ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್‍ಡೌನ್ ಆರಂಭವಾಗಿದೆ.ಯೂರೋಪ್ ರಾಷ್ಟ್ರಗಳಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆಯಾಗಿದ್ದು, ಮಾರ್ಚ್ 15 ರಿಂದ ಇಟಲಿಯಲ್ಲಿ ಲಾಕ್‍ಡೌನ್ ಘೋಷಣೆಯಾದರೆ, ಫ್ರಾನ್ಸ್ ನಲ್ಲೂ ಮಾರ್ಚ್ 17 ರಿಂದಲೂ ಲಾಕ್‍ಡೌನ್ ಮಾಡಲಾಗುವುದು ಎಂಬ ನಿರ್ಧಾರ ಹೊರಬಿದ್ದಿದೆ.

 

ಜರ್ಮನಿಯಲ್ಲೂ ಕೊರೊನಾ ಅಲೆ ಜೋರಾಗುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸೀಮಿತ ಪ್ರದೇಶಗಳಲ್ಲಿ ಲಾಕ್‍ಡೌನ್ ಮಾಡಲು ಜರ್ಮನಿ ನಿರ್ಧರಿಸಿದೆ, ಹಂಗೇರಿಯಲ್ಲಿ ನೈಟ್ ಕಫ್ರ್ಯೂ ಮಾಡಲು ಕ್ರಮ ಕೈಗೊಂಡರೆ, ಪೋಲ್ಯಾಂಡ್‍ನಲ್ಲಿ ಥಿಯೇಟರ್, ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಮತ್ತೆ ಬೀಗ ಹಾಕಲಾಗಿದೆ ಎಂದು ವರದಿಯಾಗಿದೆ.

 

ಯೂರೋಪ್ ರಾಷ್ಟ್ರಗಳಂತೆ ಭಾರತದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸೀಮಿತ ಪ್ರದೇಶಗಳ ಲಾಕ್ ಡೌನ್ ಪ್ರಕ್ರಿಯೆ ಆರಂಭವಾಗಿದೆ. ಹಾಗೆ ಕರ್ನಾಟಕದಲ್ಲಿ ಕಳೆದ ಒಂದೇ ದಿನದಲ್ಲಿ 1488 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಬರೋಬ್ಬರಿ 925 ಪ್ರಕರಣ ಪತ್ತೆಯಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಆಂಗ್ಲರನ್ನು ಬಗ್ಗು ಬಡಿಯಲು ಯಂಗ್‌ ಇಂಡಿಯಾ ರೆಡಿ.! ತಂಡಕ್ಕೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಆಯ್ಕೆ

Fri Mar 19 , 2021
ಇಂಗ್ಲೆಂಡ್‌ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಆಟಗಾರರನ್ನು ಬಿಸಿಸಿಐ ಪ್ರಕಟಿಸಿದೆ. ಇತ್ತೇಚಿಗೆ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಮಿಂಚಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣಗೆ ಆಯ್ಕೆಗಾರರು ಮಣೆ ಹಾಕಿದ್ದಾರೆ. ಆಸೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಶುಭ್ಮನ್ ಗಿಲ್ ಗೆ ಅವಕಾಶ ನೀಡಿದೆ.ಇನ್ನೂ ಭಾರತದ ಏಕದಿನ ತಂಡಕ್ಕೆ ಭುವನೇಶ್ವರ್ ಕುಮಾರ್‌, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್ ಮರಳಿದ್ದಾರೆ. ಟಿ-20 ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ […]

Advertisement

Wordpress Social Share Plugin powered by Ultimatelysocial