ಒಂದು ದಿನದ ಕಲಾಪಕ್ಕೆ ಕೋಟಿ ಹಣ ಖರ್ಚಾಗುತ್ತದೆ.

 

ಬೆಂಗಳೂರು : ಒಂದು ದಿನದ ಕಲಾಪಕ್ಕೆ ಕೋಟಿ ಹಣ ಖರ್ಚಾಗುತ್ತದೆ. ಈಶ್ವರಪ್ಪ ಹೇಳಿಕೆ ಖಂಡಿಸಿ ಧರಣಿ ಮಾಡಿ ಸಮಯ ವ್ಯರ್ಥ ಮಾಡಬೇಡಿ. ನಿಮ್ಮ ಅಜೆಂಡಾ ಏನೇ ಇದ್ದರೂ ಸದನದಿಂದ ಹೊರಗಿಟ್ಟುಕೊಳ್ಳಿ. ಇನ್ನು ನಿಮ್ಮ ಮತ ಬ್ಯಾಂಕ್‌ ರಾಜಕಾರಣಕ್ಕೆ ಸದನ ಹಾಳು ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ, ‘ಕೇಸರಿ ವಸ್ತ್ರ ಹಿಂದೂ ಸಂಸ್ಕೃತಿಯಲ್ಲಿ ಪಾವಿತ್ರ್ಯತೆ ಹೊಂದಿದೆ. ನಮ್ಮ ಪೂರ್ವಕರು ಕೂಡ ಕೇಸರಿ ವಸ್ತ್ರವನ್ನ ಬಳಸುತ್ತಿದ್ದರು. ಭಾರತವನ್ನ ಹಿಂದೂ ರಾಷ್ಟ್ರ ಮಾಡಬೇಕೆನ್ನುವ ಬಿಜೆಪಿ, ಆರ್‌ಎಸ್‌ಎಸ್‌, ಅಂಗಸಂಸ್ಥೆಗಳ ಮಹದಾಸೆ ಆಗಿದೆ. ಇದರ ಭಾವಾಗಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿರಬಹುದು. ಆದ್ರೆ, ಈಶ್ವರಪ್ಪ ಹೇಳಿಕೆ ಖಂಡಿಸಿ ಸದನದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ. ಒಂದು ದಿನದ ಕಲಾಪಕ್ಕೆ ಕೋಟಿ ಹಣ ಖರ್ಚಾಗುತ್ತದೆ ‘ ಎಂದರು.ಇನ್ನು ‘ಈಶ್ವರಪ್ಪ ಹೇಳಿಕೆ ಖಂಡಿಸಿ ಧರಣಿ ಮಾಡಿ ಸಮಯ ವ್ಯರ್ಥ ಮಾಡಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದಕ್ಕೆ ಬೇಸರವಾಗ್ತಿದೆ. ವಸ್ತ್ರಸಂಹಿತೆ ವಿಚಾರಣ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ. ನಿಮ್ಮ ಅಜೆಂಡಾ ಏನೇ ಇದ್ದರೂ ಸದನದಿಂದ ಹೊರಗಿಟ್ಟುಕೊಳ್ಳಿ. ನಿಮ್ಮ ಮತ ಬ್ಯಾಂಕ್‌ ರಾಜಕಾರಣಕ್ಕೆ ಸದನ ಹಾಳು ಮಾಡಬೇಡಿ. ಅಕಾಲಿಕ ಮಳೆಯಿಂದ ಜನ ಜಾನುವಾರು ಸಂಕಷ್ಟದಲ್ಲಿದೆ. ಸೂಕ್ತ ಬೆಲೆ ಸಿಗದೆ ರಾಗಿ, ಕಬ್ಬು ಬೆಳೆಗಾರರು ಹೈರಾಣಾಗಿದ್ದಾರೆ ‘ ಎಂದು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ರು.

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನರಿಗೆ ಇದಾಗಲೇ ಆಕರ್ಷಕ ಭರವಸೆಗಳನ್ನೂ ನೀಡಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಜನರಿಗೆ ಕೊಟ್ಟಿದ್ದ '

Thu Feb 17 , 2022
ಚಂಡೀಗಢ: ಪಂಜಾಬ್‌ನಲ್ಲಿ ಚುನಾವಣೆಯ ಕಾವು ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಸೇರಿದಂತೆ ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷ (ಆಪ್‌) ನಡುವೆಯೂ ಹಣಾಹಣಿ ಏರ್ಪಟ್ಟಿದೆ.ಆಮ್‌ ಆದ್ಮಿಯ ನಾಯಕ ಅರವಿಂದ ಕೇಜ್ರಿವಾಲ್‌ ಪಂಜಾಬ್‌ನಲ್ಲಿಯೂ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.ಜನರಿಗೆ ಇದಾಗಲೇ ಆಕರ್ಷಕ ಭರವಸೆಗಳನ್ನೂ ನೀಡಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಜನರಿಗೆ ಕೊಟ್ಟಿದ್ದ ‘ಆಪ್‌’ ಇದಕ್ಕೆ ‘ಜನತಾ ಚುನೇಗಿ ಅಪ್ನಾ ಸಿಎಂ’ ಎಂಬ ಹೆಸರು ನೀಡಿತ್ತು. ನಂತರ ಜನರ ಅನುಮತಿ ಮೇರೆಗೆ […]

Advertisement

Wordpress Social Share Plugin powered by Ultimatelysocial