ಶ್ರೀಕೃಷ್ಣ ಮುಸ್ಲಿಂ ವ್ಯಕ್ತಿಯ ಕನಸಿನಲ್ಲಿ ಬಂದು ಆಮೇಲೆ ನಡೆದಿದ್ದೇನು ಗೊತ್ತಾ?

ಜಾರ್ಖಂಡ್‌: ಇಲ್ಲಿನ ದುಮ್ಕಾದ ಮಹೇಶ್‌ಬಥಾನ್‌ನಲ್ಲಿ ಮುಸ್ಲಿಂ ಉದ್ಯಮಿ ನೌಶಾದ್ ಶೇಖ್ ಅವರು ತಮ್ಮ ಸ್ವಂತ ಹಣದಿಂದ ಸುಮಾರು 42 ಲಕ್ಷ ರೂಪಾಯಿ ವೆಚ್ಚ ಮಾಡಿ ಶ್ರೀ ಕೃಷ್ಣನ ಬೃಹತ್ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ರಣೀಶ್ವರ್ ಬ್ಲಾಕ್‌ನ ಪ್ರಮುಖರೂ ಆಗಿರುವ ಶೇಖ್ ಅವರು, ಎಲ್ಲಾ ಧರ್ಮಗಳ ಬಗ್ಗೆ ಗೌರವವನ್ನು ಹೊಂದಿದ್ದು, ಶ್ರೀಕೃಷ್ಣನಿಂದ ಪ್ರಭಾವಿತನಾಗಿದ್ದೇನೆ ಎಂದಿದ್ದಾರೆ.

ಮುಸ್ಲಿಮನಾಗಿದ್ದರೂ ದೇವಸ್ಥಾನವನ್ನು ಏಕೆ ಕಟ್ಟಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶೇಖ್, ಎಲ್ಲರಿಗೂ ಒಬ್ಬನೇ ದೇವರು. ಹಾಗಿರುವಾಗ ದೇವಸ್ಥಾನ, ಮಸೀದಿ ಅಥವಾ ಚರ್ಚ್‌ ಎಲ್ಲಿ ಪೂಜಿಸುತ್ತಾರೆ ಎಂಬುದು ಮುಖ್ಯವಲ್ಲ ಎಂದಿದ್ದಾರೆ. ರಣೀಶ್ವರ್ ಬ್ಲಾಕ್‌ನಲ್ಲಿ ವಾಸಿಸುವ ಹೆಚ್ಚಿನ ಜನರು ಹಿಂದೂಗಳಾಗಿರುವುದರಿಂದ, ನೌಶಾದ್ ಶೇಖ್ ದೇವಾಲಯ ನಿರ್ಮಿಸಿದ್ದಾರೆ. ಇತ್ತೀಚಿಗೆ ನಡೆದ ದೇವಸ್ಥಾನದ ‘ಪ್ರಾಣ ಪ್ರತಿಷ್ಠಾ’ದ ವೇಳೆ ಎಲ್ಲಾ ಸಮುದಾಯದ ಜನರು ಶುಭ ಮುಹೂರ್ತವನ್ನು ವೀಕ್ಷಿಸಲು ನೆರೆದಿದ್ದರು.

ಸುಮಾರು 55 ವರ್ಷ ಪ್ರಾಯದ ನೌಶಾದ್ ಶೇಖ್ 2019ರಲ್ಲಿ ಒಂದು ಸಲ ಪಶ್ಚಿಮ ಬಂಗಾಳದ ಮಾಯಾಪುರದ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿಗೆ ತೆರಳಿ ವಾಪಾಸ್ ಬಂದ ಬಳಿಕ ಸ್ವತಹ ಶ್ರೀ ಕೃಷ್ಣ ಇವರ ಕನಸಿನಲ್ಲಿ ಬಂದಿದ್ದನಂತೆ. ನೀನು ನನ್ನನ್ನು ಹುಡುಕಿಕೊಂಡು ಎಲ್ಲೆಲ್ಲಿ ಹೋಗಬೇಡ, ನಿನ್ನ ಹಳ್ಳಿಯಲ್ಲೇ ನಾನಿದ್ದೇನೆ. ಅಲ್ಲೇ ದೇವಸ್ಥಾನ ಕಟ್ಟಿಸು ಎಂದು ಶ್ರೀ ಕೃಷ್ಣ ಹೇಳಿದ್ದನಂತೆ. ಹಾಗಾಗಿ, ೨೦೧೯ರಲ್ಲಿ ನೌಶಾದ್ ಶೇಖ್ ತಮ್ಮ ಊರಲ್ಲಿ ದೇವಾಲಯಕ್ಕೆ ಅಡಿಪಾಯ ಹಾಕಿದರು. ಈಗ ದೇವಸ್ಥಾದನ ನಿರ್ಮಾಣ ಕಾರ್ಯ ಪೂರ್ಣಗೊಂಡಿದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

PM:ಇಂದು ಪ್ರಧಾನಿ ಮೋದಿಯವರ ಪಂಜಾಬ್ 2 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ!

Thu Feb 17 , 2022
ಜನವರಿ 5 ರಂದು ಪಂಜಾಬ್‌ನಲ್ಲಿ ಫಿರೋಜ್‌ಪುರ ಬಳಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಉಲ್ಲಂಘನೆಯ ನಂತರ, ರಾಜ್ಯ ಅಧಿಕಾರಿಗಳು ಈ ಬಾರಿ ಜಾಗರೂಕರಾಗಿದ್ದಾರೆ. ಫೆಬ್ರವರಿ 17 ರಂದು ಮತ್ತೆ ತಮ್ಮ ರ್ಯಾಲಿಗಾಗಿ ಪ್ರಧಾನಿ ಮೋದಿ ಪ್ರದೇಶಕ್ಕೆ ಭೇಟಿ ನೀಡಿದಾಗ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಫಾಜಿಲ್ಕಾ ಮತ್ತು ಮುಕ್ತಸರ್ ಜಿಲ್ಲೆಗಳಿಗೆ ಆದೇಶಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು, ಅಧಿಕಾರಿಗಳು ಫೆಜಿಲ್ಕಾ ಜಿಲ್ಲೆಯನ್ನು ಫೆಬ್ರವರಿ 15 ರಿಂದ […]

Advertisement

Wordpress Social Share Plugin powered by Ultimatelysocial