‘ಬೇಡಿಕೊಂಡರು ಸಿಗದ ರಜೆ’.

ಜೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ತನ್ನ ಎರಡುವರೆ ವರ್ಷದ ಮಗುವಿನ ಶವವನ್ನು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಕೊಂಡೊಯ್ದಿರುವ ಮನ ಕಲಕುವ ಘಟನೆ ಫತ್ತರ ಪ್ರದೇಶದ ಈತ್ವಾ ಜಿಲ್ಲೆಯಲ್ಲಿ ನಡೆದಿದೆ. ಲಕ್ನೋ: ರಜೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ತನ್ನ ಎರಡುವರೆ ವರ್ಷದ ಮಗುವಿನ ಶವವನ್ನು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಕೊಂಡೊಯ್ದಿರುವ ಮನ ಕಲಕುವ ಘಟನೆ ಉತ್ತರ ಪ್ರದೇಶದ ಈತ್ವಾ ಜಿಲ್ಲೆಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಮತ್ತು ಎರಡು ಮಕ್ಕಳನ್ನು ನೋಡಿಕೊಳ್ಳಲು ತನಗೆ ರಜೆ ನೀಡುತ್ತಿಲ್ಲ ಎಂದು ಪೊಲೀಸ್ ಪೇದೆ ಸೋನು ಆರೋಪಿಸಿದ್ದಾರೆ. ಕಳೆದ ವಾರ ಅಂದರೆ ಜನವರಿ 7 ರಂದು ಸೋನು ಚೌಧರಿ, ಇಟವಾ ನಗರ ಎಸ್ ಪಿ ಕಪಿಲ್ ದೇವ್ ಅವರ ಕಚೇರಿಗೆ ರಜೆ ಕೋರಿ ಅರ್ಜಿ ಸಲ್ಲಿಸದ್ದರು, ಆದರೆ ಅವರಿಗೆ ರಜೆ ಸಿಗಲಿಲ್ಲ, ಬದಲಿಗೆ ಅವರನ್ನು ಕ್ವಿಕ್ ರೆಸ್ಪಾನ್ಸ್ ಟೀಮ್ ಗೆ ಪೋಸ್ಟ್ ಮಾಡಲಾಯಿತು. ತಾನು ಹೆಚ್ಚಿನ ಸಮಯ ಕೆಲಸದಲ್ಲೇ ತೊಡಗಿಕೊಂಡಿರುವುದರಿಂದ ತನ್ನ ಮಗನ ಮರಣ ಉಂಟಾಯಿತು ಎಂದು ಸೋನು ಚೌಧರಿ ಹೇಳಿದ್ದಾರೆ. ಸೋನು ಬುಧವಾರ ಕರ್ತವ್ಯಕ್ಕೆ ಹೊರಡಲು ತಯಾರಾಗುತ್ತಿದ್ದಾಗ, ಅವರ ಇಬ್ಬರು ಮಕ್ಕಳಾದ ಶಿವೇಂದ್ರ, ಮತ್ತು ಗೋಲು, ಮನೆಯಿಂದ ನುಸುಳಿಕೊಂಡು ಪಕ್ಕದ ಪ್ಲಾಟ್ಗೆ ಆಟವಾಡಲು ಹೋಗಿದ್ದರು.
ಸೋನು ಪತ್ನಿ ಕವಿತಾ ಇತ್ತೀಚಿಗೆ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯ ನಂತರ ಹಾಸಿಗೆ ಹಿಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಶಿವೇಂದ್ರ ವಾಪಸಾದರೂ ಗೋಲು ಮನೆಗೆ ಬಂದಿರಲಿಲ್ಲ. ನಂತರ ಸೋನು ಗೋಲು ಹುಡುಕಲು ಹೊರಟಾಗ ಪಕ್ಕದ ಪ್ಲಾಟ್ನಲ್ಲಿ ಚರಂಡಿ ನೀರಿನಿಂದ ತುಂಬಿದ ಗುಂಡಿಯಲ್ಲಿ ಆತನ ಶವ ತೇಲುತ್ತಿರುವುದು ಕಂಡು ಬಂತು. ಕೂಡಲೇ ಗೋಲುನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಗೋಲು ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದರು.
ಹಾಸಿಗೆ ಹಿಡಿದ ಪತ್ನಿಯೊಂದಿಗೆ ತನ್ನ ಇಬ್ಬರು ಪುತ್ರರನ್ನು ನೋಡಿಕೊಳ್ಳಲು ರಜೆಕೋರಿದ್ದರು ಹಿರಿಯ ಅಧಿಕಾರಿಗಳು ರಜೆ ನೀಡಲಿಲ್ಲ ಎಂದು ಸೋನು ಆಕ್ರೋಶಗೊಂಡು ತನ್ನ ಮಗನ ದೇಹವನ್ನು ಎಸ್ಎಸ್ಪಿ ಕಚೇರಿಗೆ ಕೊಂಡೊಯ್ದರು. ಅಧಿಕಾರಿಗಳು ಪೇದೆ ಸೋನು ಚೌಧರಿಗೆ ಸಾಂತ್ವನ ಹೇಳಿ ಏಕತಾ ಕಾಲೋನಿಯಲ್ಲಿರುವ ಅವರ ಮನೆಗೆ ಮರಳುವಂತೆ ಮನವೊಲಿಸಿದರು. ಏಕತಾ ಕಾಲೋನಿಯಲ್ಲಿ 2 ಕೊಠಡಿಗಳ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಚೌಧರಿ ಅವರನ್ನು ಅವರ ಮನೆಗೆ ಕರೆದೊಯ್ದ ಇತರ ಅಧಿಕಾರಿಗಳು, ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಕೆಂಪೇಗೌಡ ಪುತ್ಥಳಿ ಸ್ಥಾಪನೆಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ.

Fri Jan 13 , 2023
ಬೆಂಗಳೂರು : ವಿಧಾನಸೌಧದ ಮುಂಭಾಗ ಇಂದು ಜಗಜ್ಯೋತಿ ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಸವಣ್ಣ, ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಮಹಾನ್ ನಾಯಕರ ಪುತ್ಥಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಿಧಾನಸೌಧಧ ಮುಂಭಾಗ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಸಂಪುಟದಲ್ಲಿ ಒಪ್ಪಿಗೆ ಪಡೆದು ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಒಂದೂವರೆ […]

Advertisement

Wordpress Social Share Plugin powered by Ultimatelysocial