ಮಹಾಶಿವರಾತ್ರಿ; ಭಕ್ತರಿಂದ ಹಂಪಿ ವಿರೂಪಾಕ್ಷನ ದರ್ಶನ

ಹೊಸಪೇಟೆ (ವಿಜಯನಗರ): ಮಹಾಶಿವರಾತ್ರಿ ನಿಮಿತ್ತ ನೂರಾರು ಸಂಖ್ಯೆಯ ಭಕ್ತರು ಸೋಮವಾರ ಹಂಪಿಗೆ ಬಂದು ವಿರೂಪಾಕ್ಷೇಶ್ವರನ ದರ್ಶನ ಪಡೆದರು.

ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ದೇಗುಲದ ವರೆಗೆ ಬರಿಗಾಲಲ್ಲಿ ನಡೆದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವಿವಿಧ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದದ್ದರಿಂದ ರಥಬೀದಿ, ದೇವಸ್ಥಾನದ ಪರಿಸರದಲ್ಲಿ ಜನಜಾತ್ರೆ ಕಂಡು ಬಂದಿತು.

ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ವಿರೂಪಾಕ್ಷೇಶ್ವರನಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ನೆರವೇರಿಸಲಾಯಿತು. ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ, ನೀಲಕಂಠ ದೇವಸ್ಥಾನದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ರಾಜಧಾನಿ ಕೀವ್ ಸನಿಹ 40 ಮೈಲಿ ಉದ್ದಕ್ಕೂ ಬೀಡುಬಿಟ್ಟಿದೆ ರಷ್ಯಾ ಸೇನೆ

Tue Mar 1 , 2022
ಕೀವ್: ಉಕ್ರೇನ್‌ ರಾಜಧಾನಿ ಕೀವ್‌ನಿಂದ ಉತ್ತರಕ್ಕೆ 40 ಮೈಲಿಯಷ್ಟು ದೂರದವರೆಗೆ ರಷ್ಯಾ ಪಡೆಗಳು ಬೀಡುಬಿಟ್ಟಿರುವುದು ಅಮೆರಿಕದ ‘ಮ್ಯಾಕ್ಸರ್ ಟೆಕ್ನಾಲಜೀಸ್’ ಕಂಪನಿಯ ಉಪಗ್ರಹ ಚಿತ್ರದಿಂದ ತಿಳಿದುಬಂದಿದೆ. ರಷ್ಯಾ ಪಡೆಗಳು ಕೀವ್‌ನಿಂದ ಉತ್ತರಕ್ಕೆ 17 ಮೈಲಿ ದೂರದಿಂದ ಸುಮಾರು 40 ಮೈಲಿವರೆಗೆ ವ್ಯಾಪಿಸಿವೆ.   ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್‌ಗಳು, ಫಿರಂಗಿ, ಬೆಂಗಾವಲು ವಾಹನಗಳು ಇದರಲ್ಲಿ ಸೇರಿವೆ. ದಕ್ಷಿಣ ಬೆಲರೂಸ್‌ನಲ್ಲಿ ಯುದ್ಧ ಹೆಲಿಕಾಪ್ಟರ್‌ಗಳನ್ನು ಮತ್ತು ಭೂಸೇನೆಯನ್ನು ನಿಯೋಜಿಸಿರುವುದೂ ಉಪಗ್ರಹ ಚಿತ್ರದಿಂದ ಗೊತ್ತಾಗಿದೆ. ಈ ಮಧ್ಯೆ, ಉಕ್ರೇನ್‌ನ […]

Advertisement

Wordpress Social Share Plugin powered by Ultimatelysocial