ಕೋವಿಡ್‌ನಿಂದ ಬೆಂಗಳೂರು ಮಹಾನಗರದ ಜನತೆಗೆ ಮಾವು ಮೇಳವೇ ಇಲ್ಲ

ಬೆಂಗಳೂರು, ಮೇ 01: ಕೋವಿಡ್‌ನಿಂದ ಬೆಂಗಳೂರು ಮಹಾನಗರದ ಜನತೆಗೆ ಮಾವು ಮೇಳವೇ ಇಲ್ಲ ಎಂಬುವುದು ಬೇಸರದ ಸಂಗತಿಯಾಗಿತ್ತು. ಆದರೆ ಮತ್ತೆ ಬೆಂಗಳೂರು ಮಹಾನಗರಿಯ ಜನತೆಗೊಂದು ಸಂತಸದ ಸುದ್ದಿ ಏನೆಂದರೆ ಎರಡು ವರ್ಷಗಳ ಬಳಿಕ ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದಲ್ಲಿ ಮಾವು ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದ್ದು, ಇದೇ ಮೇ ತಿಂಗಳು ಕೊನೆಯ ವಾರದಲ್ಲಿ ಅಥವಾ ಜೂನ್ ತಿಂಗಳಿನ ಆರಂಭದಲ್ಲಿ ಮಾವಿನ ಹಣ್ಣುಗಳ ಮೇಳವನ್ನು ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಲಾಲ್‌ಬಾಗ್ ಉದ್ಯಾನದಲ್ಲಿ ಮಾವು ಮೇಳವನ್ನು ಆಯೋಜಿಸಲು ಇಲಾಖೆ ಸಿದ್ದವಾಗಿದೆ ಹಾಗೂ 2 ವರ್ಷಗಳ ನಂತರ ನಡೆಯುತ್ತಿರುವ ಈ ಮೇಳದಲ್ಲಿ 200 ಮಾವು ಬೆಳೆಗಾರರಾದ ರೈತರಿಗೆ ಹಾಗೂ ಹಣ್ಣುಗಳನ್ನು ಖರೀದಿಸಲು ಬರುವ ಗ್ರಾಹಕರು ಪ್ರಯೋಜನವನ್ನು ಪಡೆದುಕೊಳ್ಳಬಹುದು.

ನಗರದ ಲಾಲ್‌ಬಾಗ್ ಉದ್ಯಾನದಲ್ಲಿ ಮೇಳದ ಕೇಂದ್ರವಾಗಲಿದ್ದು, ಕಬ್ಬನ್ ಪಾರ್ಕ್‌ನಲ್ಲಿ ಚಟುವಟಿಕೆಗಳು ಸಣ್ಣ ಪ್ರಮಾಣದಲ್ಲಿ ನಡೆಯಲಿವೆ ಎಂದು ತೋಟಗಾರಿಕೆ ಇಲಾಖೆ ಹೇಳಿದೆ. ಮಾವು ಮೇಳವು ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆದಿಲ್ಲ, ಆದರೂ ಈ ಮಾವು ಮೇಳದಲ್ಲಿ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡಬಹುದೆಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮಾವು ಪೂರೈಕೆ ಸರಪಳಿಯು ವಿಭಿನ್ನ ದಿಕ್ಕಿನಲ್ಲಿ ವಿಸ್ತರಿಸಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್‌ನ (KSMDMCL) ಮೂಲಗಳು ತಿಳಿಸಿವೆ.

