ಮನೆಗೆ ಮರಳಿದ ಸೂಪರ್​ ಸ್ಟಾರ್​ ರಜನಿಕಾಂತ್​…!

ಭಾರತ ಚಿತ್ರರಂಗದ ಸೂಪರ್​ ಸ್ಟಾರ್​, ತಲೈವಾ ರಜನಿಕಾಂತ್​ ಚಿಕಿತ್ಸೆ ಬಳಿಕ ಮರಳಿ ಮನೆ ಸೇರಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ಆಗಿ ಮನೆಗೆ ಮರಳಿದ್ದಾರೆ. ಅಕ್ಟೋಬರ್‌ 28ರಂದು ಎದೆ ನೋವು ಹಾಗೂ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ರಜನಿಕಾಂತ್​ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗಷ್ಟೇ  ರಜನಿ ಸಣ್ಣ ಶಸ್ತ್ರಚಿಕಿತ್ಸೆ  ಒಂದಕ್ಕೆ ಒಳಗಾಗಿದ್ದರು.  ಬಳಿಕ ಸೂಪರ್‌ಸ್ಟಾರ್‌ ರಜನಿಕಾಂತ್‌ ಚೇತರಿಸಿಕೊಂಡಿದ್ದರು. ಆದರೆ ರೂಟಿನ್​ ಚೆಕ್​ಅಪ್​ಗೆ ಬಂದಾಗ ರಜನಿಕಾಂತ್​ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ಅವರು ಕೂಡ ರಜನಿಕಾಂತ್‌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.  ರಜನಿಕಾಂತ್​ ಆರೋಗ್ಯವಾಗಿದ್ದಾರೆ,  ಆತಂಕ ಪಡುವ ಯಾವ ಅಗತ್ಯವೂ ಇಲ್ಲ ಎಂದು ವೈದ್ಯರು ತಿಳಿಸಿದ್ದರು.  ಈ ವಿಚಾರ ಆತಂಕದಲ್ಲಿದ್ದ ಅವರ ಅಭಿಮಾನಿಗಳಿಗೆ ಸಮಾಧಾನ ತಂದಿದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಮತ್ತು ಚಿರಂಜೀವಿ ಸರ್ಜಾ ದೊಡ್ಡ ಪಾಠ ಕಲಿಸಿ ಹೋಗಿದ್ದಾರೆ...!

Mon Nov 1 , 2021
 ಕಳೆದ ಒಂದೂವರೆ ವರ್ಷದಲ್ಲಿ ಕನ್ನಡ ಚಿತ್ರರಂಗ ಎರಡು ಅತಿ ದೊಡ್ಡ ಆಘಾತಗಳನ್ನು ಕಂಡಿದ್ದಾರೆ. ಒಂದು ಕಳೆದ ವರ್ಷ ಜನವರಿಯಲ್ಲಿ ಕೇವಲ 39 ವರ್ಷಕ್ಕೆ ಉಸಿರು ಚೆಲ್ಲಿದ ಚಿರಂಜೀವಿ ಸರ್ಜಾ ಸಾವು…ಮತ್ತೊಂದು ಅಕ್ಟೋಬರ್​​ನಲ್ಲಿ ಧಿಡೀರನೆ ಮರೆಯಾದ ಪವರ್ ಸ್ಟಾರ್  ಪುನೀತ್ ರಾಜ್ಕುಮಾರ್ ಅಂತ್ಯ. ಈ ಎರಡೂ ಬಹುಶಃ ಬಹು ದೀರ್ಘಕಾಲದವರಗೆ ಜನರನ್ನು ಕಾಡುವ ನೋವುಗಳು. ಅಭಿಮಾನಿಗಳಿಗೆ, ಈ ನಟರ ಪರಿಚಯವೇ ಇಲ್ಲದವರನ್ನೇ ಅವರ ಸಾವು ಇಷ್ಟರಮಟ್ಟಿಗೆ ತಟ್ಟಿರುವಾಗ ಅವರ ಕುಟುಂಬಸ್ಥರ ಪಾಡು […]

Advertisement

Wordpress Social Share Plugin powered by Ultimatelysocial