ಮಹಾಶಿವರಾತ್ರಿಯ ಸುಸಂದರ್ಭದಲ್ಲಿ ಗಾನಪ್ರಿಯ ಶಂಕರನಿಗೆ ಗಾನ ನಮನ ಸಲ್ಲಿಸಿದ ಕುಮಾರಿ ಶರಯು ಯತೀಶ್.

ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ. ಈ  ಸಂದರ್ಭದಲ್ಲಿ ಕುಮಾರಿ ಶರಯು ಯತೀಶ್ ಗಾನಪ್ರಿಯ ಶಂಕರನಿಗೆ ಗಾನ ನಮನ ಸಲ್ಲಿಸಿದ್ದಾರೆ.ನಗರದ ಜೆ.ಸಿ.ಪಾರ್ಕ್ ನಲ್ಲಿ ನಡೆಯುವ ಅದ್ದೂರಿ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ, ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಶರಯು ವೈ ಯೂಟ್ಯೂಬ್ ಚಾನಲ್ ಮೂಲಕ ಪರಶಿವನ ಕುರಿತಾದ ಈ ಹಾಡು ಲೋಕಾರ್ಪಣೆಯಾಗಿದೆ.ಪ್ರದ್ಯುಮ್ನ ನರಹಳ್ಳಿ ಹಾಗೂ ಈಶ್ವರ್ ಶ್ಯಾಮರಾವ್ ಬರೆದಿರುವ ಈ ಭಕ್ತಿಗೀತೆಯನ್ನು ಶರಯು ಸುಶ್ರಾವ್ಯವಾಗಿ ಹಾಡಿದ್ದಾರೆ ಹಾಗೂ ಅಭಿನಯಿಸಿದ್ದಾರೆ. ಈ ಹಿಂದೆ ಕೂಡ ಶರಯು ಅವರು ಸಾಕಷ್ಟು ಹಾಡುಗಳನ್ನು ಹಾಡಿದ್ದು, ಕೇಳುಗರ ಮನಗೆದ್ದಿದೆ.ಯತೀಶ್ ವೆಂಕಟೇಶ್ (ರಾಕ್ ಲೈನ್ ವೆಂಕಟೇಶ್ ಪುತ್ರ) ನಿರ್ಮಿಸಿರುವ ಭಕ್ತಿಪ್ರಧಾನ ಈ ವಿಡಿಯೋ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ರಾಬರ್ಟ್ ಖ್ಯಾತಿಯ ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಅದ್ಭುತವಾದ ಸೆಟ್ ಹಾಕಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿರುವ ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಯತೀಶ್ ಅವರ ಪತ್ನಿ ಹಾಗೂ ಶರಯು ತಾಯಿ ಸಿಂಧೂರಿ ಅವರ ವಸ್ತ್ರವಿನ್ಯಾಸ ಈ ಭಕ್ತಿಗೀತೆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಲ್ಲಿ ಮೇಕೆದಾಟು ಪಾದಯಾತ್ರೆ

Tue Mar 1 , 2022
ಬೆಂಗಳೂರು, ಮಾ.1- ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಆರಂಭಿಸಿರುವ ಎರಡನೇ ಹಂತದ ಪಾದಯಾತ್ರೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಬೆಂಗಳೂರಿನಾದ್ಯಂತ ಸಂಚರಿಸಲಿದೆ.   ಬೆಳಗ್ಗೆ ಕೆಂಗೇರಿ ಬಳಿಯ ಪೂರ್ಣಿಮಾ ಕಲ್ಯಾಣ ಮಂಟಪದಿಂದ ಆರಂಭವಾಗಿರುವ ಪಾದಯಾತ್ರೆ ಕೆಂಚೇನಹಳ್ಳಿ ಕ್ರಾಸ್, ಜಯರಾಮ್‍ದಾಸ್, ರೈಲ್ವೆ ಗೇಟ್ ಜಂಕ್ಷನ್, ಜ್ಞಾನಭಾರತಿ ಜಂಕ್ಷನ್, ಆರ್‍ಆರ್ ನಗರ್ ಆರ್ಚ್ ಜಂಕ್ಷನ್, ಪಂತರಪಾಳ್ಯ ಜಂಕ್ಷನ್, ನಾಯಂಡನಹಳ್ಳಿ ಜಂಕ್ಷನ್ ಬಲ ತಿರುವು ಪಡೆದು ದೇವೇಗೌಡ ವೃತ್ತ, ಪಿಇಎಸ್ ಕಾಲೇಜು ಜಂಕ್ಷನ್, […]

Advertisement

Wordpress Social Share Plugin powered by Ultimatelysocial