ನಗರಗಳ ಅಪಾರ್ಟ್‌ಮೆಂಟ್ ಫೆಡರೇಶನ್‌ಗಳೊಂದಿಗೆ ಸಂಪರ್ಕ ಹೊಂದಿದ್ದೇವೆ, ದೆಹಲಿಗೆ ಹಣ್ಣುಗಳನ್ನು ಕಳುಹಿಸಿದ್ದೇವೆ ಮತ್ತು ಮೇಳದ ಅನುಪಸ್ಥಿತಿಯು ರೈತರಿಗೆ ಹೆಚ್ಚಿನ ನಷ್ಟವನ್ನು ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಇನ್ನೊಂದು ಮಾರ್ಗವಾಗಿ ಆನ್‌ಲೈನ್ ಪೋರ್ಟಲ್‌ಗಳನ್ನು ಬಳಸಿಕೊಳ್ಳುವ ಮೂಲಕ ಮಾವಿನ ಹಣ್ಣುಗಳನ್ನು ಮಾರಟ ಮಾಡಲಾಗುತ್ತಿದೆ. ಇದು ರೈತರಿಗೆ ನಷ್ಟವಾಗದೇ ಅವರಿಗೆ ಹೆಚ್ಚಿನ ಉಪಾಯವಾಗಿದೆ ಎಂದು ಕೆಎಸ್‌ಎಂಡಿಎಂಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ ನಾಗರಾಜು ತಿಳಿಸಿದ್ದಾರೆ.

ಈ ಮೇಳದಿಂದ ಇನ್ನಷ್ಟು ಬೇಡಿಕೆಗಳು ಬಂದರೆ ಮೇಳವು ಬೆಳಗಾವಿ, ಧಾರವಾಡ, ಚಾಮರಾಜನಗರ ಮತ್ತು ರಾಮನಗರದಂತಹ ಜಿಲ್ಲೆಗಳಿಗೆ ಸ್ಥಳಗಳಿಗೆ ದೊಡ್ಡ ಪ್ರಮಾಣದ ಮಾವಿನ ಹಣ್ಣನ್ನು ಕೊಂಡೊಯ್ಯುತ್ತವೆ ಎಂದು ಅವರು ತಿಳಿಸಿದರು. ನಿಗಮವು ಕರ್ನಾಟಕದ ಕೊಪ್ಪಳ ಜಿಲ್ಲೆ ಮತ್ತು ದಕ್ಷಿಣ ಕರ್ನಾಟಕದಂತಹ ಜಿಲ್ಲೆಯಲ್ಲೂ ಮಾವು ಬೆಳೆಯದ ಪ್ರದೇಶಗಳಲ್ಲಿ ಮೇಳವನ್ನು ಆಯೋಜಿಸಲಾಗಿದೆ ಇನ್ನು ಬೇರೆಯ ಜಿಲ್ಲೆಗಳಿಂದ ಮಾವು ಮೇಳದ ಬೇಡಿಕೆಗಳು ಬಂದರೆ ಮೇಳವನ್ನು ಆಯೋಜಿಸಲು ನಿಗಮವು ಸಜ್ಜಾಗಿರುತ್ತದೆ ಎಂದು ನಿಗಮವು ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೇಸ್-ಬಿಜೆಪಿ ವಿರುದ್ದ ಸುರೇಶ್ ಗೌಡ ವಾಗ್ದಾಳಿ..!

Mon May 2 , 2022
ಎರಡೂ ರಾಷ್ಟ್ರೀಯ ಪಕ್ಷಕ್ಕೆ ಮಾನ ಮಾರ್ಯದೆ ಇಲ್ಲ..! ಸುರೇಶ್ ಗೌಡ, ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಶಾಸಕ.ಮದ್ದೂರಿನ ಕೊಪ್ಪದಲ್ಲಿ ಶಾಸಕ ಸುರೇಶ್ ಗೌಡ ಹೇಳಿಕೆ.. ಮಂಡ್ಯ ಜನರ ಬಳಿ ಮತ ಕೇಳುವ ನೈತಿಕತೆ ಇಲ್ಲ.ಅವರು ಬರಿ ಮಾತನಾಡುವುದು ಬಿಟ್ರೆ ಏನು ಕೆಲಸ ಮಾಡ್ತಿಲ್ಲ.. ಈ ಬಾರಿ ರಾಜ್ಯದ ಜನರು ಎರಡು ರಾಷ್ಟ್ರೀಯ ಪಕ್ಷಕ್ಕೆ ಬುದ್ದಿ ಕಲಿಸ್ತಾರೆ.. ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಮಲ ಹರಳಿಸುವ ವಿಚಾರ.. ನಾವು ಹುಡ್ಕುತ್ತಿದ್ದೇನೆ, ಯಾವ […]

Advertisement

Wordpress Social Share Plugin powered by Ultimatelysocial