ಮಹಿಳೆಯರ ಮದುವೆ ವಯಸ್ಸಿನ ಮಿತಿ 21ವರ್ಷಕ್ಕೆ ಏರಿಕೆ

ಮಹಿಳೆಯರ ಮದುವೆ ವಯಸ್ಸಿನ ಮಿತಿ 21ವರ್ಷಕ್ಕೆ ಏರಿಕೆ

ಹಲವಾರು ತಜ್ಞರೊಟ್ಟಿಗೆ ವ್ಯಾಪಕವಾದ ಚರ್ಚೆ ನಡೆಸಿದ ಬಳಿಕ, ಅದರಲ್ಲೂ ಯುವ ವಯಸ್ಸಿನ ಮಹಿಳೆಯರೊಟ್ಟಿಗೆ ಆಳವಾಗಿ ಚರ್ಚಿಸಿದ ನಂತರ ಮದುವೆ ವಯಸ್ಸಿನ ಮಿತಿ ಏರಿಕೆಗೆ ಶಿಫಾರಸ್ಸು ಮಾಡಲಾಗಿದೆ. ಭಾರತದಲ್ಲಿ ಯುವತಿಯರಿಗೆ ಕನಿಷ್ಠ 18ವರ್ಷ ಆದ ವಿನಃ ಮದುವೆ ಮಾಡುವಂತೆ ಇಲ್ಲ ಎಂಬ ಕಾನೂನು ಇತ್ತು.

ಅದನ್ನೀಗ ಬದಲಿಸಿ, ಮಹಿಳೆಯರ ಮದುವೆ ವಯಸ್ಸಿನ ಮಿತಿಯನ್ನು 21ಕ್ಕೆ ಏರಿಸುವ ಪ್ರಸ್ತಾಪವನ್ನು ಬುಧವಾರ ಕೇಂದ್ರ ಸಂಪುಟ ಅಂಗೀಕರಿಸಿದೆ. ಯುವತಿಯರ ಮದುವೆ ವಯಸ್ಸನ್ನು 18ವರ್ಷಕ್ಕೆ ನಿಗದಿಪಡಿಸಲಾಗಿದೆ. ಅದನ್ನು ಮರುಪರಿಶೀಲನೆ ಮಾಡಲಾಗುವುದು. ಇದಕ್ಕಾಗಿ ಒಂದು ಸಮಿತಿ ರಚಿಸಲಾಗುವುದು ಎಂದು 2020ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಒಂದೂವರೆ ವರ್ಷದ ಬಳಿಕ ಅದನ್ನೀಗ ಅನುಷ್ಠಾನಕ್ಕೆ ತರಲು ಕೇಂದ್ರ ಸಂಪುಟ ಮುಂದಡಿ ಇಟ್ಟಿದೆ. ದೇಶದಲ್ಲಿ ಇರುವ ಬಾಣಂತಿ-ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು, ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸುವುದರಿಂದ, ಸಹಜವಾಗಿಯೇ ತಾಯ್ತನದ ವಯಸ್ಸಿನ ಮಿತಿಯೂ ಏರುತ್ತದೆ. ಹೀಗಾಗಿ ಒಂದಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಒಂದು ಟಾಸ್ಕ್​ಫೋರ್ಸ್ ರಚಿಸಿತ್ತು. ಈ ಟಾಸ್ಕ್ ಫೋರ್ಸ್​ನ ಶಿಫಾರಸ್ಸಿನ ಅನ್ವಯ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಟೀಂ ಇಂಡಿಯಾ ಆಟಗಾರರ 4 ವಿಶ್ವದಾಖಲೆಗಳು

Thu Dec 16 , 2021
ಪ್ರಸ್ತುತ ವರ್ಷದಲ್ಲಿ ಟೀಂ ಇಂಡಿಯಾ ಎರಡು ಐಸಿಸಿ ಟ್ರೋಫಿಗಳನ್ನ ಕೈ ಚೆಲ್ಲಿದರೂ ಸಹ ಟೆಸ್ಟ್ ಕ್ರಿಕೆಟ್ ಹಾಗೂ ಲಿಮೆಟೆಡ್ ಓವರ್ ಫಾರ್ಮೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. 2020ರಲ್ಲಿ ಕೊರೊನಾವೈರಸ್ ಪರಿಣಾಮದಿಂದಾಗಿ ಹೆಚ್ಚಿನ ಕ್ರಿಕೆಟ್ ಸರಣಿ ಮುಂದೂಡಿಲ್ಪಟ್ಟಿದ್ದರೂ ಸಹ, 2021ರಲ್ಲಿ ಕ್ರಿಕೆಟ್ ಅಷ್ಟೇ ಅಲ್ಲದೇ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. 2021 ರಲ್ಲಿ, ದ್ವಿಪಕ್ಷೀಯ ಸರಣಿಯಾಗಿರಲಿ ಅಥವಾ ಐಸಿಸಿ ಪಂದ್ಯಾವಳಿಯಾಗಿರಲಿ ಕೆಲವು ಕ್ರಿಕೆಟ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುವುದರಲ್ಲಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ ಭಾರತ […]

Advertisement

Wordpress Social Share Plugin powered by Ultimatelysocial