ಇಲ್ಲಿದೆ ಮಸಾಲೆ ಪದಾರ್ಥ ʼಲವಂಗʼದ ಪ್ರಯೋಜನ

 

ಅಡುಗೆಗೆ ಬಳಸುವ ಲವಂಗ ವಿವಿಧ ಔಷಧಿ ಗುಣಗಳನ್ನು ಹೊಂದಿದೆ. ಲವಂಗವನ್ನು ಅಡುಗೆಗೆ, ಹಲ್ಲುನೋವಿಗೆ ಬಳಸುವುದನ್ನು ಮಾತ್ರ ತಿಳಿದಿದ್ದೇವೆ.ಅತಿಯಾಗಿ ಸುಸ್ತಾದಾಗ ಸೋಮಾರಿತನ ಉಂಟಾಗುತ್ತದೆ, ಇದು ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಈ ಸಮಯದಲ್ಲಿ ಲವಂಗದ ಎಣ್ಣೆಯನ್ನು ಇತರ ಆರೋಗ್ಯಕರ ಪಾನಿಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸುವುದರಿಂದ ಸುಸ್ತು ದೂರವಾಗುತ್ತದೆ ಮತ್ತು ನಮ್ಮಲ್ಲಿ ಚೈತನ್ಯ ಮೂಡುತ್ತದೆ.ಲವಂಗದ ಎಣ್ಣೆಯನ್ನು ನೀರಿಗೆ ಬೆರೆಸಿ ಮನೆಯ ತುಂಬಾ ಚಿಮುಕಿಸುವುದರಿಂದ ಮನೆ ಸುಗಂಧ ಭರಿತವಾಗಿ ಇರುತ್ತದೆ.ಅಡುಗೆ ಮನೆಯಲ್ಲಿ ಕೆಟ್ಟ ವಾಸನೆ ತುಂಬಿದ್ದರೆ ನೀರಿನಲ್ಲಿ ಲವಂಗ ಹಾಕಿ ಕುದಿಸಿ ನೀರು ಆವಿ ಮಾಡಬೇಕು. ಇದರಿಂದ ದುರ್ಗಂಧ ದೂರವಾಗುತ್ತದೆ. ತೆಗೆದಿಡುವ ಪ್ಲಾಸ್ಕ್ ನೊಳಗೆ ಲವಂಗ ಹಾಕಿಟ್ಟರೆ ತೆರೆಯುವಾಗ ಸುವಾಸನೆ ಬೀರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆಯಲ್ಲಿ ಚರ್ಮದ ಕಾಳಜಿ ಹೀಗಿರಲಿ

Sat Mar 5 , 2022
ಬೇಸಿಗೆಯಲ್ಲಿ ತ್ವಚೆ ಅಥವಾ ಚರ್ಮದ ಕಾಳಜಿ ವಹಿಸದಿದ್ದರೆ, ಸನ್ ಟ್ಯಾನ್‌, ಚರ್ಮದ ಡೀಹೈಡ್ರೇಷನ್‌, ಬೆವರು ಹಾಗೂ ದೂಳಿನ ಅಲರ್ಜಿಯಂತಹ ಸಮಸ್ಯೆ ಕಾಡುತ್ತದೆ. ಜೊತೆಗೆ, ಅಂದವೂ ಕೆಡುತ್ತದೆ. ಈ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ತ್ವಚೆಯ ರಕ್ಷಣೆಗಾಗಿ ಸಿಕ್ಕ, ಸಿಕ್ಕ ಕ್ರೀಮ್‌ಗಳ ಮೊರೆ ಹೋಗುತ್ತಾರೆ.   ಹಾಗೆ ಮಾಡುವುದರ ಬದಲಿಗೆ, ಬೇಸಿಗೆ ಆರಂಭವಾದ ಕೂಡಲೇ ಚರ್ಮದ ಕಾಳಜಿ ಮಾಡಿದರೆ ಸಾಕು. ಹಾಗಾದರೆ, ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿದೆ ಕೆಲವೊಂದು ಟಿಪ್ಸ್‌; ಸನ್‌ಸ್ಕ್ರೀನ್ ಬಳಕೆ […]

Advertisement

Wordpress Social Share Plugin powered by Ultimatelysocial