾಪಂ ಸದಸ್ಯ ಕೋಕಿಲಸಂದೀಪ್ ಸದಸ್ಯ ಮಾತನಾಡಿ ನಮ್ಮ ಗ್ರಾಮದ 15ರೈತ ಕುಟುಂಬಕ್ಕೆ ನಿರಂತರ ಜ್ಯೋತಿ ಸಂಪರ್ಕವಿಲ್ಲ. ನೀರಾವರಿಗೆ ನೀಡುವ ೩ಪೇಸ್ ವಿದ್ಯುತ್ ಸಂಪರ್ಕ ನೀಡಿದಾಗ ಮಾತ್ರ 7ಗಂಟೆ ಬೆಳಕು ಅಷ್ಟೆ. ಕತ್ತಲಿನಲ್ಲಿ ಪುಟಾಣಿ ಮಕ್ಕಳ ಮೇಲೆ ಕರಡಿ ದಾಳಿ ನಡೆಸುತ್ತೀದೆ. ಜಮೀನಿನ ತೋಟದ ಮನೆಯಲ್ಲಿ ವಾಸ ಮಾಡುತ್ತೀರುವ ರೈತರ ಗೋಳು ಕೇಳೋರೇ ಇಲ್ಲವಾಗಿದೆ ಎಂದು ಹೇಳಿದರು.

ನವಿಲುಕುರಿಕೆಯ ತೋಟದ ಮನೆ ಮತ್ತು ಜಮೀನಿನಲ್ಲಿ ವಾಸವಿರುವ  ಲಕ್ಷ್ಮಯ್ಯ , ನರಸಿಂಹರಾಜು, ದೊಡ್ಡನರಸಪ್ಪ, ಪುಟ್ಟರಾಜು, ಗುಣಶೇಖರ, ಜಯರಾಮಯ್ಯ, ವೆಂಕಟೇಶ್, ಗೋವಿಂದರಾಜು, ರಂಗಶಾಮಯ್ಯ, ಸಿದ್ದರಾಜು, ಲೀಲಾವತಿ, ಶ್ರೀರಂಗಯ್ಯ, ಮುದ್ದರಂಗಯ್ಯ, ಸಂಜಯ್, ಲಕ್ಷಿö್ಮÃಕುಮಾರ್ ಎಂಬ ೧೫ಕುಟುಂಬದ ೬೦ಅಧಿಕ ರೈತರ ಜೊತೆ ಪುಟಾಣಿ ಮಕ್ಕಳಿಗೆ ಕತ್ತಲೆಯ ಸಮಸ್ಯೆ ಎದುರಾಗಿದ್ದು ತ್ವರಿತವಾಗಿ ಬೆಸ್ಕಾಂ ಇಲಾಖೆ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

MostBet лучшее казино в Узбекистан

Thu May 26 , 2022
MostBet лучшее казино в Узбекистане Betcity скачать на ПК, Андроид и айфон Скачать приложение Betcity на телефоны Андроид Content Обзор букмекера 1xBet : бонусы, приложения, регистрация, техподдержка и другая информация Обзор букмекера SaturnBet : бонусы, приложения, регистрация, техподдержка и другая информация Регистрация в казино MostBet Приложение для iOS Скачать приложение […]

Advertisement

Wordpress Social Share Plugin powered by Ultimatelysocial