ಮಾನ್ವಿತಾ ಕುತ್ತಿಗೆಯಲ್ಲಿ ರಾರಾಜಿಸುತ್ತಿರುವ ಕನ್ನಡ ಅಕ್ಷರಮಾಲೆಯ ಟ್ಯಾಟೂ!

ಟ್ಯಾಟೂ ಹಾಕಿಸಿಕೊಳ್ಳೋದು, ಅದರಲ್ಲೂ ಎಲ್ಲೆಂದರಲ್ಲಿ ಅಲ್ಲಿ, ಹೇಗೆ ಅಂದರೆ ಹೇಗೆ ಹಾಕಿಸಿಕೊಳ್ಳುವುದು ಫ್ಯಾಷನ್ ಆಗಿಬಿಟ್ಟಿದೆ.ಯುವಕ, ಯುವತಿಯರು ತಮ್ಮ ನೆಚ್ಚಿನ ಕಾನ್ಸೆಪ್ಟ್​ ನೋಡಿಕೊಂಡು ಅದಕ್ಕೆ ಹೊಂದಿಕೆಯಾಗುವಂತಹ ಸ್ಪೆಷಲ್ ಆಗಿರುವ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ.ಕೆಲವರು ತಾವು ಹಾಕಿಸಿಕೊಳ್ಳುವ ಟ್ಯಾಟೊಗೆ ವಿಶೇಷ ಅರ್ಥ ಇರಬೇಕು ಎಂದು ಬಯಸುತ್ತಾರೆ.ಇದೀಗ ಸ್ಯಾಂಡಲ್​ವುಡ್ ನಟಿ ಮಾನ್ವಿತಾ ಕಾಮತ್ ಕೂಡಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆದರೆ ಇದು ಸಾಮಾನ್ಯವಾಗಿರುವ ಟ್ಯಾಟೂ ಅಲ್ಲ. ಕುತ್ತಿಗೆ ಬಳಿ ಹಾಕಿಸಿಕೊಂಡಿರುವ ಕಾಜಲ್ ಟ್ಯಾಟೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದೆ.ನಟಿ ಮಾನ್ವಿತಾ ಅವರು ಕುತ್ತಿಗೆ ಮೇಲೆ ಈ ಕಾಜಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಟಿಯ ಕುತ್ತಿಗೆ ಮೇಲೆ ಕಾಜಲ್​ನಿಂದ ಅ, ಆ, ಇ, ಈ ಎಂದು ಕಾಜಲ್​ನಲ್ಲಿ ಸುಂದರವಾಗಿ ಬರೆಯಲಾಗಿದೆ.ಐಲೈನರ್ ಬ್ರಶ್​ನಿಂದ ನಿಧಾನವಾಗಿ ಅಕ್ಷರಗಳನ್ನು ಬರೆಯಲಾಗಿದ್ದು ಇದು ಸುಂದರವಾಗಿ ಕಂಡುಬಂದಿದೆ. ಕುತ್ತಿಗೆಯಲ್ಲಿ ಕಾಜಲ್​ ಟ್ಯಾಟೂ ಹಾಕಿಸಿಕೊಳ್ಳೋಕೆ ನಿರ್ಧರಿಸಿದೆ, ಹೇಗಿದೆ ಇದು ಎಂದು ನಟಿ ಕ್ಯಾಪ್ಶನ್​ನಲ್ಲಿ ಬರೆದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಿಕೆಟರ್ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಊರ್ವಶಿ ರೌಟೇಲಾ

Fri Dec 30 , 2022
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ಗಾಗಿ ಶೀಘ್ರದಲ್ಲಿ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಪಂತ್ ಅವರ ಅಪಘಾತದ ಸುದ್ದಿ ಹೊರಬಂದ ನಂತರ, ಅವರ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಅವರ ಬಗ್ಗೆ ತುಂಬಾ ಬೇಸರಗೊಂಡಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ, ಅವರೆಲ್ಲರೂ ಪಂತ್ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.ಇದೇ ವೇಳೇ ನಟಿ ಊರ್ವಶಿ ಕೂಡ ದೇವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಊರ್ವಶಿ ತನ್ನ ಪೋಸ್ಟ್ ಅವಳನ್ನು […]

Advertisement

Wordpress Social Share Plugin powered by Ultimatelysocial