ವಿವಾಹ ವಾರ್ಷಿಕೋತ್ಸವ, ಭಾವುಕ ಪೋಸ್ಟ್ ಹಂಚಿಕೊಂಡ ಸುಮಲತಾ.

ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಹಾಗೂ ನಟಿ ಸುಮಲತಾ ಅಂಬರೀಶ್ (Sumalatha Ambareesh) ಅವರ ವಿವಾಹದ ದಿನ (Wedding Anniversary) ಇಂದು. ಸ್ಯಾಂಡಲ್​​ವುಡ್​ನಲ್ಲಿ (Sandalwood) ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಂತಹ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು.
1991ರಲ್ಲಿ ಡಿಸೆಂಬರ್ 8ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಸ್ಯಾಂಡಲ್​ವುಡ್ ಜೋಡಿಗೆ ಒಬ್ಬ ಮಗನಿದ್ದಾನೆ. ಇದೀಗ ಅಂಬರೀಶ್ ಅವರು ಜೊತೆಗಿರದಿದ್ದರೂ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು ಪತಿಗಾಗಿ ಭಾವುಕ ಬರಹವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಮದುವೆ, ಪತಿಯ ನೆನಪುಗಳು, ದಾಂಪತ್ಯ ಜೀವನವನ್ನು ನೆನಪಿಸಿಕೊಂಡಿದ್ದಾರೆ.
ಸುಮಲತಾ ಅವರು ಮೋಷನ್ ಪಿಕ್ಚರ್ ಒಂದನ್ನು ಶೇರ್ ಮಾಡಿದ್ದು ಇದಕ್ಕೆ ಮ್ಯೂಸಿಕ್ ಕೂಡಾ ಸೇರಿಸಿದ್ದಾರೆ. ಇದರಲ್ಲಿ ಸುಮಲತಾ ಹಾಗೂ ಅಂಬರೀಶ್ ಅವರ ಕ್ಯೂಟ್ ಆದ ಫೋಟೋ ಇದೆ.
ಪೋಸ್ಟ್​ನಲ್ಲಿ ಬರೆದಿದ್ದೇನು?
ನಿಮ್ಮೊಂದಿಗೆ ಹೆಜ್ಜೆ ಹಾಕಿದ ಆ ದಿನ, ಆ ಕ್ಷಣ ನಿತ್ಯವೂ ಹೊಸ ಪುಳಕ. ತುಳಿದ ಸಪ್ತಪದಿಯಲ್ಲೂ ನಿಮ್ಮದೇ ಗುಣಗಾನ. ನನ್ನ ಬದುಕಿಗೆ ಬಾಳ ಸಂಗಾತಿಯಾಗಿ ನೀವು ಬಂದ ದಿನದಿಂದಲೂ ನನ್ನೊಳಗೆ ಹೊಸ ಸಂಭ್ರಮ. ಮದುವೆ ದಿನದ ಎಲ್ಲ ನೆನಪುಗಳ ಜೊತೆ ನೀವು ಇದ್ದೀರಿ, ಮತ್ತೆ ಮತ್ತೆ ಆ ದಿನವನ್ನು ನೆನಪಿಸುತ್ತೀರಿ. 31 ವರ್ಷಗಳಲ್ಲಿ ಜೀವಮಾನದ ನೆನಪುಗಳನ್ನು ಬಿತ್ತಿದ್ದೀರಿ. ನೀವು ನೀಡಿದ ಪ್ರೀತಿ ಮತ್ತು ಬಾಂಧವ್ಯದ ಕುರುಹುಗಳು ನನ್ನ ಜೀವಿತಾವಧಿಯ ಕೊಡುಗೆಗಳು ಎಂದು ಸುಮಲತಾ ಅವರು ಬರೆದಿದ್ದಾರೆ.ಅಂಬರೀಶ್ ಅವರ ಕುಚಿಕು ವಿಷ್ಣುವರ್ಧನ್ ಅವರ ಕನಸಿನ ಮನೆ, ಇದೀಗ ನವೀಕರಣಗೊಂಡು ಹೊಸ ವಿನ್ಯಾಸದಲ್ಲಿ ತಲೆಯೆತ್ತಿದೆ. ಆ ಹೊಸ ಮನೆಯ ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದೆ. ಇದು ನಮ್ಮ ಕುಟುಂಬದ ಕಾರ್ಯಕ್ರಮವೇ ಆಗಿದ್ದು, ಭಾರತಿ ವಿಷ್ಣುವರ್ಧನ್ ಅವರ ಆತಿಥ್ಯ ಸ್ವೀಕರಿಸಿದೆ. ಹೊಸ ಮನೆಯಲ್ಲಿ ಸದಾ ಸಂಭ್ರಮವೇ ತುಂಬಿರಲಿ ಎಂದು ನಾನು ಮತ್ತು ಅಂಬರೀಶ್ ಅವರ ಪರವಾಗಿ ಹಾರೈಸಿದೆ ಎಂದು ಅವರು ಪೋಸ್ಟ್ ಶೇರ್ ಮಾಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ವರುಣಾ ಕ್ಷೇತ್ರದಲ್ಲಿ 'ಸಿದ್ದರಾಮಯ್ಯ' 2 ದಿನ ಪ್ರವಾಸ : ನಂಜನಗೂಡಿನಲ್ಲಿ ಮಾಜಿ ಸಿಎಂಗೆ ಅದ್ದೂರಿ ಸ್ವಾಗತ.

Thu Dec 8 , 2022
ಮೈಸೂರು : ವಿಧಾನಸಭೆ ಚುನಾವಣೆ ಹೊತ್ತಲ್ಲೇ ಜನರ ನಾಡಿಮಿಡಿತ ಅರಿಯಲೆಂದು ಮಾಜಿ ಸಿಎಂ ಸಿದ್ದರಾಮಯ್ಯ 2 ದಿನ ವರುಣಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಸದ್ಯ, ಮೈಸೂರು ಜಿಲ್ಲೆ ನಂಜನೂಡು ತಾಲೂಕಿನ ಹದಿನಾರು ಮೋಳೆ ಗ್ರಾಮಕ್ಕೆ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದು, ಸಿದ್ದರಾಮಯ್ಯಗೆ ಜನರು ಅದ್ದೂರಿಯಾಗಿ ಸ್ವಾಗತ ಕೋರಿದರು.ಸಿದ್ದರಾಮಯ್ಯಗೆ ಹೆಚ್.ಸಿ ಮಹದೇವಪ್ಪ ಸೇರಿ ಹಲವು ಕೈ ನಾಯಕರು , ಕಾರ್ಯಕರ್ತರು ಸಾಥ್ ನೀಡಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯ ಇಂದಿನಿಂದ 2 ದಿನ ವರುಣಾ ಕ್ಷೇತ್ರದಲ್ಲಿ ಪ್ರವಾಸ […]

Advertisement

Wordpress Social Share Plugin powered by Ultimatelysocial