ಬೆಳೆಗೆ ಹಳದಿ ರೋಗ ಸಂಕಷ್ಟಕ್ಕೆ ಈಡಾದ ಅನ್ನದಾತ.. ಜಿಟಿಜಿಟಿ ಮಳೆ ಅವಾಂತರ..

ಲಕ್ಷ್ಮೇಶ್ವರ : ಆ ಜಿಲ್ಲೆಯ ಬಹುತೇಕ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆಯನ್ನು ಬೆಳೆಯುತ್ತಾರೆ. ಮುಂಗಾರು ಮಳೆ ಚನ್ನಾಗಿ ಆಗಿರೋದರಿಂದ ಖುಷಿ ಖಷಿಯಿಂದ ಅನ್ನದಾತರು ಹೆಸರು ಬಿತ್ತನೆ ಮಾಡಿದ್ರು. ಹೆಸರು ಕೂಡಾ ಸಮೃದ್ಧವಾಗಿ ಬೆಳೆದು ನಿಂತ್ತಿತ್ತು. ಆದ್ರೆ, ನಿರಂತರವಾಗಿ ಜಿಟಿಜಿಟಿ ಮಳೆ ಆಗುತ್ತಿದ್ದು, ಹೆಸರು ಬೆಳೆದ ರೈತರ ಬಾಳು ಮೂರಾಬಟ್ಟೆ ಆಗುತ್ತಿದೆ. ಹೌದು ಹೆಸರು, ಬೆಳೆಗೆ ಹಳದಿ ರೋಗ ವಕ್ಕರಿಸಿದ್ದು, ಅನ್ನದಾತರು ಕಂಗಾಲಾಗಿದ್ದಾರೆ..

ಗದಗ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿದೆ ಜಿಟಿಜಿಟಿ ಮಳೆ.!

ಸಮೃದ್ಧವಾಗಿ ಬೆಳೆದ ಹೆಸರು ಬೆಳೆಗೆ ವಕ್ಕರಿಸಿದೆ ಹಳದಿ ರೋಗ..!

ಗದಗ ಜಿಲ್ಲೆಯಾದ್ಯಂತ ಶೇಕಡಾ 7 ರಷ್ಟು ಹಳದಿ ರೋಗಕ್ಕೆ ತುತ್ತಾದ ಹೆಸರು ಬೆಳೆ..!

ಎಸ್..ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಹೆಸರು ಬೆಳೆ ಈವಾಗ ಹಳದಿ ಬಣ್ಣಕ್ಕೆ ತಿರುಗಿದೆ. ಒಂದು, ಎರಡು ಹಳದಿ ಗಿಡಿಗಳು ಕಾಣ್ತಾಯಿದ್ದ ಜಮೀನುಗಳು ಈವಾಗ ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ಇರುಗಿವೆ. ಹಳದಿ ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತು ರೈತರು ಆಕ್ರೋಶ ಹೊರಹಾಕಿದ್ದಾರೆ‌. ಹೌದು ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದ್ದು, ಹಳದಿ ರೋಗ ಉಲ್ಬಣಗೊಂಡಿದೆ. ಅಂದಹಾಗೇ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಬೆಳೆದ ಹೆಸರು ಬೆಳೆ ಹಳದಿ ರೋಗಕ್ಕೆ ತುತ್ತಾಗಿದೆ. ಗದಗ ಜಿಲ್ಲೆಯ, ಲಕ್ಷ್ಮೇಶ್ವರ ತಾಲೂಕು ಸೇರಿದಂತೆ ಮುಂಡರಗಿ, ರೋಣ, ನರಗುಂದ ಸೇರಿದಂತೆ ಜಿಲ್ಲೆಯಾದ್ಯಂತ ಹೆಸರು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಸಮೃದ್ಧವಾಗಿ ಬೆಳೆದ ಬೆಳೆ ನಂಜಾಣು ರೋಗಕ್ಕೆ ತುತ್ತಾಗುತ್ತಿದೆ. ಹಳದಿ ರೋಗ ಬಂದ ಕೂಡಲೇ, ಔಷಧಿ ಸಿಂಪಡಣೆ ಮಾಡಬೇಕು, ಆದ್ರೆ, ಜಿಟಿಜಿಟಿ ಮಳೆಯಾಗುತ್ತಿದ್ದು, ಔಷಧಿ ಸಿಂಪಡಣೆ ಮಾಡಲು ಕೂಡಾ ಬಿಡುವು ನೀಡ್ತಾಯಿಲ್ಲಾ. ಹೀಗಾಗಿ ರೋಗ ಉಲ್ಬಣಗೊಂಡಿದೆ. ಸಾಲ ಸೂಲಾ ಮಾಡಿ ಬೆಳೆದ ಹೆಸರು ಬೆಳೆ ನಾಶವಾಗುತ್ತಿದೆ. ಆದ್ರೂ ಕೂಡಾ ಕೃಷಿ ಅಧಿಕಾರಿಗಳು ಜಮೀನುಗಳಿಗೆ ಭೇಟಿ ಮಾಡಿಲ್ಲಾ, ಸರ್ವೆ ಮಾಡ್ತಾಯಿಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಹೆಸರು ಬೆಳೆಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡ್ತಾಯಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಸರು ಬಿತ್ತನೆ ಗುರಿಯನ್ನು ಹೊಂದಲಾಗಿತ್ತು. ಆದ್ರೆ, ಗುರಿಗೆ ಮಿರಿ 1 ಸಾವಿರಿಂದ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯನ್ನು ರೈತರು ಬಿತ್ತನೆ ಮಾಡಿದ್ದಾರೆ. ಆದ್ರೆ ಬಹುತೇಕ ಪ್ರದೇಶದಲ್ಲಿ ಹೆಸರು ಬೆಳೆಗೆ ಹಳದಿ ರೋಗ ಆವರಿಸಿಕೊಂಡಿದೆ. ಪ್ರಮುಖವಾಗಿ ಡಿಜಿಡಿಯು 2, ಬಿಜಿಎಸ್ 9 ಹಾಗೂ ನಿರ್ಮಲ ಎನ್ನುವ ತಳಿಯನ್ನು ಬಿತ್ತನೆ ಮಾಡಲಾಗಿದೆ. ರೋಹಿಣಿ ಮಳೆಗೆ ಹೆಚ್ಚಾಗಿ ಹೆಸರು ಬಿತ್ತನೆ ಮಾಡಲಾಗುತ್ತದೆ. ಆದ್ರೆ ರೋಹಿಣಿ ಮಳೆಗೂ ಮುಂಚ್ಚೆ ಬಿತ್ತನೆ ಮಾಡಿದ ಜಮೀನಿನಲ್ಲಿ ಹಳದಿ ರೋಗ ಕಾಣಿಸಿಕೊಂಡಿದೆ. ಗದಗ ಜಿಲ್ಲೆಯಾದ್ಯಂತ ಶೇಕಡಾ 7 ರಷ್ಟು ಹಳದಿ ರೋಗಕ್ಕೆ ತುತ್ತಾಗಿದೆ. ಹಳದಿ ನಂಜಾಣು ರೋಗ ಅಂತಾ ಕರೆಯಲಾಗುತ್ತದೆ. ಬಿಳಿ ನೊಣ ದಿಂದ ರೋಗ ಬರುತ್ತಿದೆ. ಬಂದ್ ಕೂಡಲೇ ಕಿತ್ತು ಹಾಕಬೇಕು, ಔಷಧಿ ಸಿಂಪಡಣೆ ಮಾಡಿದ್ರೆ, ನಿಯಂತ್ರಣ ಮಾಡಬಹುದು ಅಂತಾರೆ ಕೃಷಿ ಜಂಟಿ ನಿರ್ದೇಶಕರು.

