2024ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಮಮತಾ ಬ್ಯಾನರ್ಜಿ

 

ಕೋಲ್ಕತ್ತ: ಬಿಜೆಪಿಯು 2024ರಲ್ಲಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 40ಕ್ಕೆ ಏರಿಕೆಯಾಗಿದೆ.

ಆದರೆ ಬಂಗಾಳದಲ್ಲಿ ಶೇ 45ಕ್ಕೆ ಇಳಿಕೆಯಾಗಿದೆ. ಮಾಧ್ಯಮ ವಿಚಾರಣೆಗಳು ಮುಂದುವರಿಯುತ್ತಿವೆ. ಅವುಗಳು ಜನರನ್ನೇ ಆರೋಪಿಗಳನ್ನಾಗಿಸುತ್ತಿವೆ, ಬಂಗಾಳದ ಬಗ್ಗೆ ತಪ್ಪುಕಲ್ಪನೆ ಹರಡಲು ಬಯಸುತ್ತಿವೆ ಎಂದು ಹೇಳಿದ್ದಾರೆ.

ಅವರಿಗೆ (ಬಿಜೆಪಿ) ಕೆಲಸವಿಲ್ಲ. 3-4 ಏಜೆನ್ಸಿಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳನ್ನು ತಮ್ಮ ತೆಕ್ಕೆಗೆ ತೆಗದುಕೊಳ್ಳುವುದೇ ಅವರ ಕೆಲಸ. ಅವರು ಮಹಾರಾಷ್ಟ್ರ ಸರ್ಕಾರವನ್ನು ಸ್ವಾಧೀನಕ್ಕೆ ತೆಗೆದುಕೊಂಡರು, ಈಗ ಜಾರ್ಖಂಡ್‌ನಲ್ಲಿ ಅದೇ ಕೆಲಸ ಮಾಡುತ್ತಿದ್ದಾರೆ. ಆದರೆ, ಬಂಗಾಳದಲ್ಲಿ ಅವರನ್ನು ಸೋಲಿಸಲಾಗಿದೆ. ಬಂಗಾಳವನ್ನು ಒಡೆಯುವುದು ಅವರಿಗೆ ಸುಲಭವಿಲ್ಲ ಎಂದು ಮಮತಾ ಹೇಳಿರುವುದಾಗಿ ‘ಎಎನ್‌ಐ’ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ T20I ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿರುವ ಕೆಎಲ್ ರಾಹುಲ್ ಹೆಚ್ಚಿನ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ

Wed Jul 27 , 2022
ಶುಕ್ರವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ T20I ಸರಣಿಯಲ್ಲಿ ಭಾರತ ಕ್ರಿಕೆಟಿಗ ಕೆಎಲ್ ರಾಹುಲ್ ಭಾಗವಹಿಸುವ ಸಾಧ್ಯತೆಯಿಲ್ಲ. ಕಳೆದ ವಾರ ರಾಹುಲ್ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದರು ಆದರೆ ಬಿಸಿಸಿಐ ವೈದ್ಯಕೀಯ ತಂಡವು ಬ್ಯಾಟರ್‌ಗೆ ಕನಿಷ್ಠ ಇನ್ನೊಂದು ವಾರ ವಿಶ್ರಾಂತಿ ನೀಡುವಂತೆ ಸೂಚಿಸಿದೆ ಎಂದು ವರದಿಯಾಗಿದೆ. ಫಿಟ್‌ನೆಸ್‌ಗೆ ಒಳಪಟ್ಟಿರುವ ಭಾರತದ T20I ತಂಡದಲ್ಲಿ ರಾಹುಲ್ ಅವರನ್ನು ಹೆಸರಿಸಲಾಯಿತು ಆದರೆ ವೈರಸ್‌ಗೆ ಅವರ ಧನಾತ್ಮಕ ಪರೀಕ್ಷೆಯ […]

Advertisement

Wordpress Social Share Plugin powered by Ultimatelysocial