ತಾನು ಹುಟ್ಟಿ ಬೆಳೆದ ಊರಿನ ಡಿಜಿಟಲ್ ಗ್ರಂಥಾಲಯಕ್ಕೆ 5ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಿದ ಎಮ್ ಕಷ್ಣಮೂರ್ತಿ…

ಕೊರಟಗೆರೆ :- ತಾಲ್ಲೂಕಿನ ತಾನು ಹುಟ್ಟಿ ಬೆಳೆದ ತನ್ನದೇ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಹುಲಿಕುಂಟೆ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯಕ್ಕೆ 5ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಿದ ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿರುವ ಎಮ್. ಕೃಷ್ಣಮೂರ್ತಿ ..

ಎಮ್ . ಕೃಷ್ಣಮೂರ್ತಿ ರವರು ಮಾತನಾಡಿ :-

ನಾನು ಹುಟ್ಟಿ ಬೆಳೆದ ಈ ಊರಿಗೆ ಏನಾದರೂ ಸಹಾಯ ಮಾಡಬೇಕು ಎಂಬುದೇ ನನ್ನ ಆಶಯ ಅದರಂತೆ ಗ್ರಂಥಾಲಯದಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗಲಿ ಎಂದು ಸುಮಾರು 5ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಿದ್ದೇನೆ ಮುಂದೆಯೂ ನನ್ನ ಕೈಲಾದ ಮಟ್ಟಿಗೆ ನನ್ನ ಗ್ರಾಮಕ್ಕೆ ಸಹಾಯ ಮಾಡಲು ನಾನು ಸದಾ ಸಿದ್ಧನಿರುತ್ತೇನೆ ಎಂದು ತಿಳಿಸಿದರು ..

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಣ್ಣ ಮಾತನಾಡಿ :-

ಗ್ರಾಮದಲ್ಲಿ ಗ್ರಂಥಾಲಯ ಮಾಡುವುದಷ್ಟೇ ಅಲ್ಲ ಅದರಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಊರಿನ ಗ್ರಾಮಸ್ಥರಿಗೆ ಓದಲು ಅನುಕೂಲವಾಗುವ ಪುಸ್ತಕಗಳನ್ನು ಸಂಗ್ರಹ ಮಾಡಿಕೊಡಬೇಕು ಆಗಲೇ ನಾವು ಗ್ರಂಥಾಲಯ ಮಾಡಿದ್ದಕ್ಕೂ ಸಾರ್ಥಕ.
ಇದೇ ರೀತಿ ಹೆಚ್ಚಿನ ಸಹಾಯವನ್ನು ಮಾಡುವ ಶಕ್ತಿ ಕೃಷ್ಣಮೂರ್ತಿ ಅವರಿಗೆ ಭಗವಂತ ನೀಡಲಿ ಎಂದು ಪ್ರಶ್ನಿಸುತ್ತೇವೆ ಎಂದರು .

ಗ್ರಾಮಸ್ಥರಾದ ಕೃಷ್ಣಮೂರ್ತಿ ಮಾತನಾಡಿದರು :- ನಮ್ಮೂರಿನಲ್ಲಿ ಹುಟ್ಟಿ ಬೆಳೆದು ವಿಧಾನಸೌಧದಲ್ಲಿ ಸರ್ಕಾರಿ ಕೆಲಸವನ್ನು ನಿರ್ವಹಿಸಿ ನಿವೃತ್ತಿ ಹೊಂದಿರುವ ಎಂ ಕೃಷ್ಣಮೂರ್ತಿ ರವರ ಸಾಧನೆ ಬಹು ದೊಡ್ಡದು ಅವರು ಚಿಕ್ಕಂದಿನಿಂದಲೂ ಪುಸ್ತಕಗಳನ್ನು ಓದುವ ಆಸಕ್ತಿ ಅವರಿಗೆ ಅವರು ಅಂದಿನಿಂದ ಓದಿದ್ದ ಪುಸ್ತಕಗಳನ್ನು ಈಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪುಸ್ತಕಗಳು ಓದುವುದು ಬಹುಮುಖ್ಯವಾಗಿರುತ್ತದೆ ಎಂದು ಸುಮಾರು 5ಸಾವಿರ ಪುಸ್ತಕಗಳನ್ನು ನಮ್ಮ ಗ್ರಂಥಾಲಯಕ್ಕೆ ಉಚಿತವಾಗಿ ನೀಡಿದ್ದಾರೆ ಅವರಿಗೆ ನಮ್ಮ ಗ್ರಾಮ ಪಂಚಾಯಿತಿಯ ಎಲ್ಲ ಜನರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು ..

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲ್ಲಣ್ಣ ಉಪಾಧ್ಯಕ್ಷೆ ಅನ್ನಪೂರ್ಣ ಪ್ರಕಾಶನ ಗ್ರಂಥಾಲಯದ ರೂವಾರಿ ಲೋಕೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಂಕ ಇಳಿಕೆಯ ನಂತರ ಸ್ವಲ್ಪ ನಿರಾಳ ತಂದ ಪೆಟ್ರೋಲ್-ಡಿಸೇಲ್

Sat Jun 4 , 2022
(Petrol-Diesel Price) ಬೆಲೆ ಸದ್ಯ ಹೆಚ್ಚಿನ ಏರಿಕೆ ಕಾಣುತ್ತಿಲ್ಲ. ದಿಢೀರ್ ಒಂದೇ ದಿನದಲ್ಲಿ 10 ರೂ.ಗಳಷ್ಟು ಕಡಿಮೆಯಾದ ಇಂಧನ ಬೆಲೆ ಗ್ರಾಹಕರಿಗೆ ಸಮಾಧಾನ ತಂದಿತ್ತು. ಕೇಂದ್ರ ಸರ್ಕಾರದ ಎಕ್ಸೈಸ್ ಡ್ಯೂಟಿ ಕೈಬಿಟ್ಟಾಗಿನಿಂದ ದೇಶದ ವಾಹನ ಸವಾರರಲ್ಲಿ ಕೊಂಚ ನೆಮ್ಮದಿ ಮೂಡಿದೆ ಅಂತ ಹೇಳಬಹುದು. ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಮೇ 22 ಭಾನುವಾರದಿಂದ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ದರ ದೇಶಾದ್ಯಂತ ಭಾರೀ ಕುಸಿದಿದೆ. ನಿನ್ನೆಗೆ ಹೋಲಿಸಿದರೆ ಇಂದು ಸಹ […]

Advertisement

Wordpress Social Share Plugin powered by Ultimatelysocial