GOOD NEWS:ಲತಾ ಮಂಗೇಶ್ಕರ್ ಅಭಿಮಾನಿಗಳಿಗೆ ಸಿಹಿ ಸುದ್ದಿ;

ಭಾರತದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಕಳೆದ 28 ದಿನಗಳಿಂದಲೂ ಆಸ್ಪತ್ರೆಯಲ್ಲಿದ್ದು, ಅವರ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಾಣಿಸಿಕೊಂಡಿದೆ. ಕೋವಿಡ್ ಕಾರಣದಿಂದಾಗಿ ಜನವರಿ 08 ರಂದು ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಲತಾ ಮಂಗೇಶ್ಕರ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಲತಾ ಅವರಿಗೆ ಕೋವಿಡ್ ಜೊತೆಗೆ ನ್ಯುಮೋನಿಯಾ ಸಹ ಆಗಿದ್ದು ವೈದ್ಯರಿಗೆ ಆತಂಕ ತಂದಿತ್ತು.

ಆದರೆ ಇದೀಗ, ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಪ್ರತೀಕ್ ಸಮ್‌ಧಾನಿ ಹೇಳಿರುವಂತೆ, ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ದೊಡ್ಡ ಚೇತರಿಕೆ ಕಾಣಿಸಿಕೊಂಡಿದೆ. ಲತಾ ಮಂಗೇಶ್ಕರ್ ಅವರಿಗೆ ಕೋವಿಡ್ ಹಾಗೂ ನ್ಯುಮೋನಿಯಾ ಎರಡೂ ಸಹ ಗುಣವಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ಇದ್ದ ಆತಂಕ ದೂರವಾಗಿದೆ.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ವೈದ್ಯ ಪ್ರತೀಕ್ ಸಮ್‌ಧಾನಿ ಆಗಲೂ ಲತಾ ಮಂಗೇಶ್ಕರ್ ಅವರ ಆರೋಗ್ಯ ಸುಧಾರಿಸುತ್ತಿರುವುದಾಗಿ ಹೇಳಿದ್ದರು. ಲತಾ ಅವರಿಗೆ ನೀಡಲಾಗಿದ್ದ ವೆಂಟಿಲೇಟರ್ ಬೆಂಬಲವನ್ನು ತೆಗೆದು ಸಹಜವಾಗಿ ಉಸಿರಾಡುವಂತೆ ಮಾಡಲಾಗಿದೆ, ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದಿದ್ದರು. ಅಂತೆಯೇ ಲತಾ ಅವರು ಮೊದಲಿನ ಸ್ಥಿತಿಗೆ ನಿಧಾನಕ್ಕೆ ಮರಳುತ್ತಿದ್ದಾರೆ.

ಲತಾ ಮಂಗೇಶ್ಕರ್ ಅವರಿಗೆ ಕೋವಿಡ್ ಹಾಗೂ ನ್ಯುಮೋನಿಯಾ ಗುಣವಾಗುತ್ತಿದ್ದಂತೆ ಲತಾ ಅವರ ತಂಡವು ಟ್ವೀಟ್ ಮಾಡಿದ್ದು, ”ಲತಾ ಅವರ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಈ ಸಮಯದಲ್ಲಿ ಯಾರೂ ಸಹ ಸುಳ್ಳು ಸಂದೇಶಗಳನ್ನು ಪ್ರಸಾರ ಮಾಡಬೇಡಿ. ದೀದಿ ಶೀಘ್ರದಲ್ಲಿಯೇ ಮನೆಗೆ ಮರಳಲಿದ್ದಾರೆ” ಎಂದಿದ್ದಾರೆ.

ಲತಾ ಮಂಗೇಶ್ಕರ್ 2019ರಲ್ಲಿಯೂ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2019ರ ನವೆಂಬರ್‌ನಲ್ಲಿ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಲತಾ ಮಂಗೇಶ್ಕರ್ ಅವರ ಸಹೋದರಿ ವೈರಲ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು. 2021ರ ಸೆಪ್ಟೆಂಬರ್‌ ತಿಂಗಳಲ್ಲಿ ಲತಾ ಮಂಗೇಶ್ಕರ್ 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೇವಲ ಆಪ್ತರಿಗಷ್ಟೇ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾರತ ರತ್ನ ಲತಾ ಮಂಗೇಶ್ಕರ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು.

ಗಾಯಕಿ ಲತಾ ಮಂಗೇಶ್ಕರ್, ಸೆಪ್ಟೆಂಬರ್ 28, 1929ರಲ್ಲಿ ಜನಿಸಿದರು. ಭಾರತದ ಹಲವು ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕಿ ಕನ್ನಡದಲ್ಲಿಯೂ ಒಂದು ಹಾಡನ್ನು ಹಾಡಿದ್ದಾರೆ. 1967ರಲ್ಲಿ ತೆರೆಕಂಡ ‘ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ’ ಸಿನಿಮಾದಲ್ಲಿ ‘ಬೆಳ್ಳನೆ ಬೆಳಗಾಯಿತು’ ಎಂಬ ಹಾಡನ್ನು ಹಾಡಿದ್ದಾರೆ. ಇದು ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡಿದ ಏಕೈಕ ಹಾಡು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ರೆಜಿಲಿಯನ್ ಕ್ಯಾಮು-ಕ್ಯಾಮು ಬೆರ್ರಿಯಲ್ಲಿರುವ ಸಂಯುಕ್ತವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ

Fri Feb 4 , 2022
  ಕ್ಯಾಮು-ಕ್ಯಾಮು ಬೆರ್ರಿ. (ಚಿತ್ರ ಕ್ರೆಡಿಟ್: Bobyhus25, CC-BY-SA-4.0) ಕ್ಯಾಮು-ಕ್ಯಾಮು ಬೆರ್ರಿ. (ಚಿತ್ರ ಕ್ರೆಡಿಟ್: Bobyhus25, CC-BY-SA-4.0) ಅಧ್ಯಯನವೊಂದರಲ್ಲಿ, ಅಮೆಜಾನಿಯನ್ ಕ್ಯಾಮು-ಕ್ಯಾಮು ಬೆರ್ರಿಯಲ್ಲಿರುವ ಕ್ಯಾಸ್ಟಲಜಿನ್ ಎಂದು ಕರೆಯಲ್ಪಡುವ ಸಂಯುಕ್ತವು ಕ್ಯಾನ್ಸರ್ ಚಿಕಿತ್ಸೆಗಾಗಿ ಇಮ್ಯುನೊಥೆರಪಿಯಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಕ್ಯಾಸ್ಟಲಜಿನ್, ಇದು ಪಾಲಿಫಿನಾಲ್ ಇಲಿಗಳಲ್ಲಿನ ಸೂಕ್ಷ್ಮಜೀವಿಯನ್ನು ಮಾರ್ಪಡಿಸುತ್ತದೆ, ಇಮ್ಯುನೊಥೆರಪಿಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಯೂನಿವರ್ಸಿಟಿ ಡಿ ಮಾಂಟ್ರಿಯಲ್‌ನ ಪ್ರಧಾನ ವಿಜ್ಞಾನಿ ಬರ್ಟ್ರಾಂಡ್ ರೂಟಿ ಹೇಳುತ್ತಾರೆ, “ವಿಶ್ವವಿದ್ಯಾಲಯದ ಲಾವಲ್ ಮತ್ತು […]

Advertisement

Wordpress Social Share Plugin powered by Ultimatelysocial