ಅರಗ ಜ್ಞಾನೇಂದ್ರ ಅವರಿಗೆ ಗೃಹ ಸಚಿವರೆಂಬ ಅರಿವಿಲ್ಲ;

ಮೈಸೂರು: ಓರ್ವ ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅವರಿಗೆ ಜವಾಬ್ದಾರಿ ಅರಿವಿಲ್ಲವೇ? ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಯನ್ನು ನೀಡಿದ್ದಾರೆ. ಇಂಥಹ ಗೃಹ ಸಚಿವರಿದ್ದರೆ ಪೊಲೀಸ್ ಇಲಾಖೆಯಾದರೂ ಏನು ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಜೆ ನಗರದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ಉರ್ದು ಭಾಷೆ ಬರಲ್ಲ ಅಂದಿದ್ದಕ್ಕೆ ಯುವಕನ ಕೊಲೆಯಾಗಿದೆ, ಆತ ಒಬ್ಬ ದಲಿತ ಯುವಕ ಎಂದೆಲ್ಲ ಹೇಳಿಕೆ ಕೊಟ್ಟಿದ್ದಾರೆ. ಯುವಕನ ಕೊಲೆಯಾಗಿದೆ ಅಂದಮೇಲೆ ಅದೊಂದು ಜೀವವಲ್ಲವೇ? ಅಲ್ಲಿ ಸಮಾಜದಲ್ಲಿನ ಸ್ವಾಸ್ಥ್ಯ ಕದಡುವ ಹೇಳಿಕೆಯಾಕೆ? ಗೃಹ ಸಚಿವರ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಕಾಳಜಿ ಬಗ್ಗೆ ಮಾತನಾಡುವ ಬಿಜೆಪಿಯವರು ಗೃಹ ಸಚಿವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಿಂದೂ ಯುವಕನ ಹತ್ಯೆಯಾಗಿದೆ ಎಂದಾದರೂ ಹೆಳಬೇಕಿತ್ತು ಅದೆಲ್ಲವನ್ನೂ ಬಿಟ್ಟು ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ಕೊಟ್ಟಿದ್ದಾರೆ. ಸಣ್ಣತನದ ಹೇಳಿಕೆ ನೀಡಿದ್ದಾರೆ. ಅವರಿಗೆ ಗೃಹ ಸಚಿವರೆಂಬ ಅರಿವೂ ಇಲ್ಲ. ಜವಾಬ್ದಾರಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಯುವಕನ ಹತ್ಯೆ ನಡೆದು 24 ಗಂಟೆ ಮೇಲಾಗಿದೆ ಗೃಹ ಸಚಿವರು ಒಂದು ಹೇಳಿಕೆ ಕೊಡುತ್ತಾರೆ. ಕೆಲ ಹೊತ್ತಲ್ಲೇ ಪೊಲೀಸ್ ಆಯುಕ್ತರು ಒಂದು ಹೇಳಿಕೆ ನೀಡುತ್ತಾರೆ. ಇದರಲ್ಲಿ ಸತ್ಯಾಸತ್ಯತೆ ಯಾವುದು? ಇಂಥಹ ಗೃಹ ಸಚಿವರಿರುವುದು ವಿಪರ್ಯಾಸ. ಗೃಹ ಸಚಿವರೇ ಈ ರೀತಿ ಹೇಳಿಕೆ ಕೊಟ್ಟರೆ ಪೊಲೀಸ್ ಇಲಾಖೆಯವರಾದರೂ ಏನು ಮಾಡಲು ಸಾಧ್ಯ? ಸಮಾಜದಲ್ಲಿ ವಿಶ್ವಾಸ ಹಾಳು ಮಾಡುವ ಹೇಳಿಕೆ ಕೊಡುವುದನ್ನು ಬಿಟ್ಟು ಮಾಹಿತಿ ಅರಿತು ಮಾತನಾಡಲಿ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೈಕಮಾಂಡ್ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ.

Wed Apr 6 , 2022
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ. ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ಸಚಿವ ಸಂಪುಟ ವಿಚಾರವಾಗಿ ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಬಗ್ಗೆ ನೀವೇ ನಿರ್ಧಾರ ಕೈಗೊಳ್ಳಿ […]

Advertisement

Wordpress Social Share Plugin powered by Ultimatelysocial