ಕೆಪಿಎಸ್ಸಿ 2011ರ ಬ್ಯಾಚ್​ನ ಗೆಜೆಟೆಡ್​​ ಪ್ರೊಬೆಷನರಿಗಳ ನೇಮಕಕ್ಕೆ ಅಸ್ತು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) 2011ನೇ ಸಾಲಿನ 362 ಗೆಜೆಟೆಡ್​​ ಪ್ರೊಬೆಷನರಿ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಒಪ್ಪಿ ವಿಧೇಯಕ‌ ಮಂಡಿಸಲು ಸಂಪುಟ ಸಭೆಯಲ್ಲಿ ಬುಧವಾರ ನಿರ್ಧರಿಸಲಾಗಿದೆ.

2011ನೇ ಗೆಜೆಟೆಡ್ ಪ್ರಬೆಷನರಿ ಬ್ಯಾಚ್ ಸಂಬಂಧ ಕೆಪಿಎಸ್ಸಿ ನೀಡಿದ ಪಟ್ಟಿಯನ್ನು ಒಪ್ಪಲು ಸಂಪುಟ ನಿರ್ಧರಿಸಿದೆ.

ಹೀಗಾಗಿ ಶಾಸನ ಸಭೆಯಲ್ಲಿ ಈ ವಿಷಯದಲ್ಲಿ ಚರ್ಚೆ ಮಾಡುತ್ತೇವೆ. 2011ರ ಬ್ಯಾಚ್ ಪಟ್ಟಿಯನ್ನು ಒಪ್ಪಿ ಮುಂಬರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸುತ್ತಿದ್ದೇವೆ. ಅಂದು ಸಮಜಾಯಿಷಿ, ಜ್ಯೇಷ್ಠತಾ ಪಟ್ಟಿ ಸೇರಿದಂತೆ ಎಲ್ಲವನ್ನೂ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಸರ್ಕಾರ 2015ರಲ್ಲೇ ಆಯ್ಕೆ ಪಟ್ಟಿಯನ್ನು ಒಪ್ಪಿಕೊಂಡಿದೆ. ಕೆಪಿಎಸ್ಸಿ ಪ್ರಕಟಿಸಿದ್ದ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಿ, ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಭಾವಿಸಿ ಅವರಿಗೆಲ್ಲ ನೇಮಕಾತಿ ಪತ್ರ ಕೊಡಬೇಕೆಂದು ಬಿಲ್​ ಮಂಡಿಸ್ತೇವೆ ಎಂದರು.

ಕೆಪಿಎಸ್​ಸಿ 2011ರ ಬ್ಯಾಚ್​ನಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ 362 ಮಂದಿ ಮೇಲೆ ತೂಗುಕತ್ತಿ ನೇತಾಡುತ್ತಿತ್ತು. ಇವರ ಆಯ್ಕೆಯನ್ನ ಸಕ್ರಮಗೊಳಿಸಲು ಒಲವು ತೋರಿರುವ ರಾಜ್ಯಸರ್ಕಾರ, ಆಯ್ಕೆ ಪಟ್ಟಿಯನ್ನು ಒಪ್ಪಿ ವಿಧೇಯಕ‌ ಮಂಡಿಸಲು ಸಜ್ಜಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Gvnt:ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ಕಳವಳಕಾರಿ ಎಂದು ಕರ್ನಾಟಕ ಸರ್ಕಾರ ಹೇಳಿದೆ;

Wed Feb 9 , 2022
ವಿವಿಧ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಪರಿಸ್ಥಿತಿ ಎದುರಾದರೆ ಪರೀಕ್ಷೆ ಮತ್ತು ಶಾಲೆಗಳನ್ನು ನಿಲ್ಲಿಸುವುದರಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. ಆದರೆ, ನಿಯಮಿತವಾಗಿ ಆಫ್ ಲೈನ್ ತರಗತಿಗಳನ್ನು ನಡೆಸಲು ಯಾವುದೇ ತೊಂದರೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಅವರು ಸಮರ್ಥಿಸಿಕೊಂಡರು. “ಪರೀಕ್ಷೆ ಮತ್ತು ಶಾಲೆಗಳನ್ನು ನಿಲ್ಲಿಸುವ ಅಗತ್ಯ ಬಂದರೆ ನಾವು ಹಿಂದೆ ಸರಿಯುವುದಿಲ್ಲ. […]

Advertisement

Wordpress Social Share Plugin powered by Ultimatelysocial