ಸಾರ್ವಜನಿಕ ಸ್ಥಳದಲ್ಲಿ ಅಲೀಗಡದ 300 ವರ್ಷ ಹಳೆಯ ಮಸೀದಿ: ಆರ್‌ಟಿಐಯಲ್ಲಿ ಬಹಿರಂಗ…!

 

ಅಲೀಗಡ: ಉತ್ತರ ಪ್ರದೇಶದ ಅಲೀಗಡ ಜಿಲ್ಲೆಯ ಅಪ್ಪರ್‌ಕೋಟ್ ಪ್ರದೇಶದಲ್ಲಿರುವ ಮಸೀದಿಯನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಮಾಹಿತಿ ಹಕ್ಕು ಕಾಯ್ದೆ (ಆಟಿಐ) ಅರ್ಜಿಗೆ ದೊರೆತ ಉತ್ತರದಿಂದ ತಿಳಿದುಬಂದಿದೆ. ಹೀಗಾಗಿ ಆ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು ಆಗ್ರಹಿಸಿದ್ದಾರೆ.

ಅಪ್ಪರ್‌ಕೋಟ್ ಪ್ರದೇಶದ ಜಾಮಾ ಮಸೀದಿ ಬಗ್ಗೆ ಆರ್‌ಟಿಐ ಕಾರ್ಯಕರ್ತ ಕೇಶವ್ ದೇವ್ ಶರ್ಮಾ ಎಂಬುವವರು ಅಲೀಗಡ ನಗರಪಾಲಿಕೆಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ಪಾಲಿಕೆ, 300 ವರ್ಷಗಳ ಹಳೆಯ ಮಸೀದಿ ಸಾರ್ವಜನಿಕ ಜಾಗದಲ್ಲಿದೆ ಎಂದು ಮಾಹಿತಿ ನೀಡಿತ್ತು.

‘ಜಾಮಾ ಮಸೀದಿಯೇ ಆಗಿರಲಿ ಬೇರೆ ಏನೇ ಆಗಿರಲಿ, ಅಕ್ರಮ ಅಕ್ರಮವೇ. ಅದನ್ನು ತೆರವುಗೊಳಿಸಬೇಕು. ಆರ್‌ಟಿಐ ಅಡಿ ದೊರೆತ ಮಾಹಿತಿ ಸಮಂಜಸವಾಗಿದೆ. ನಗರಪಾಲಿಕೆಯೂ ಮಸೀದಿ ಅಕ್ರಮವೆಂದು ಹೇಳಿದೆ. ಹೀಗಾಗಿ ಅದನ್ನು ಧ್ವಂಸಗೊಳಿಸುವುದೇ ಮುಂದಿನ ಹೆಜ್ಜೆ’ ಎಂದು ಬಿಜೆಪಿ ನಾಯಕಿ ಶಕುಂತಲಾ ಭಾರತಿ ಹೇಳಿದ್ದಾರೆ.

ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ. ಆರ್‌ಟಿಐ ಅಡಿ ದೊರೆತಿರುವ ಮಾಹಿತಿ, ಸತ್ಯಾಂಶ ಪರಿಗಣಿಸಬೇಕು. ನಗರಪಾಲಿಕೆ ಹೇಳುತ್ತಿರುವುದನ್ನು ಪರಿಗಣಿಸಿ ಶೀಘ್ರವೇ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಒಂದು ಯಾರಾದ್ರೂ ನಿನ್ನ ಬಯೋಪಿಕ್ ಮಾಡ್ತಾರೆ': ಸುಶಾಂತ್ ಸಿಂಗ್ ರಜಪೂತ್ ನೆನೆದ ಕಿಯಾರಾ!

Sun May 15 , 2022
  ಕಿಯಾರಾ ಅಡ್ವಾಣಿ ಭಾರತದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ. ಕಿಯಾರಾ ಅಡ್ವಾಣಿ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದರೂ, ದಕ್ಷಿಣ ಭಾರತೀಯರ ತುಂಬಾನೇ ಚಿರಪರಿಚಿತ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ ‘ಭರತ್ ಅನೇ ನೇನು’ ಸಿನಿಮಾದಲ್ಲಿ ನಟಿಸಿದ್ದರು. ಈಗ ರಾಮ್ ಚರಣ್ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಿಯಾರಾ ಅಡ್ವಾಣಿ ಈಗ ಬಿಡುಗಡೆಗೆ ಸಜ್ಜಾಗಿರುವ ಬಾಲಿವುಡ್‌ ಸಿನಿಮಾ ‘ಭೂಲ್ ಭುಲಯ್ಯ 2’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ ಯುವನಟ ಕಾರ್ತಿಕ್ ಆರ್ಯನ್ ಈ […]

Advertisement

Wordpress Social Share Plugin powered by Ultimatelysocial