ಚಂದ್ರಶೇಖರ ನರಸಮ್ಮನ್ನವರ್, ಕೃಷಿ ಅಧಿಕಾರಿಗಳು, ರೈತ ಸಂರ್ಪಕ ಕೇಂದ್ರ ಲಕ್ಷ್ಮೇಶ್ವರ

ಹಳದಿ ರೋಗ ಬಂದ ಗಿಡವನ್ನು ಕೇಳಲು ಹಾಗೂ ಔಷಧಿ ಸಿಂಪಡಣೆ ಮಾಡಲು ಕೂಡಾ ಜಿಟಿಜಿಟಿ ಮಳೆ ವಿರಾಮ ನೀಡ್ತಾಯಿಲ್ಲಾ. ಹೀಗಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ, ಹೆಸರು, ಈವಾಗ ಹಳದಿ ಬಣ್ಣಕ್ಕೆ ತಿರುತ್ತಿದೆ. ಇನಾದ್ರು ಕೃಷಿ ಅಧಿಕಾದಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ, ಸೂಕ್ತವಾದ ಪರಿಹಾರ ನೀಡಬೇಕಾಗಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಲಯಾಳ ದಿಂದ ಹರಿಹರ ರಸ್ತೆ ಹಾಗೂ ಕೋಟೆ ಬಾಳುಗೋಡು ರಸ್ತೆ ತೀರಾ ಹದಗೆಟ್ಟಿದ್ದು

Sat Jul 16 , 2022
ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೋಕು :ಮಲಯಾಳ ದಿಂದ ಹರಿಹರ ರಸ್ತೆ ಹಾಗೂ ಕೋಟೆ ಬಾಳುಗೋಡು ರಸ್ತೆ ತೀರಾ ಹದಗೆಟ್ಟಿದ್ದು ಊರವರಿಂದ ಹಾಗೂ ಸಾರ್ವಜನಿಕರಿಂದ ಸಮಾಲೋಚನಾ ಸಭೆ. ಪಕ್ಷತೀತವಾಗಿ ರಸ್ತೆ ಅಭಿವೃದ್ಧಿ ಕಮಿಟಿ. ಹದಗೆಟ್ಟ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿ. ಶೀಘ್ರವಾಗಿ ರಸ್ತೆ ಅಭಿವೃದ್ಧಿ ಆಗಬೇಕು ಎಂದು ಒತ್ತಾಸಿದ ರಸ್ತೆ ಅಭಿವೃದ್ಧಿ ಕಮಿಟಿ,ಹಾಗೂ ಗ್ರಾಮಸ್ಥರು. ಸಭೆಗೆ ಆಗಮಿಸಿದ ವೆಂಕಟ್ ಒಳದಂಬೆ, ಹರೀಶ್ ಕಂಜಿಪಿಲಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ […]

Advertisement

Wordpress Social Share Plugin powered by Ultimatelysocial