ಮಂಗಳೂರು : ಮಸೀದಿ ಬಳಿ ಮೊಳಗಿದ ಕೊರಗಜ್ಜನ ಭಕ್ತಿ ಗೀತೆ!

 

ಮಂಗಳೂರು: ರಾಜ್ಯದಲ್ಲಿ ಆಜಾನ್ ವಿಚಾರದಲ್ಲಿ ಶ್ರೀರಾಮ ಸೇನೆ ಸೇರಿ ಕೆಲ ಹಿಂದೂ ಪರ ಸಂಘಟನೆ ಗಳು ಹೋರಾಟಕ್ಕಿಳಿದಿರುವ ವೇಳೆ ಸೋಮವಾರ ಮೂಡುಶೆಡ್ಡೆ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆ ಬಳಿ ಇರುವ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ಮುಂಭಾಗದದಲ್ಲಿ ಮೈಕ್ ಅಳವಡಿಸಿ ,ಬೆಳಗ್ಗೆ 5 ಗಂಟೆಯಿಂದ 6 ಗಂಟೆಯ ವರೆಗೆ ಕೊರಗಜ್ಜನ ಭಕ್ತಿ ಗೀತೆಗಳನ್ನು ಹಾಕಲಾಗಿದೆ.

ಮೂಡುಶೆಡ್ಡೆ ಮಸೀದಿ ಯಿಂದ ಸುಮಾರು 250 ಮೀಟರ್ ದೂರದಲ್ಲಿದೆ. ಈ ಸಂದರ್ಭದಲ್ಲಿ ಅಯ್ಯಪ್ಪ ಭಕ್ತ ವೃಂದ ದ ಬಳಿ ಇಬ್ಬರು ಶ್ರೀ ರಾಮ ಸೇನೆಯ ಕಾರ್ಯಕರ್ತರಿದ್ದರು. ಇದರ ನೇತೃತ್ವ ವನ್ನು ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ ವಹಿಸಿದ್ದಾರೆ.

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಸನ್ಮಾನ್ ಹೋಟೆಲ್ ಬಾಣಸಿಗ ಮತ್ತು ಕಲಾವಿದ ಗೋಪಿಗೆ ಗೌರವ ಸಮರ್ಪಣೆ!

Mon May 9 , 2022
ಹೊನ್ನಾಂಬ ನಾಟಕ ಮಂಡಳಿ ದಂಡಿನಶಿವರ ಮತ್ತು ಯಡಿಯೂರು ಸಾಂಸ್ಕೃತಿಕ ವೇದಿಕೆ, ಮಾಯಸಂದ್ರ ಕಲಾಭಿಮಾನಿ ಬಳಗ ವತಿಯಿಂದ ಭಾನುವಾರ ಸಂಜೆ, ಬಸ್ಟಾಂಡ್ ಸನ್ಮಾನ್ ಹೋಟೆಲ್ ನ ಬಾಣಸಿಗ ಮತ್ತು ಕಲಾವಿದ ಗೋಪಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ರಾಮಾಯಣ ಎಂಬ ಪೌರಾಣಿಕ ನಾಟಕದಲ್ಲಿ 51ನೇ ಭಾರಿ ಜಟಾಯು ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.ಮತ್ತು ತುರ್ತು ಸಂದರ್ಭಗಳಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಪಾತ್ರಧಾರಿಯಾಗಿ ಅದ್ಭುತವಾದ ಅಭಿನಯವನ್ನು ಮಾಡಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ ಬಾಣಸಿಗ ವೃತ್ತಿಯನ್ನು ಮಾಡುತ್ತಾ, ಕಲೆಯ ಬಗ್ಗೆ […]

Advertisement

Wordpress Social Share Plugin powered by Ultimatelysocial