ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ!

ನವದೆಹಲಿ: ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ತಿಳಿಸಿದ್ದಾರೆ.ಕರ್ನಾಟಕದ ಹಿಜಾಬ್‌ ವಿವಾದದ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಅವರು, ‘ಬಿಜೆಪಿಯವರು ಹಣದುಬ್ಬರ, ಬಡತನದ ಬಗ್ಗೆ ಮಾತನಾಡುತ್ತಿಲ್ಲ.ಕೇವಲ ಅಯೋಧ್ಯೆ ಮತ್ತು ವಾರಾಣಸಿ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.’ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಇದು ಬಿಜೆಪಿಯ ಹತಾಶೆಯ ಮೂಲಕ ತಿಳಿದುಬರುತ್ತದೆ. ಅವರು ಕೇವಲ ಗಲಭೆ ಮತ್ತು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಲಾಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.’70 ವರ್ಷಗಳ ಹಿಂದೆ ನಮ್ಮ ಪೂರ್ವಜರು ಬ್ರಿಟಿಷರನ್ನು ಈ ದೇಶ ತೊರೆಯುವಂತೆ ಮಾಡಿದರು. ಆದರೆ ಈಗ ಬ್ರಿಟಿಷರು ಬಿಜೆಪಿಯ ರೂಪದಲ್ಲಿ ಮರಳಿದ್ದಾರೆ’ ಎಂದೂ ಲಾಲು ಹೇಳಿದ್ದಾರೆ.ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾವು ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಆರ್‌ಜೆಡಿ ಮುಖ್ಯಸ್ಥ ತಿಳಿಸಿದ್ದಾರೆ. ಫೆ. 10 ರಿಂದ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನ್ಮದಿನದ ಶುಭಾಶಯದಲ್ಲಿ ಸೈಫ್ ಅಲಿ ಖಾನ್ ಅವರ ಸಹೋದರಿ ಸಬಾ ಅಲಿ ಖಾನ್ ಅವರ ಮಾಜಿ ಪತ್ನಿ ಅಮೃತಾ ಸಿಂಗ್ ಅವರನ್ನು 'ಹುಚ್ಚು, ಹುಚ್ಚು' ಎಂದು ಕರೆದಿದ್ದಾರೆ

Wed Feb 9 , 2022
  ಸೈಫ್ ಅಲಿ ಖಾನ್ ಅವರ ಸಹೋದರಿ ಸಬಾ ಅಲಿ ಖಾನ್ ಅವರು ಅಮೃತಾ ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಬರೆದಿದ್ದಾರೆ. ಅಮೃತಾ 1991 ರಲ್ಲಿ ಸೈಫ್ ಅವರನ್ನು ವಿವಾಹವಾದರು. ಆದಾಗ್ಯೂ, ವರದಿಯಾದ ಗೊಂದಲಮಯ ವಿಚ್ಛೇದನದ ನಂತರ ಅವರು 2004 ರಲ್ಲಿ ಬೇರ್ಪಟ್ಟರು.  ನಟರಿಗೆ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ, ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್. ವಿಚ್ಛೇದನದ ಒಂದು ದಶಕದ ನಂತರ, ಸೈಫ್ ಕರೀನಾ ಕಪೂರ್ ಅವರನ್ನು […]

Advertisement

Wordpress Social Share Plugin powered by Ultimatelysocial