ನಿಂಬೆ ಹಣ್ಣು ಖರೀದಿಯಲ್ಲೂ ಗೋಲ್‌ಮಾಲ್‌ ಮಾಡಿ ಜೈಲು!

ದೊಡ್ಡ ಹಗರಣಗಳಂತೆ ಸಣ್ಣ ಸಣ್ಣ ಹಗರಣಗಳು ನಡೆಯುತ್ತವೆಯಾದರೂ, ಸುದ್ದಿಯಾಗುವಂಥವು ಕೆಲವು. ಅಂಥದ್ದರಲ್ಲಿ ಇದೂ ಒಂದು. ನಿಂಬೆ ಹಣ್ಣು ಖರೀದಿಯಲ್ಲೂ ಗೋಲ್‌ಮಾಲ್‌ ಮಾಡಿ ಜೈಲು ಅಧಿಕಾರಿಯೊಬ್ಬರು ಸಿಕ್ಕಿಹಾಕಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪಂಜಾಬಿನ ಕಪೂರ್ತಲಾ ಮಾಡರ್ನ್‌ ಜೈಲಿನ ಸೂಪರಿಂಟೆಂಡೆಂಟ್‌ ಗುರ್ನಾಮ್‌ ಲಾಲ್‌ ಈ ಹಗರಣದಲ್ಲಿ ಅಮಾನತುಗೊಂಡಿರುವ ಅಧಿಕಾರಿ.

ಕೈದಿಗಳ ಆಹಾರಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಈ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ. 50 ನಿಂಬೆ ಹಣ್ಣು ಖರೀದಿ ಮಾಡಿದ್ದಾಗಿ ರಸೀದಿ ಸಲ್ಲಿಸಿ ಹಣ ನಗದೀಕರಿಸಿದ್ದಾರೆ. ಕಳೆದ ತಿಂಗಳು ನಿಂಬೆಹಣ್ಣು ಬೆಲೆ ಕಿಲೋಗೆ 200 ರೂಪಾಯಿ ಆಗಿದ್ದಾಗ ಅಧಿಕಾರಿ ಈ ಅಕ್ರಮವೆಸಗಿದ್ದರು.

ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಬಂಧೀಖಾನೆ ಇಲಾಖೆ, ಜೈಲಿನ ಲೆಕ್ಕಪತ್ರ ಪರಿಶೀಲಿಸಿತು. ಅಲ್ಲದೆ, ಕೈದಿಗಳ ವಿಚಾರಣೆಯನ್ನು ನಡೆಸಿದಾಗ, ಲಿಂಬೆಹಣ್ಣು ಬಳಕೆಯಾಗದಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಪಂಜಾಬ್ ಜೈಲು, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಜೈಲು ಸೂಪರಿಂಟೆಂಡೆಂಟ್ ಗುರ್ನಾಮ್‌ ಲಾಲ್‌ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ಗುರ್ನಾಮ್ ಲಾಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪ ಕೇಳಿಬಂದ ಕೂಡಲೇ, ಬಂಧೀಖಾನೆ ಎಡಿಜಿಪಿ ವೀರೇಂದ್ರ ಕುಮಾರ್ ಮೇ 1 ರಂದು ಇಬ್ಬರು ಹಿರಿಯ ಅಧಿಕಾರಿಗಳನ್ನು ಹಠಾತ್ ತಪಾಸಣೆಗಾಗಿ ಈ ಜೈಲಿಗೆ ಕಳುಹಿಸಿದರು. ಕೈದಿಗಳಿಗೆ ನೀಡಲಾದ ಆಹಾರವು ಕಳಪೆ ಗುಣಮಟ್ಟ ಮತ್ತು ಅಸಮರ್ಪಕವಾಗಿದೆ ಎಂಬುದನ್ನು ಈ ತಂಡವು ಪತ್ತೆ ಹಚ್ಚಿತ್ತು. ಜೈಲು ದಾಖಲೆಗಳಲ್ಲಿ ತರಕಾರಿ ಖರೀದಿಯ ನಮೂದುಗಳಲ್ಲಿ ಅಕ್ರಮಗಳಿವೆ ಎಂದು ವರದಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಜಾನ್ ವಿರುದ್ಧ ನಾಳೆಯಿಂದ ದೇಗುಲಗಳಲ್ಲಿ ಸುಪ್ರಭಾತ ಅಭಿಯಾನ;

Sun May 8 , 2022
  ಬೆಂಗಳೂರು: ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವುಗೊಳಿಸುವಂತೆ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ನಡೆಸಲು ಸಿದ್ಧತೆ ನಡೆಸಿವೆ. ನಾಳೆ ಮುಂಜಾನೆ 5 ಗಂಟೆಗೆ ರಾಜ್ಯದ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ದೇವರನಾಮ, ಸುಪ್ರಭಾತ ಹಾಕುವ ಮೂಲಕ ಅಭಿಯಾನ ಆರಂಭವಾಗಲಿದೆ. ಈ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಹಿತಿ ನೀಡಿದ್ದು, ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವುಗೊಳಿಸುವಂತೆ […]

Advertisement

Wordpress Social Share Plugin powered by Ultimatelysocial