ವೈಕುಂಠ ಏಕಾದಶಿಯ ಮಹತ್ವವೇನು?????

 

 

ವೈಕುಂಠ ಏಕಾದಶಿಯ ಮಹತ್ವ ಬ್ರಹ್ಮ, ವಿಷ್ಣು, ಮಹೇಶ್ವರನನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತೆ. ಸೃಷ್ಟಿಕರ್ತ ಬ್ರಹ್ಮನಿರುವ ತಾಣ ಬ್ರಹ್ಮಲೋಕ ರಕ್ಷಕ ವಿಷ್ಣು ಇರುವ ನೆಲೆ ವೈಕುಂಠ ಮತ್ತು ಮಹಾದೇವ ಮಹೇಶ್ವರನಿರುವುದು ಕೈಲಾಸದಲ್ಲಿ. ಆದ್ರೆ ವಿಶೇಷ ಅಂದ್ರೆ ವೈಕುಂಠದಲ್ಲಿ ಯಾವುದೇ ಕಷ್ಟ-ಕಾರ್ಪಣ್ಯಗಳು ಇರುವುದಿಲ್ಲವಂತೆ. ಬರೀ ಸಂತೋಷವೇ ತುಂಬಿರುತ್ತದೆ. ಹೀಗಾಗಿ ವೈಕುಂಠದಲ್ಲಿ ಸ್ಥಾನ ಪಡೆಯಲು ಜನ ಹಂಬಲಿಸುತ್ತಾರೆ. ವೈಕುಂಠ ಅಥವಾ ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, (ಸಂತರು ಮತ್ತು ವಿದ್ವಾಂಸರು) ಮೋಕ್ಷ ಅಥವಾ ಜನ್ಮ, ಜೀವನ ಮತ್ತು ಮರಣದ ವಿಷವರ್ತುಲದಿಂದ ವಿಮೋಚನೆಯನ್ನು ಬಯಸುವವರು, ವೈಕುಂಠ ಏಕಾದಶಿ ತಿಥಿಯಂದು ವ್ರತವನ್ನು ಆಚರಿಸುವ ಮೂಲಕ ತಮ್ಮ ಅತ್ಯುನ್ನತ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವ ಭಕ್ತರಿಗೆ ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ಧಾರ್ಥ್ ಕ್ಷಮೆ ಕೋರಿರುವುದು ಸಂತಸ ತಂದಿದೆ :ಸೈನಾ ನೆಹ್ವಾಲ್

Thu Jan 13 , 2022
ಆಕ್ಷೇಪಾರ್ಹ ಹೇಳಿಕೆ ಕುರಿತಾಗಿ ನಟ ಸಿದ್ಧಾರ್ಥ್ ಕ್ಷಮೆ ಕೋರಿಜರುವುದು  ಸಂತಸ ತಂದಿದೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಬಿಜೆಪಿ ನಾಯಕಿಯಾಗಿರುವ ಸೈನಾ ನೆಹ್ವಾಲ್ ಅವರು ಬುಧವಾರ ಹೇಳಿದ್ದಾರೆ. ಸಿದ್ದಾರ್ಥ್ ಕ್ಷಮೆಯಾಚನೆ ಕುರಿತು ಪ್ರತಿಕ್ರಿಯೆ ನೀಡಿರುವ ಸೈನಾ ನೆಹ್ವಾಲ್ ಅವರು, , ಮೊದಲು ನನ್ನ ಬಗ್ಗೆ ಹೇಳಿದ್ದರು. ಇದೀಗ ಕ್ಷಮೆಯಾಚಿಸಿದ್ದಾರೆ. ಈ ವಿಚಾರ ಯಾವ ಕಾರಣಕ್ಕೆ ಇಷ್ಟೊಂದು ವೈರಲ್ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿರುವುದನ್ನು ನೋಡಿ […]

Advertisement

Wordpress Social Share Plugin powered by Ultimatelysocial