ಮಹಾಮಾರಿ ಕೊರೋನಾ ತಡೆಗಾಗಿ ಮಲೆ ಮಹದೇಶ್ವರರಲ್ಲಿ ಹರಕೆ ಮಾಡಿಕೊಳ್ಳಲಾಗಿತ್ತು.

ದೇಶ ವ್ಯಾಪ್ತಿಯಲ್ಲಿ ಹರಡಿದ್ದ ಮಹಾಮಾರಿ ಕೊರೋನಾ ತಡೆಗಾಗಿ ಮಲೆ ಮಹದೇಶ್ವರರಲ್ಲಿ ಹರಕೆ ಮಾಡಿಕೊಳ್ಳಲಾಗಿತ್ತು ಇದೀಗ ಕೊರೋನಾ ಸೊಂಕು ಕಡಿಮೆ ಆಗಿರುವುದರಿಂದ ಹರಕೆ ತೀರಿಸಲು ಪಾದಯಾತ್ರೆ ಹೊರಟಿದ್ದೇವೆ ಎಂದು ಮಳವಳ್ಳಿ ಶಾಸಕ ಡಾ. ಕೆ ಅನ್ನದಾನಿ ತಿಳಿಸಿದರು. ಮಳವಳ್ಳಿ ಪಟ್ಟಣದಿಂದ ಹೋರಾಟ ಪಾದಯಾತ್ರೆ ಹನೂರಿಗೆ ಬಂದಂತಹ ಸಂದರ್ಭದಲ್ಲಿ ಶಾಸಕ ಕೆ ಅನ್ನದಾನಿ ಮಾಧ್ಯಮದವರೊಂದಿಗೆ ಮಾತನಾಡಿ 2019 ರಲ್ಲಿ ಕರೋರ ಬಂದ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನಲ್ಲಿ ಹಲವರು ಜನರು ಸೋಂಕಿನಿಂದ ಮೃತಪಟ್ಟರು. ಔಷಧಿ ಇಲ್ಲದ ಸಂದರ್ಭದಲ್ಲಿ ಜನರನ್ನು ನೀನೇ ಕಾಪಾಡಬೇಕು ಮಾದಪ್ಪ ಎಂದು ನಾನು ಮನೆ ಮಾದೇಶ್ವರ ರಲ್ಲಿ ಹರಕೆ ಮಾಡಿಕೊಂಡಿದ್ದೆ ಅದರಂತೆ ಪಾದಯಾತ್ರೆ ಹೊರಟಿದ್ದೇವೆ ಎಂದರು.  ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜಾದಳ ಅಭ್ಯರ್ಥಿಯಾಗಿರುವ ಎಂ ಆರ್ ಮಂಜುನಾಥ್ ರವರು ನನ್ನ ಆತ್ಮೀಯ ಸ್ನೇಹಿತರು ಇವರು ಕಳೆದ ಚುನಾವಣೆಯಲ್ಲಿ ಪರಾಭವಗೊಂಡರು ಸಹ ಕ್ಷೇತ್ರ ಬಿಡದೆ ಈ ಭಾಗದ ಜನರುಗಳ ಜೊತೆ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಸದಾ ಯುವಕರು ಹಾಗೂ ಬಡವರ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರಾಗಿ ಆಯ್ಕೆಯಾಗಲಿಯೆಂದು ಹಾಗೂ ಹೆಚ್ ಡಿ ಕುಮಾರಸ್ವಾಮಿ ರವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಕಟ್ಟಿಕೊಳ್ಳುತ್ತೇನೆಂದು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ಬಂದ ಮಳವಳ್ಳಿ ಶಾಸಕ ಕೆ ಅನ್ನದಾನಿ ರವರಿಗೆ ಹನೂರು ಜಾದಳ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರು ಮೈಸೂರು ಪೇಟ ತೋರಿಸಿ ಹಾಗೂ ಶಾಲುಹೊದಿಸಿ ಸನ್ಮಾನಿಸಿದರು. ಎಂ ಆರ್ ಮಂಜುನಾಥ್ ಅಭಿಮಾನಿಗಳು ಎಚ್ ಡಿ ಕುಮಾರಸ್ವಾಮಿ, ಎಮ್ ಆರ್ ಮಂಜುನಾಥ್ ಹಾಗೂ ಶಾಸಕ ಅನ್ನದಾನಿ ರವರಿಗೆ ಜಯ ಘೋಷ ಹಾಕುತ್ತ ಸುಮಾರು ಒಂದು ಕಿಲೋಮೀಟರ್ ವರೆಗೆ ಶಾಸಕ ಅನ್ನದಾನಿ ರವರ ಜೊತೆ ಎಂಆರ್ ಮಂಜುನಾಥ್ ಪಾದಯಾತ್ರೆ ನಡೆಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಮಳವಳ್ಳಿ ತಾಲೂಕು ಜಾದಳ ಅಧ್ಯಕ್ಷ ವಿಶ್ವನಾಥ್, ಜಿ ಪಂ ಮಾಜಿ ಸದಸ್ಯ ಹನುಮಂತು, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ರವಿ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಮಲ್ಲೇಗೌಡ ಹಾಗೂ ಎಮ್ ಆರ್ ಮಂಜುನಾಥ್ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಹೀಲಿಂಗ್ ಮಾಡಿ ಜನರಿಗೆ ಕಿರಿಕಿರಿ ಕೊಡ್ತಿದ್ದವನ ಬಂಧನ.

Sun Jan 29 , 2023
ವ್ಹೀಲಿಂಗ್ ಮಾಡಿ ಜನರಿಗೆ ಕಿರಿಕಿರಿ ಕೊಡ್ತಿದ್ದವನ ಬಂಧನ. ಹುಳಿಮಾವು ಸಂಚಾರಿ ಪೊಲೀಸರಿಂದ ಆರೋಪಿ ಬಂಧನ. ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ಆರೋಪಿ. ಸಾರ್ವಜನಿಕ ಸ್ಥಳಗಳಲ್ಲಿ ವ್ಹೀಲಿಂಗ್ ಮಾಡಿ ಕಿರಿಕಿರಿ ಕೊಡ್ತಿದ್ದ. ಅದನ್ನ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಸಾರ್ವಜನಿಕರು. ಬೆಂಗಳೂರು ಸಂಚಾರಿ ಪೊಲೀಸರನ್ನ ಟ್ಯಾಗ್ ಮಾಡಿ ಪೋಸ್ಟ್. ಅವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಸ್ಟ್. ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರೋ ಪೊಲೀಸರು. […]

Advertisement

Wordpress Social Share Plugin powered by Ultimatelysocial