ಈ ವಾರ ಕನ್ನಡದ ಹಾಗೂ ಬಾಲಿವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿವೆ.

 ವಾರ ಕನ್ನಡದ ಹಾಗೂ ಬಾಲಿವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿವೆ. 25ರ ಬುಧವಾರದಂದು ಶಾರುಖ್ ಖಾನ್ ನಟನೆಯ ಬಾಲಿವುಡ್ ಚಿತ್ರ ಪಠಾಣ್ ಬಿಡುಗಡೆಗೊಂಡರೆ, 26ರ ಗುರುವಾರದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕನ್ನಡ ಚಿತ್ರ ಕ್ರಾಂತಿ ತೆರೆಗೆ ಬಂತು.

ಒಂದೇ ದಿನದ ಅಂತರದಲ್ಲಿ ಬಿಡುಗಡೆಯಾದ ಈ ಎರಡೂ ಚಿತ್ರಗಳ ನಡುವೆ ಸದ್ಯ ಕರ್ನಾಟಕದಲ್ಲಿ ಪೈಪೋಟಿ ಏರ್ಪಟ್ಟಿದೆ.

ಹೌದು, ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಕರ್ನಾಟಕದಲ್ಲಿ ಇರುವ ಕಾರಣ ಪಠಾಣ್ ಚಿತ್ರವೂ ಸಹ ಒಳ್ಳೆಯ ಕಲೆಕ್ಷನ್ ಮಾಡ್ತಿದೆ. ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಪಠಾಣ್ ಮೊದಲ ದಿನ ದಾಖಲೆಯ ಪ್ರದರ್ಶನಗಳನ್ನು ಪಡೆದುಕೊಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಇನ್ನು ದೊಡ್ಡ ನಟರ ಪರಭಾಷಾ ಚಿತ್ರಗಳು ಬಿಡುಗಡೆಯಾದಾಗ ಕನ್ನಡದ ಚಿತ್ರಗಳಿಗೆ ಬೆಂಗಳೂರಿನಲ್ಲಿಯೇ ಪ್ರದರ್ಶನಗಳ ಕೊರತೆ, ಚಿತ್ರಮಂದಿರಗಳು ಸಿಗದಿರುವುದನ್ನು ಈ ಹಿಂದಿನಿಂದಲೂ ನೋಡುತ್ತಲೇ ಬಂದಿದ್ದೇವೆ.

ಈಗಲೂ ಸಹ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಡುಗಡೆಯ ದಿನ ಬೆಂಗಳೂರು ನಗರದಲ್ಲಿ ಪಠಾಣ್ ಚಿತ್ರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಕ್ರಾಂತಿ ಇದೀಗ ತನ್ನ ಮೂರನೇ ದಿನಕ್ಕೆ ಹಲವು ಪ್ರದರ್ಶನಗಳನ್ನು ಕಳೆದುಕೊಂಡು ನಗರದಲ್ಲಿ ಇಂದು ( ಜನವರಿ 28 ) ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹಾಗಿದ್ದರೆ ಇಂದು ಬೆಂಗಳೂರು ನಗರದಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಹಾಗೂ ಮೈಸೂರಿನಲ್ಲಿ ಚಿತ್ರಗಳು ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆ ಯಾವ ರೀತಿ ಇದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಬೆಂಗಳೂರಿನಲ್ಲಿ ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆ

ಇಂದು ( ಜನವರಿ 28 ) ಬೆಂಗಳೂರು ನಗರದಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಟಾಪ್ 3 ಪಟ್ಟಿ ಈ ಕೆಳಕಂಡಂತಿದೆ..

1. ಪಠಾಣ್ – 581 ಪ್ರದರ್ಶನಗಳು

2. ಕ್ರಾಂತಿ – 559 ಪ್ರದರ್ಶನಗಳು

3. ಗಾಂಧಿ ಗೋಡ್ಸೆ ಏಕ್ ಯುದ್ಧ್ – 61 ಪ್ರದರ್ಶನಗಳು

ಶೋ ಕಳೆದುಕೊಂಡ ಕ್ರಾಂತಿ

ಬಿಡುಗಡೆ ದಿನ ಬೆಂಗಳೂರಿನಲ್ಲಿ ಕ್ರಾಂತಿ 680 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಇದೇ ದಿನ ಪಠಾಣ್ 541 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ನಂತರ ಕ್ರಾಂತಿ ತನ್ನ ಎರಡನೇ ದಿನ 583 ಪ್ರದರ್ಶನಗಳನ್ನು ಪಡೆದುಕೊಂಡರೆ, ಪಠಾಣ್ 563 ಪ್ರದರ್ಶನಗಳನ್ನು ಪಡೆದುಕೊಂಡಿತು. ಹೀಗೆ ಮೊದಲ ದಿನಕ್ಕಿಂತ ಎರಡನೇ ದಿನ 97 ಪ್ರದರ್ಶನಗಳನ್ನು ಕಳೆದುಕೊಂಡರೂ ಪಠಾಣ್‌ಗಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಕ್ರಾಂತಿ ತನ್ನ ಮೂರನೇ ದಿನ ಹೆಚ್ಚು ಪ್ರದರ್ಶನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ದಿನಕ್ಕೆ ಹೋಲಿಕೆ ಮಾಡಿದರೆ ಮೂರನೇ ದಿನಕ್ಕೆ 24 ಪ್ರದರ್ಶನಗಳನ್ನು ಕಳೆದುಕೊಂಡಿರುವ ಕ್ರಾಂತಿ ಈ ದಿನ ಪಠಾಣ್‌ಗಿಂತ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡಿದೆ.

