ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮೂರನೇ ಮದುವೆಯಾಗಿದ್ದಾರೆ.

ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮೂರನೇ ಮದುವೆಯಾಗಿದ್ದಾರೆ. 49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ ದಾನಿಯಾ ಶಾ ಜೊತೆಗೆ ಮದುವೆಯಾಗಿದ್ದಾರೆ. ಈ ವಿಚಾರವೀಗ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ಈ ಜೋಡಿ ಬುಧವಾರ ಮದುವೆಯಾಗಿದೆ. ಇದೇ ದಿನ ಆಮೀರ್‌ಗೆ ಆತನ ಎರಡನೇ ಮಡದಿ ವಿಚ್ಛೇದನ ನೀಡಿದ್ದಾರೆ.”ಕಳೆದ ರಾತ್ರಿ ಸಯಿದಾ ದಾನಿಯಾ ಶಾ, ಜೊತೆಗೆ ಮದುವೆ ಮಾಡಿಕೊಂಡೆ. ಆಕೆ ದಕ್ಷಿಣ ಪಂಜಾಬ್‌ನ ಲೋಧ್ರಾನ್‌ನ ಘನವೆತ್ತ ನಜೀಬ್ ಉದ್ ತರ್ಫೇನ್ ‘ಸಾದತ್‌’ ಕುಟುಂಬಕ್ಕೆ ಸೇರಿದವಳು. ಆಕೆ ಚಾರ್ಮಿಂಗ್, ಸಿಂಪಲ್ ಆಗಿರುವ ಡಾರ್ಲಿಂಗ್ ಆಗಿದ್ದಾಳೆ. ನನ್ನೆಲ್ಲಾ ಹಿತೈಷಿಗಳಿಗೆ, ದಯವಿಟ್ಟು ನಮಗಾಗಿ ಪ್ರಾರ್ಥನೆ ಮಾಡಿ ಎಂದು ಕೇಳಲು ಬಯಸುತ್ತೇನೆ. ನಾನೀಗ ತಾನೇ ಒಂದು ಕರಾಳ ಸುರಂಗ ಹಾದು ಬಂದಿದ್ದೇನೆ, ಅದೊಂದು ತಪ್ಪಾದ ತಿರುವು,” ಎಂದು ಹೇಳಿಕೊಂಡಿದ್ದಾರೆ ಆಮೀರ್‌.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID-19 ಬೂಸ್ಟರ್ ಶಾಟ್ ನೀಡುವ ರಕ್ಷಣೆಯು ಎಷ್ಟು ಕಾಲ ಉಳಿಯುತ್ತದೆ? US ಅಧ್ಯಯನದ ಉತ್ತರಗಳು

Sat Feb 12 , 2022
  ಫಿಜರ್ ಮತ್ತು ಮಾಡರ್ನಾ ಎಮ್‌ಆರ್‌ಎನ್‌ಎ ಲಸಿಕೆಗಳ ಮೂರನೇ ಡೋಸ್‌ಗಳ ಪರಿಣಾಮಕಾರಿತ್ವವು ಆಡಳಿತದ ನಂತರ ನಾಲ್ಕನೇ ತಿಂಗಳಿಗೆ ಗಣನೀಯವಾಗಿ ಕ್ಷೀಣಿಸುತ್ತದೆ ಎಂದು ಯುಎಸ್ ಸೆಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಶುಕ್ರವಾರ ಬಹಿರಂಗಪಡಿಸಿದೆ. ಎರಡು ಡೋಸ್‌ಗಳ ನಂತರ ಲಸಿಕೆಯ ಪರಿಣಾಮಕಾರಿತ್ವವು ಕಡಿಮೆಯಾಗುತ್ತದೆ ಎಂದು ಈಗ ಉತ್ತಮವಾಗಿ ದಾಖಲಿಸಲಾಗಿದೆಯಾದರೂ, ತುಲನಾತ್ಮಕವಾಗಿ, ಬೂಸ್ಟರ್‌ನ ನಂತರ ರಕ್ಷಣೆಯ ಅವಧಿಯ ಬಗ್ಗೆ ಸ್ವಲ್ಪವೇ ಹೇಳಲಾಗಿದೆ. ಹೊಸ ಅಧ್ಯಯನವು ತುರ್ತು ವಿಭಾಗ ಅಥವಾ ತುರ್ತು […]

Advertisement

Wordpress Social Share Plugin powered by Ultimatelysocial