ಕುವೆಂಪು ಅವರಿಗೆ ಅವಮಾನಿಸಿದ್ದನ್ನ ವಿರೋಧಿಸಿ ಪ್ರತಿಭಟನೆ

ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಮಹಾಪುರುಷರ ಇತಿಹಾಸ ತಿರುಚಿರುವುದು ಹಾಗೂ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನಿಸಿದ್ದನ್ನು ವಿರೋಧಿಸಿ  ವಿವಿಧ ಸಂಘಟನೆಗಳು ಬೀದರ್  ನಗರದಲ್ಲಿ  ಪ್ರತಿಭಟನೆ ನಡೆಸಿದರು.ನಾಡಿನ ಸಾಹಿತಿಗಳು, ಕಲಾವಿದರನ್ನು ಅಪಮಾನಗೊಳಿಸುವುದು ಅಥವಾ ಅವರ ಚರಿತ್ರೆಯನ್ನು ತಿರುಚಿ ಬರೆಯುವುದು ಖಂಡಿಸಿ ಬಸವಣ್ಣನ ಕರ್ಮಭೂಮಿ ಬೀದರ್ ನಗರದಲ್ಲಿ ವಿವಿಧ ಸಾಹಿತಿಗಳು ಮಠಾಧೀಶರು ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸಿದರು.ಇತ್ತೀಚೆಗೆ ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಲ್ಲಿ ರಾಜ್ಯ ಸರ್ಕಾರ ಸಾಹಿತಿಗಳನ್ನು ಅಪಮಾನಗೊಳಿಸಿದೆ.ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯನ್ನು ತಿರುಚಿ ಬರೆದವರ ವಿರುದ್ಧ ಸರ್ಕಾರ ತಡ ಮಾಡದೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು. 9ನೆಯ ತರಗತಿಯ ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರ ಲಿಂಗದೀಕ್ಷೆ, ಧರ್ಮ, ಚಳವಳಿ, ಸಿದ್ಧಾಂತಗಳ ಬಗ್ಗೆ ತಿರುಚಿ ಬರೆದ ಸಂಗತಿಗಳನ್ನು ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ದಲಿತ ಮಹಿಳೆಯ ಮೇಲೆ ಕಿರುಕುಳ ಖಂಡಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರಿನಲ್ಲಿ ಪ್ರೋಟೆಸ್ಟ್

Sun Jun 5 , 2022
ಬಾಗಲಕೋಟೆ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ದಲಿತ ನೌಕರಳಾದ ಶಾಂತಾ ಮಾರುತಿ ಮಾದರ್ ಮೇಲೆ ದಲಿತ ಎಂಬ ಕಾರಣಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಬಾಗಲಕೋಟೆಯ ತಾಲೂಕು ದಂಡಾಧಿಕಾರಿಯಾದ ಗುರುಸಿದ್ದಯ್ಯ ಹಿರೇಮಠ ಇವರು ಮಾನಸಿಕ ಕಿರುಕುಳ ನೀಡಿದ್ದು, ಇದನ್ನು ಹೊರತುಪಡಿಸಿ ಇವರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ಧಾರೆ. ಇದಕ್ಕೆ ಸರಕಾರ ನೀಡಿದ ನವನಗರ ಪಿಎಸ್ಐ ಗೋಪಾಲ್ ಗುಬ್ಬಿ ಇವರು ದಲಿತ ಮಹಿಳಾ ಅಧಿಕಾರಿಗೆ ಮಾಡಿರುವ ಅನ್ಯಾಯವನ್ನು ಖಂಡಿಸಿದರು.  ಕರ್ನಾಟಕ […]

Advertisement

Wordpress Social Share Plugin powered by Ultimatelysocial