ಭಾರತ ರತ್ನ ಲತಾ ಮಂಗೇಶ್ಕರ್ ಇಂದು ನಿಧನರಾಗಿದ್ದಾರೆ.

ಭಾರತ ರತ್ನ ಲತಾ ಮಂಗೇಶ್ಕರ್ ಇಂದು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಲತಾ ಮಂಗೇಶ್ಕರ್ ಅವರ ಸಾವಿನ ಬಗ್ಗೆ ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಲತಾ ನಮ್ಮನ್ನಗಲಿದ್ದಾರೆ ಎಂದು ಅವರ ಆರೋಗ್ಯದ ಉಸ್ತುವಾರಿ ಹೊತ್ತಿದ್ದ ಡಾ.ಪ್ರತಿತ್ ಸಮ್ದಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಲತಾ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.ದೇಶದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಸರ್ಕಾರ ಘೋಷಿಸಿದ್ದು, ರಾಷ್ಟ್ರಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ. ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ತಿಳಿಸಲಾಗಿದೆ. ದೇಶದಲ್ಲಿ ಎರಡು ದಿನ ಶೋಕಾಚರಣೆಯನ್ನು ಸರ್ಕಾರ ಘೋಷಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ. ಲತಾ ಮಂಗೇಶ್ಕರ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂತಾಪ ಸೂಚಿಸಿದ್ದಾರೆ.ಅವರ ಸಾಧನೆಗೆ ಸರಿಸಾಟಿ ಇಲ್ಲ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಲತಾ ಅವರ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ಆಗಿರುವ ನಷ್ಟವನ್ನು ಭರಿಸಲಾಗದು. ಅವರ ನಿಧನ ನನಗೆ ವೈಯಕ್ತಿಕವಾಗಿ ದೊಡ್ಡ ನಷ್ಟ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಂಬನಿ ಮಿಡಿದಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಸಂತಾಪ ಸೂಚಿಸಿದ್ದು, ಲತಾ ಅವರ ಧ್ವನಿ, ಹಾಡುಗಳನ್ನು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುತ್ತದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ನುಡಿದಿದ್ದಾರೆ.ಲತಾ ಮಂಗೇಶ್ಕರ್ ಅವರ ನಿಧನದಿಂದ ದೇಶದಲ್ಲಿ ಖಾಲಿತನ ಉಂಟಾಗಿದೆ ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ‘ನಾನು ಹೇಳಲಾಗದಷ್ಟು ದುಃಖಿತನಾಗಿದ್ದೇನೆ. ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ಮುಂಬರುವ ಪೀಳಿಗೆಗಳು ಅವರನ್ನು ಭಾರತೀಯ ಸಂಸ್ಕೃತಿಯ ನಿಷ್ಠಾವಂತರು ಎಂದು ನೆನಪಿಸಿಕೊಳ್ಳುತ್ತವೆ, ಅವರ ಮಧುರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿತ್ತು. ಅವರ ನಿಧನ ಭಾರತಕ್ಕೆ ತುಂಬಲಾರದ ನಷ್ಟ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡದ್ದಾರೆ.ಇನ್ನು ಲತಾ ಮಂಗೇಶ್ಕರ್ ನಿಧನದ ಸುದ್ದಿ ದುಃಖ ತಂದಿದೆ.ಲತಾ ಮಂಗೇಶ್ಕರ್ ಹಲವು ದಶಕಗಳಿಂದ ದೇಶದ ಪ್ರೀತಿಯ ಧ್ವನಿಯಾಗಿದ್ದರು. ಚಿನ್ನದ ಧ್ವನಿಯು ಅಮರವಾಗಿ ಲತಾ ಮಂಗೇಶ್ಕರ್ ದನಿ ಅಭಿಮಾನಿಗಳ ಹೃದಯದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೌರಿ ಖಾನ್, ಫರಾ ಖಾನ್, ನೀಲಂ ಮತ್ತು ಇತರ 'ಬಾಲಿವುಡ್ ಪತ್ನಿಯರು' ಊಟಕ್ಕೆ ಒಟ್ಟಿಗೆ ಸೇರುತ್ತಾರೆ;

Sun Feb 6 , 2022
ಇಂಟೀರಿಯರ್ ಡಿಸೈನರ್ ಮತ್ತು ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಮುಂಬೈನಲ್ಲಿ ತಮ್ಮ ಸ್ನೇಹಿತರೊಂದಿಗೆ ಊಟದ ಮೂಲಕ ತಮ್ಮ ವಾರಾಂತ್ಯವನ್ನು ಪ್ರಾರಂಭಿಸಿದರು. ಗೌರಿಯ ಹೊರತಾಗಿ, ಫರಾ ಖಾನ್, ಭಾವನಾ ಪಾಂಡೆ, ಮಹೀಪ್ ಕಪೂರ್, ಸೀಮಾ ಖಾನ್, ನೀಲಂ ಕೊಠಾರಿ ಸೋನಿ, ಪೂಜಾ ದದ್ಲಾನಿ ಮತ್ತು ತನಾಜ್ ಭಾಟಿಯಾ ಮುಂಬೈನ ಸೇಂಟ್ ರೆಗಿಸ್‌ನ ಸೆಟ್ಟೆ ಮಾರದಲ್ಲಿ ಒಟ್ಟಿಗೆ ಸೇರಿದರು. ಇನ್‌ಸ್ಟಾಗ್ರಾಮ್‌ಗೆ ತೆಗೆದುಕೊಂಡು, ಭಾವನಾ ಅವರೆಲ್ಲರೂ ಕ್ಯಾಮೆರಾಗೆ ಪೋಸ್ […]

Advertisement

Wordpress Social Share Plugin powered by Ultimatelysocial