LPG ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಸರಬರಾಜಿಗೆ ಪ್ರತ್ಯೇಕ ಶುಲ್ಕ ಕೊಡಬೇಡಿ

ರಾಯಚೂರು: ಅಡುಗೆ ಅನಿಲದ ಸಿಲಿಂಡರ್ ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ.

ಗ್ಯಾಸ್ ಏಜೆನ್ಸಿಗಳು ಗೃಹ ಬಳಿಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡುವುದು ಗ್ಯಾಸ್ ಏಜೆನ್ಸಿಗಳ ಜವಾಬ್ದಾರಿ.

ಆದ್ದರಿಂದ ಯಾವುದೇ ಕಾರಣಕ್ಕೂ ಅನಿಲ ಸಿಲಿಂಡರನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕರ ಸ್ಥಳಗಳಲ್ಲಿ, ಮೈದಾನಗಳಲ್ಲಿ ಇಟ್ಟು ಮಾರಾಟ ಮಾಡುವಂತಿಲ್ಲ,

ಸಿಲಿಂಡರ್ ಮನೆಗೆ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ಹುಡುಗ ಸಾರ್ವಜನಿಕರಲ್ಲಿ ಬಿಲ್ ನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದ್ದಲ್ಲಿ, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ಹಾಗೂ ದೂರವಾಣಿ ಸಂಖ್ಯೆ 08532-231678 ಅಥವಾ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿ20 ಸರಣಿಯಿಂದ ಹೊರಗುಳಿದ KL ರಾಹುಲ್, ರಿಷಬ್ ಪಂತ್ ಗೆ ಉಪನಾಯಕನಾಗಿ ಬಡ್ತಿ

Tue Feb 15 , 2022
ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ ನಂತರ, ಭಾರತ ವೈಟ್ ಬಾಲ್ ತಂಡದ ಉಪನಾಯಕ ಕೆ.ಎಲ್. ರಾಹುಲ್ ಗಾಯಗೊಂಡು ಹೊರಗುಳಿದಿದ್ದಾರೆ. ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಗೆ ರಿಷಬ್ ಪಂತ್ ಅವರನ್ನು ಉಪನಾಯನನ್ನಾಗಿ ಆಯ್ಕೆ ಮಾಡಿದೆ. ತನ್ನ ಸಹೋದರಿಯ ಮದುವೆಗಾಗಿ ಸರಣಿಯ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಂಡಿದ್ದ ಕೆ.ಎಲ್. […]

Advertisement

Wordpress Social Share Plugin powered by Ultimatelysocial