ಕೋವಿಡ್‌ ಪ್ರಕರಣ ಹೆಚ್ಚಳ, ಮತ್ತೆ ಲಾಕ್‌ಡೌನ್‌ ಜಾರಿ : ಸುಳಿವು ಕೊಟ್ಟ ಸಚಿವರು

 

ಮುಂಬೈ : ಕೋವಿಡ್ -19 ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿದೆ. ಅದ್ರಲ್ಲೂ ರಾಜ್ಯದಲ್ಲಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ(Maharashtra ) ಮತ್ತೆ ಲಾಕ್‌ಡೌನ್‌  ಭೀತಿ ಶುರುವಾಗಿದೆ.

ಜೊತೆಗೆ ಸಚಿವರೋರ್ವರು ಲಾಕ್‌ಡೌನ್‌ ಜಾರಿಯ ಕುರಿತು ಸುಳಿವು ಕೊಟ್ಟಿದ್ದಾರೆ.

ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಮೂರು ಅಲೆಗಳಿಂದಲೂ ಮಹಾರಾಷ್ಟ್ರ ತತ್ತರಿಸಿ ಹೋಗಿತ್ತು. ಆದರೆ ಕಳೆದ ಕೆಲ ತಿಂಗಳಿನಿಂದಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಡುವಲ್ಲೇ ಕೋವಿಡ್‌ ವೈರಸ್‌ ಸೋಂಕಿನ ಪ್ರಕರಣ ಹೆಚ್ಚಳವಾಗಲು ಆರಂಭವಾಗಿದೆ. ಅದ್ರಲ್ಲೂ ಮುಂಬೈ ಮಹಾನಗರದಲ್ಲಿಯೇ ಸೋಂಕಿತ ಪ್ರಕರಣ ಹೆಚ್ಚುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಲೇ ಇದೆ. ಇದು ರಾಜ್ಯ ಸರಕಾರದ ತಲೆನೋವಿಗೆ ಕಾರಣವಾಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ನಡುವಲ್ಲೇ, ಮುಂಬೈ ನಗರ ರಕ್ಷಕ ಸಚಿವ ಅಸ್ಲಾಮ್ ಶೇಖ್ ಕೋವಿಡ್ -19 ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಂದು ಲಾಕ್‌ಡೌನ್‌ (Lockdown)ಜಾರಿಯಾಗಲಿದೆ ಎಂದಿದ್ದಾರೆ. ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನಿಸಿದ್ರೆ, ಹಲವು ನಿರ್ಬಂಧವನ್ನು ಜಾರಿಗೊಳಿಸಲೇ ಬೇಕಾಗಿದೆ. ವಿಮಾನಯಾನ ಸೇವೆಯಲ್ಲಿ ಸದ್ಯ ನಿರ್ಬಂಧ ಜಾರಿಯಲ್ಲಿದೆ. ಜನರು ಕಾಳಜಿ ವಹಿಸದೇ ಇದ್ರೆ ಲಾಕ್‌ಡೌನ್‌ ಜಾರಿಯಾಗುವುದು ಖಚಿತ ಎಂದಿದ್ದಾರೆ.

ಮಹಾರಾಷ್ಟ್ರದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ‌ಮಹಾರಾಷ್ಟ್ರದಲ್ಲಿ ಮಂಗಳವಾರ 711 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ, ಹಿಂದಿನ ದಿನ 431 ರಿಂದ ತೀವ್ರ ಏರಿಕೆ ದಾಖಲಾಗಿದೆ.‌ ಇದು ಫೆಬ್ರವರಿ 27 ನಂತರದಲ್ಲಿ ದಾಖಲಾದ ಗರಿಷ್ಠ ದೈನಂದಿನ ಸೋಂಕಿತರ ಸಂಖ್ಯೆಯಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 2,745 ಹೊಸ ಕೊರೊಆ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಸಂಖ್ಯೆ ಈಗ 4,31,60,832 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಆರು ಸಾವುಗಳೊಂದಿಗೆ ಸಾವಿನ ಸಂಖ್ಯೆ 5,24,636 ಕ್ಕೆ ಏರಿಕೆ ಕಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧ್ವನಿವರ್ಧಕ ಆದೇಶ ಪಾಲಿಸದವರನ್ನ ಶೂಟ್ ಮಾಡ್ತೇನೆ; ಪ್ರಮೋದ್ ಮುತಾಲಿಕ್

Thu Jun 2 , 2022
ಹುಬ್ಬಳ್ಳಿ (ಮೇ 2): ಧ್ವನಿವರ್ಧಕ  ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದವರ ಮೇಲೆ ನಾನೇ ಗುಂಡಿಟ್ಟು ಹೊಡೀತೇನೆ ಎಂದು ಶ್ರೀರಾಮಸೇನೆ (Sri Rama sena) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್   ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ   ಮಾತನಾಡಿದ ಮುತಾಲಿಕ್, ರಾಜ್ಯ ಸರ್ಕಾರದ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದೇಶ ಪಾಲನೆ ಮಾಡದವರ ಮೇಲೆ ಗುಂಡೇಟು ಸುಪ್ರೀಂಕೋರ್ಟ್ ಅದೇಶ ಪಾಲನೆ ಮಾಡದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು […]

Advertisement

Wordpress Social Share Plugin powered by Ultimatelysocial