ಮಲೆಯಾಳಂ ಸೂಪರ್ ಹಿಟ್ ಚಲನಚಿತ್ರ “ಫೋರೆನ್ಸಿಕ್” ಈಗ ಕನ್ನಡಕ್ಕೆ. ಕನ್ನಡದಲ್ಲಿ “ಅಂತಿಮಕ್ಷಣ” ಎಂಬ ಹೆಸರಿನಿಂದ ಬಿಡುಗಡೆ.

ಮಲೆಯಾಳಂ ನಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಹೆಚ್ಚು ಬರುತ್ತದೆ ಎಂಬ ಮಾತು ಎಲ್ಲೆಡೆ ಇದೆ. ಆ ಪೈಕಿ ವಿಭಿನ್ನ ಕಥಾಹಂದರ ಹೊಂದಿರುವ “ಫೋರೆನ್ಸಿಕ್” ಚಿತ್ರವೂ ಒಂದು. ಈ ಚಿತ್ರ ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದಿತ್ತು.

ಈ ಚಿತ್ರ ನೋಡಿ ಪ್ರಭಾವಿತರಾದ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು “ಅಂತಿಮ‌ ಕ್ಷಣ” ಎಂಬ ಹೆಸರಿನಿಂದ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಬಿಡುಗಡೆಯ ದಿನಾಂಕ ‌ತಿಳಿಯಲಿದೆ.

ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಟೊವಿನೊ‌ ಥಾಮಸ್, ರೆಬಾ ಮೋನಿಕಾ, ಮಮತ ಮೋಹನದಾಸ್,‌ ಪ್ರತಾಪ್ ಪೋಪನ್ , ಜಿಜುಜಾನ್ ಮುಂತಾದವರಿದ್ದಾರೆ.

ಜೆಕ್ಸ್ ಬಿಜೋಯ್ ಸಂಗೀತ ನಿರ್ದೇಶನ, ಅಖಿಲ್ ಜಾರ್ಜ್ ಛಾಯಾಗ್ರಹಣ, ಶಮೀರ್ ಅಹಮದ್ ಸಂಕಲನ ಈ ಚಿತ್ರಕ್ಕಿದೆ.
ಬಿ.ಮಂಜುನಾಥ್ ಹಾಗೂ ರಜನೀಶ್ ದೇವ ಸಂಭಾಷಣೆ ಬರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಪುಟಿನ್ ಉಕ್ರೇನಿಯನ್ ಸೈನಿಕರಿಗೆ ಹೇಳಿದರು!!

Thu Feb 24 , 2022
ಫೆಬ್ರವರಿ 24 ರಂದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮವನ್ನು ಘೋಷಿಸಿದರು ಉಕ್ರೇನಿಯನ್ ಸೈನಿಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು. ಅವರ ಬೇಡಿಕೆಯನ್ನು ಅನುಸರಿಸುವವರಿಗೆ ಯುದ್ಧ ವಲಯವನ್ನು ತೊರೆದು ಅವರ ಕುಟುಂಬಗಳಿಗೆ ಮರಳಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. “ಕೈವ್ ಆಡಳಿತದಿಂದ ಎಂಟು ವರ್ಷಗಳಿಂದ ಕಿರುಕುಳ ಮತ್ತು ನರಮೇಧವನ್ನು ಅನುಭವಿಸುತ್ತಿರುವ ಜನರನ್ನು ರಕ್ಷಿಸುವುದು ಮಿಲಿಟರಿ ಕ್ರಮದ ಗುರಿಯಾಗಿದೆ. ಇದಕ್ಕಾಗಿ ನಾವು ಉಕ್ರೇನ್‌ನ ಸಶಸ್ತ್ರೀಕರಣ ಮತ್ತು ನಿರಾಕರಣೆಗೆ […]

Advertisement

Wordpress Social Share Plugin powered by Ultimatelysocial