ಮನೆಯಲ್ಲಿಯೇ ಮಾಡಿ ನೈಸರ್ಗಿಕ ಫೇಸ್‌ಪ್ಯಾಕ್‌

ಫೇಸ್‌ಪ್ಯಾಕ್‌ಗೆಂದು ಬ್ಯೂಟಿ ಪಾರ್ಲರ್‌ಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿ ತುಂಬಾ ಸುಲಭವಾಗಿ ಫೇಸ್‌ಪ್ಯಾಕ್‌ ಮಾಡಿಕೊಳ್ಳಬಹುದು. ಮನೆಯಲ್ಲಿಯೇ ಇರುವ ಕೆಲ ಪಾದಾರ್ಥಗಳಿಂದ ಫೇಸ್‌ಪ್ಯಾಕ್‌ ರೆಡಿ ಮಾಡಿಕೊಳ್ಳಬಹುದು.ಇದರಿಂದಾಗಿ ತ್ವಚೆಗೆ ನ್ಯಾಚುರಲ್‌ ಟಚ್‌ ಕೊಟ್ಟ ಹಾಗಾಗುತ್ತದೆ. ಆದಷ್ಟು ಕೆಮಿಕಲ್‌ ಇಲ್ಲದ ಫೇಸ್‌ ಪ್ಯಾಕ್‌ಗಳನ್ನು ಬಳಸಿದರೆ ಒಳ್ಳೆಯದು. ತ್ವಚೆಯ ಆರೈಕೆಗೆ ಮನೆಯಲ್ಲಿಯೇ ನೈಸರ್ಗಿಕವಾಗಿ ಫೇಸ್‌ಪ್ಯಾಕ್‌ ಮಾಡಿಕೊಳ್ಳಿ.ಕಡಲೆ ಹಿಟ್ಟು, ನಿಂಬೆ ರಸ, ಜೇನುತುಪ್ಪದ ಫೇಸ್‌ಪ್ಯಾಕ್‌ :ನಿಂಬೆಯಲ್ಲಿ ವಿಟಮಿನ್‌ ಸಿ ಮತ್ತು ಸಿಟ್ರಿಕ್‌ ಆಮ್ಲವಿರುತ್ತದೆ. ಈ ಎರಡು ಅಂಶಗಳು ತ್ವಚೆಯ ಆರೋಗ್ಯವನ್ನು ಕಾಪಾಡುತ್ತವೆ. ನಿಂಬೆರಸದಿಂದ ತ್ವಚೆಯ ಸಮಸ್ಯೆಗಳಿಗೆ ಬೇಗನೇ ಪರಿಹಾರ ನೀಡುತ್ತದೆ. ಕಡಲೆಹಿಟ್ಟಿನಲ್ಲಿ ಎಕ್ಸ್‌ ಪೋಲೆಟ್‌ ಮತ್ತು ಆಂಟಿಬ್ಯಾಟಿಕ್‌ ಗುಣಗಳಿರುತ್ತವೆ. ತ್ವಚೆಯಲ್ಲಿನ ಜಿಡ್ಡಿನ ಅಂಶ ಇದು ಹೀರಿಕೊಳ್ಳುತ್ತದೆ. ಇನ್ನು ಜೇನುತುಪ್ಪದಲ್ಲಿ ವಿಟಮಿನ್‌ ಖನಿಜ, ಅಮೈನೋ ಆಮ್ಲ, ಆಂಟಿ ಆಕ್ಸಿಡೆಂಟ್‌ ಇನ್ನು ಅನೇಕ ಪೋಷಕಾಂಶಗಳಿವೆ. ಇದನ್ನು ಫೇಸ್‌ಪ್ಯಾಕ್‌ನಲ್ಲಿ ಬಳಸಿದರೆ ಹೀಲಿಂಗ್‌ ಮತ್ತು ಕ್ಲೆನ್ಸಿಂಗ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಸಿಗುವ ಈ ಮೂರು ಪದಾರ್ಥಗಳನ್ನು ಸಮಪ್ರಮಾಣದಲ್ಲಿ ಬರೆಸಿ ಫೇಸ್‌ಪ್ಯಾಕ್‌ ಹಚ್ಚಿಕೊಳ್ಳಿ.ತುಳಸಿ, ಅರಿಶಿನ, ಬೇವಿನ ಎಲೆ ಫೇಸ್‌ಪ್ಯಾಕ್‌ : ಅಧ್ಯಯನ ಪ್ರಕಾರ ತುಳಸಿ ಆಂಟಿಬ್ಯಾಕ್ಟೀರಿಯಲ್‌ ಮತ್ತು ಉರಿಯೂತದ ಪರಿಣಾಮವನ್ನು ಹೊಂದಿದೆ. ಹಾಗಾಗಿ ಚರ್ಮದ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಬೇವಿನ ಎಣ್ಣೆ ಚರ್ಮ ಬೇಗನೇ ಸುಕ್ಕಾಗುವುದನ್ನು