ಮಾರ್ಚ್‌ ಅಂತ್ಯಕ್ಕೆ ಅನುಮಾನ- ಮರ್ಚೆಂಟ್‌ ಬ್ಯಾಂಕ್‌ ಅಧಿಕಾರಿ

ಎಲ್‌ಐಸಿ ಐಪಿಒ: ಮಾರ್ಚ್‌ ಅಂತ್ಯಕ್ಕೆ ಅನುಮಾನ- ಮರ್ಚೆಂಟ್‌ ಬ್ಯಾಂಕ್‌ ಅಧಿಕಾರಿ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಹೂಡಿಕೆಯು (ಐಪಿಒ) ಪ್ರಸಕ್ತ ಹಣಕಾಸು ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ನಡೆಯುವುದು ಅನುಮಾನ ಎಂದು ಮರ್ಚೆಂಟ್‌ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಈ ಕಂಪನಿಯ ಮೌಲ್ಯಮಾಪನ ಮಾಡಲು ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ.

ಪೂರ್ವಸಿದ್ಧತಾ ಕಾರ್ಯವು ಇನ್ನೂ ಮುಗಿದಿಲ್ಲ ಎಂದು ಅವರು ತಿಳಿಸಿದ್ದಾರೆ. ಎಲ್‌ಐಸಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಆ ಬಳಿಕ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಪ್ರಕ್ರಿಯೆಗಳನ್ನು ನಡೆಸಬೇಕಿದೆ ಎಂದಿದ್ದಾರೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಷ್ಟೇ ಅಲ್ಲದೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸಹ ಐಪಿಒ ಕುರಿತಾಗಿ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಿದೆ. ಎಲ್‌ಐಸಿಯು ದೊಡ್ಡ ಕಂಪನಿ ಆಗಿರುವುದರಿಂದ ಅದರ ಮೌಲ್ಯಮಾಪನ ಮಾಡುವುದು ಬಹಳ ಸಂಕೀರ್ಣವಾದ ಪ್ರಕ್ರಿಯೆ ಆಗಿದೆ. ಅದರ ರಿಯಲ್ ಎಸ್ಟೇಟ್ ಸ್ವತ್ತುಗಳು, ಅಂಗಸಂಸ್ಥೆಗಳು, ಲಾಭದ ಹಂಚಿಕೆಯ ಸ್ವರೂಪ ಮತ್ತು ಷೇರು ಮಾರಾಟದ ಗಾತ್ರವು ಮೌಲ್ಯಮಾಪನವನ್ನು ಅವಲಂಬಿಸಿರುತ್ತದೆ ಎಂದು ಅವರು ವಿವರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಮರುಪ್ರಿಷ್ಠಾಪನಗೊಂಡ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ

Mon Dec 20 , 2021
ಬೆಳಗಾವಿ ಅನಗೋಳ ಇವತ್ತು ಮುಂಜಾನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅನಗೋಳ ಕನಕದಾಸ ಕಾಲೋನಿಗೇ ಭೇಟಿ ನೀಡಿ ಮರುಪ್ರತಿಷ್ಠಾಪನೆಗೊಂಡ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸಿ ಹಾಗೇ ಮಾಧ್ಯಮದವರೊದಿಗೆ ಮಾತನಾಡಿದ ಮಾಜಿ ಸಿದ್ದರಾಮಯ್ಯರವರು ಎಂ ಇ ಎಸ್ ಬ್ಯಾನ್ ಬಗ್ಗೆ ನಾನು ಚರ್ಚೆ ಮಾಡುತ್ತೆನೆ ಮೂರ್ತಿ ಧ್ವ0ಸಗೊಳಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ರಾಯಣ್ಣ ಯವುದೇ ಜಾತಿ , ಧರ್ಮಕ್ಕೆ ಸೇರಿದವರಲ್ಲ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ… […]

Advertisement

Wordpress Social Share Plugin powered by Ultimatelysocial