ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದಿರುವ ಪಬ್ ಮೇಲಿನ ದಾಳಿ, ಸುಳ್ಯ ದಲ್ಲಿ ನಡೆದ ಎರಡು ಹತ್ಯೆ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಯಾರು ಕೊಲೆ ಮಾಡಿದರು ಅದು ಅಕ್ಷಮ್ಯ ಅಪರಾಧ. ಕಾನೂನಿನ ಭಯ ಇಲ್ಲದೆ ಇರುವವರು ಈ ರೀತಿಯ ಕೃತ್ಯ ಗಳಲ್ಲಿ ಭಾಗಿಯಾ ಗುತ್ತಿದ್ದಾರೆ. ಕೊಲೆ ಗಡುಕರು ದೇಶ ದ್ರೋಹಿಗಳು. ಮಾನವೀಯತೆಯನ್ನು ಮರೆತವರು.
ಮಂಗಳೂರಿನಲ್ಲಿ ಪಬ್ ಮೇಲೆ ಹಿಂದೆಯೂ ಒಮ್ಮೆ ದಾಳಿ ನಡೆದಿತ್ತು. ಎರಡನೆ ಬಾರಿ ಈ ರೀತಿ ಕಾನೂನನ್ನು ಕೈ ಗೆತ್ತಿಕೊಂಡು ದಾಂಧಲೆ ನಡೆಸುವವರನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ. ಇದರಿಂದ ಬ್ರಾಂಡ್ ಮಂಗಳೂರಿನ ಸೌಹಾರ್ದತೆಗೆ ಕೆಟ್ಟ ಹೆಸರು ಬರುವಂತಾಗಿದೆ. ಇಲ್ಲಿನ ಶಾಸಕರು ಈ ಬಗ್ಗೆ ಮೌನವಹಿಸಿದ್ದಾರೆ. ದಾಂಧಲೆ ನಡೆಸಿದವರ ವಿರುದ್ಧ ಯಾವ ಕ್ರಮ ಕೂಡ ನಡೆಯುತ್ತಿಲ್ಲ. ಕೊಲೆ ನಡೆಸಿದವರ ಬಂಧನ ಆಗಿಲ್ಲ, ಈ ರೀತಿಯ ಬೆಳವಣಿಗೆಯಿಂದ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಮಂಗಳೂರಿಗೆ ಹೊಸ ಉದ್ಯಮಗಳು ಬರದಂತೆ ಆಗಿದೆ. ಇಲ್ಲಿ ಕೆಲಸ ನಿರ್ವಹಿಸುವ ಉದ್ಯಮ ಸಂಸ್ಥೆಗಳಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಮಂಗಳೂರು ಅಭಿವೃದ್ಧಿಯ ಬಗ್ಗೆ, ಈ ರೀತಿಯ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಗಮನ ಹರಿಸುತ್ತಿಲ್ಲ ಎಂದು ಜೆ.ಆರ್. ಲೋಬೊ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪ್ರತಿಭಟನೆ !

Fri Jul 29 , 2022
ಅಪರಾಧಿಗಳನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಟೌನ್ ಹಾಲ್ ನಲ್ಲಿ ಪ್ರತಿಭಟನೆ ಮನೋಹರ ಅಯ್ಯರ್ ಹೇಳಿಕೆ ಧರ್ಮ ಹೆಸರಲ್ಲಿ ಹಿಂದೂಗಳು ಒಗ್ಗಟ್ಟಾಗಿದ್ದಾರೆ‌ ಇಸ್ಲಾಮಿಕ್ ದೇಶ ಮಾಡಲು ಹೊರಟಿರುವುದನ್ನು ವಿರೋಧಿಸುತ್ತೇವೆ ಪಾಟಾಪಟ್ ಶ್ರೀನಿವಾಸ ಹೇಳಿಕೆ ಹಿಂದೂ ಸಮಾಜದ ಸಂಘಟನೆ ಆಗಬೇಕು, ಎಲ್ಲ ಹಿಂದೂ ಕಾರ್ಯದರ್ಶಿ ಕೈ ಮುಗಿದು ಕೇಳುತ್ತೇನೆ, ಹಿಂದೂಗಳ ಕೊಲೆ ಮಾಡಲು ಯೋಜನೆ ಮಾಡುತ್ತಿದ್ದಾರೆ ಸರ್ಕಾರದ ರಕ್ಷಣೆಯನ್ನು ಕೇಳುತ್ತಿದ್ದೇವೆ. ಮೊದಲು ನಮ್ಮ ರಕ್ಷಣೆ ಮಾಡುವುದನ್ನು ಕಲಿಯಬೇಕು ೫೦೦ ವರ್ಷದ ಹಲವು ಧರ್ಮವನ್ನು […]

Advertisement

Wordpress Social Share Plugin powered by Ultimatelysocial