ತಡಯುತ್ತದೆ. ಮುಖದ ಮೇಳೆ ಮೂಡುವ ಗೆರೆಗಳನ್ನು ತಡೆಗಟ್ಟುತ್ತದೆ. ಚರ್ಮ ಬೇಗ ವಯಸ್ಸಾಗುವುದಿಲ್ಲ.4ತುಳಸಿ ಎಲೆ, 4ಬೇವಿನ ಎಲೆ, 1ಚಮಚ ಅರಿಶಿನ, 1 ಚಮಚ ಮೊಸರು. ತುಳಸಿ ಮತ್ತು ಬೇವಿನ ಎಲೆಯನ್ನು ರಸಯುಕ್ತ ಪೇಸ್ಟ್‌ ಮಾಡಿಕೊಳ್ಳಿ ಅದಕ್ಕೆ ಒಂದೊಂದು ಚಮಚ ಮೊಸರು ಹಾಗು ಅರಿಶಿನ ಹಾಗಿ ಚನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮುಖವನ್ನು ತಣ್ಣೀರಿನಿಂದ ತೊಳೆದು ನಂತರ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಫೇಸ್‌ಪ್ಯಾಕ್‌ ಅನ್ನು ತುಂಬ ಹೊತ್ತು ಮುಖದ ಮೇಲೆ ಬಿಡಬೇಡಿ ಅದು ಒಣಗುವವರೆಗೆ ಅಥವಾ ಹೆಚ್ಚೆಂದರೆ 20 ನಿಮಿಷ ಬಿಡಿ ಸಾಕು. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಫೇಸ್‌ಪ್ಯಾಕ್‌ ಹಚ್ಚಿದ ನಂತರ ಸೋಪ್‌ನಿಂದ ಮುಖ ತೊಳೆಯಬೇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದ ಹುಡುಗ ಮಣಿಪಾಲ ಹಾಸ್ಟೆಲ್ನಲ್ಲಿ ಟ್ರಾಲಿ ಸೂಟ್ಕೇಸ್ನಲ್ಲಿ ಗೆಳತಿಯನ್ನು ನುಸುಳಲು ಯತ್ನಿಸಿದ್ದಾನೆ;

Fri Feb 4 , 2022
ಮಣಿಪಾಲದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಟ್ರಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟು ಒಳಗೆ ನುಸುಳಲು ಯತ್ನಿಸಿದಾಗ ಹಾಸ್ಟೆಲ್ ಕೇರ್ ಟೇಕರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದಂಪತಿಗಳ ಸಂಪೂರ್ಣ ಯೋಜನೆಯನ್ನು ವಿದ್ಯಾರ್ಥಿಯೊಬ್ಬರು ವೀಕ್ಷಿಸಿದರು. ಟ್ರಾಲಿ ಬ್ಯಾಗ್ ಉಸ್ತುವಾರಿಯ ಗಮನ ಸೆಳೆಯಿತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ದೊಡ್ಡದಾದ ಮತ್ತು ಭಾರವಾದ ಸಾಮಾನು ತುಂಡನ್ನು ಏಕೆ ಸಾಗಿಸುತ್ತಿದ್ದೀರಿ ಎಂದು […]

Advertisement

Wordpress Social Share Plugin powered by Ultimatelysocial