ʼಲೌರಸ್ ವಿಶ್ವ ಕ್ರೀಡಾ ಪ್ರಶಸ್ತಿʼಗೆ ಚಿನ್ನದ ಹುಡುಗ ʼನೀರಜ್ ಚೋಪ್ರಾʼ ನಾಮನಿರ್ದೇಶನ

ನವದೆಹಲಿ : ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ( Neeraj Chopra) ಅವರು 2022ರ ಲೌರಸ್ ವರ್ಲ್ಡ್ ಬ್ರೇಕ್ ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ(Laureus World Breakthrough of the Year Award) ನಾಮ ನಿರ್ದೇಶನಗೊಂಡಿದ್ದಾರೆ.ಸ್ಟಾರ್ ಅಥ್ಲೀಟ್ ಪ್ರಶಸ್ತಿಗಾಗಿ ಆರು ನಾಮನಿರ್ದೇಶಿತರಲ್ಲಿ ನಿರಾಜ್‌ ಒಬ್ಬರಾಗಿದ್ದು, ಡ್ಯಾನಿಲ್ ಮೆಡ್ವೆಡೆವ್, ಪೆಡ್ರಿ, ಎಮ್ಮಾ ರಾಡುಕಾನು, ಯುಲಿಮರ್ ರೋಜಾಸ್ ಮತ್ತು ಅರಿರ್ನೆ ಟಿಟ್ಮಸ್ ಅವರಂತಹ ಗ್ಲೋಬಲ್‌ ಐಕಾನ್ʼಗಳೊಂದಿಗೆ ನೀರಜ್ ನಾಮನಿರ್ದೇಶನಗೊಂಡಿದ್ದಾರೆ.ಒಲಿಂಪಿಕ್ಸ್ʼನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗುವ ಮೂಲಕ ದೇಶಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ, 2019ರಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಮತ್ತು 20-2021ರ ಲೌರಸ್ ಸ್ಪೋರ್ಟಿಂಗ್ ಮೊಮೆಂಟ್ ಪ್ರಶಸ್ತಿ ಗೆದ್ದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ನಂತ್ರ ಲೌರಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೂರನೇ ಭಾರತೀಯ ಕ್ರೀಡಾಪಟು ಇವರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಲ್ಮಾನ್ ಖಾನ್ ಇನ್ನು ಒಬ್ಬಂಟಿಯಾಗಿಲ್ಲ ಅವರ ಸಂಬಂಧದ ಸ್ಥಿತಿಯ ಬಗ್ಗೆ ಬಹಿರಂಗಪಡಿಸುವಿಕೆ;

Wed Feb 2 , 2022
ಬಿಗ್ ಬಾಸ್ 15 ರ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ತಾನು ಸಿಂಗಲ್ ಅಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಖಚಿತಪಡಿಸಿದ್ದಾರೆ. 56 ವರ್ಷ ವಯಸ್ಸಿನ ನಟ ತಾನು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಬಹಿರಂಗಪಡಿಸಲಿಲ್ಲ ಆದರೆ ರೊಮೇನಿಯನ್ ನಟ ಯುಲಿಯಾ ವಂಟೂರ್ ಅವರೊಂದಿಗಿನ ಪ್ರಣಯವು ರಹಸ್ಯವಾಗಿಲ್ಲ. ಗಾಯಕ-ನಟ ಶೆಹನಾಜ್ ಗಿಲ್ ಅವರು ತಮ್ಮ ಚಮತ್ಕಾರಿ ವ್ಯಕ್ತಿತ್ವಕ್ಕಾಗಿ ಜನಪ್ರಿಯರಾಗಿದ್ದಾರೆ ಮತ್ತು ಬಿಗ್ ಬಾಸ್ 15 ರ ಸೀಸನ್ ಅಂತಿಮ […]

Advertisement

Wordpress Social Share Plugin powered by Ultimatelysocial