ಬುಕಿಂಗ್‌ನಲ್ಲೂ ಪಠಾಣ್ ಮೇಲುಗೈ

ಇನ್ನು ಬುಕ್ ಮೈ ಶೋ ಹಾಗೂ ಇತರೆ ಆನ್‌ಲೈನ್ ಟಿಕೆಟ್ ಬುಕಿಂಗ್ ವೇದಿಕೆಗಳಲ್ಲಿ ಪಠಾಣ್ ಚಿತ್ರದ ಬುಕಿಂಗ್ ಉಳಿದ ಚಿತ್ರಗಳ ಬುಕಿಂಗ್‌ಗಿಂತ ಚೆನ್ನಾಗಿದೆ. ಹೀಗಾಗಿಯೇ ಪಠಾಣ್ ಶೋ ಕಳೆದುಕೊಳ್ಳದೇ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಅಷ್ಟೇ ಅಲ್ಲದೇ ಬುಕ್ ಮೈ ಶೋ ಬೆಂಗಳೂರು ವಲಯದಲ್ಲಿ ಪಠಾಣ್ ಚಿತ್ರ ನಂಬರ್ ಒನ್ ಟ್ರೆಂಡಿಂಗ್ ಆಗುತ್ತಿದೆ. ಹೀಗೆ ಪಠಾಣ್ ಉಳಿದ ಚಿತ್ರಗಳಿಗಿಂತ ಹೆಚ್ಚು ಪ್ರದರ್ಶನಗಳನ್ನು ಕಬಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮೈಸೂರಿನಲ್ಲಿ ಎಷ್ಟು ಪ್ರದರ್ಶನಗಳು?

ಇದಿಷ್ಟು ಬೆಂಗಳೂರಿನ ಲೆಕ್ಕಾಚಾರವಾದರೆ, ಮೈಸೂರಿನಲ್ಲಿ ಯಾವ ಚಿತ್ರಗಳಿಗೆ ಎಷ್ಟು ಪ್ರದರ್ಶನ ದೊರಕಿವೆ ಎಂಬ ಮಾಹಿತಿಯೂ ಸಿಕ್ಕಿದೆ. ಬೆಂಗಳೂರಿನಲ್ಲಿ ಪಠಾಣ್‌ಗಿಂತ ಹಿಂದೆ ಬಿದ್ದಿರುವ ಕ್ರಾಂತಿ ಚಿತ್ರ ಮೈಸೂರಿನಲ್ಲಿ ಮುಂದಿದೆ. ಇಂದು ( ಜನವರಿ 28 ) ಮೈಸೂರಿನಲ್ಲಿ ಕ್ರಾಂತಿ 75 ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ, ಪಠಾಣ್ 54 ಪ್ರದರ್ಶನಗಳು ಹಾಗೂ ಗಾಂಧಿ ಗೋಡ್ಸೆ ಏಕ್ ಯುದ್ಧ್ 8 ಪ್ರದರ್ಶನಗಳನ್ನು ಪಡೆದುಕೊಂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

`ಬಿಗ್ ಬಾಸ್' ಖ್ಯಾತಿಯ ಸಾನ್ಯ ಅಯ್ಯರ್ ಇದೀಗ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ.

Sat Jan 28 , 2023
`ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್ ಇದೀಗ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಸಾನ್ಯ ತಾವು ಪದವಿ ಪಡೆದ ಖುಷಿಯಲ್ಲಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಸಾನ್ಯ ಅಯ್ಯರ್ ಬಿಗ್ ಬಾಸ್ ಸೀಸನ್ 9ರಲ್ಲಿ ಮೋಡಿ ಮಾಡಿದ್ದರು. ಇದೀಗ ಸಿನಿಮಾಗಾಗಿ ಒಳ್ಳೆಯ ಕಥೆಗಾಗಿ ಕಾಯ್ತಿರುವ ನಟಿ ತಾವು ಗ್ರಾಜುಯೇಟ್ ಆಗಿರುವ ಬಗ್ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸಾನ್ಯ ಅಯ್ಯರ್ […]

Advertisement

Wordpress Social Share Plugin powered by Ultimatelysocial