ಸಾಕು ನಾಯಿ ಕೊಂದು  ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಸಮೀಪದ ತೋಟದ ಮನೆಯಲ್ಲಿ ಕಟ್ಟಲಾಗಿದ್ದ ಸಾಕು ನಾಯಿಯ ಮೇಲೆ  ಚಿರತೆ ದಾಳಿ ಮಾಡಿತು.  ತೀವ್ರ ಆತಂಕ ಸೃಷ್ಟಿಸಿದ್ದ ಚಿರತೆಯನ್ನು, ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ತಾಲೂಕಿನ ಕೋಳೂರು ಸಮೀಪದ ಅರಣ್ಯ ಇಲಾಖೆ ನಿರ್ಮಿಸಿರುವ ಪ್ಲಾಂಟೇಷನ್ ಬಳಿ ಕಂಡು ಬರುತ್ತಿದ್ದ ಚಿರತೆ, ರಾತ್ರಿ ಹರೀಶ್ ಎನ್ನುವವರ ತೋಟದ ಮನೆಗೆ ನುಗ್ಗಿ, ಸಾಕು ನಾಯಿಯನ್ನು ಕೊಂದು ಹಾಕಿತ್ತು.ಅರಣ್ಯ ಇಲಾಖೆ ನಿರ್ಮಿಸಿರುವ ಪ್ಲಾಂಟೇಷನ್ಗೆ ಚಿರತೆ ಸೇರಿ ಈ ವ್ಯಾಪ್ತಿಯ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ದಾಳಿಯ ಭಯದಲ್ಲಿ ಜೀವನ ನಡೆಸುವಂತಾಗಿದೆ ಎಂದು ನೇರಳೆಘಟ್ಟ ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದರು . ಈ ಕುರಿತಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ಅದೇ ದಿನ ಕೋಳೂರು ಪ್ಲಾಂಟೇಷನ್ ಬಳಿ ಬೋನ್ ಅಳವಡಿಸಿ, ಚಿರತೆ ಸೆರೆಗೆ ಕ್ರಮಕೈಗೊಂಡಿದ್ದರು. ಇದರ ಬೆನ್ನಲ್ಲೇ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಾಮ್ರಾಟ್ ಪ್ರಥ್ವಿರಾಜ್ ಸಿನಿಮಾ ವೀಕ್ಷಿಸಿದ CM ಯೋಗಿ

Thu Jun 2 , 2022
  ಲಕ್ನೋ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ “ಸಾಮ್ರಾಟ್ ಪ್ರಥ್ವಿರಾಜ್” ಸಿನಿಮಾದ ವಿಶೇಷ ಪ್ರದರ್ಶನವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ (ಜೂನ್ 02) ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ವೀಕ್ಷಿಸಿದ್ದು, ರಾಜ್ಯದಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದು ಯೋಗಿ ಘೋಷಿಸಿದ್ದಾರೆ. ಲಕ್ನೋದ ಲೋಕ್ ಭವನ್ ನಲ್ಲಿ ಸಾಮ್ರಾಟ್ ಪ್ರಥ್ವಿರಾಜ್ ಚಿತ್ರದ ವಿಶೇಷ ಪ್ರದರ್ಶನ ನಡೆದಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ನಟ […]

Advertisement

Wordpress Social Share Plugin powered by Ultimatelysocial